Advertisement

370 ವಿಧಿ ರದ್ದು ಸಾಧನೆ

10:30 AM Oct 15, 2019 | sudhir |

ಚಂಡೀಗಢ/ಕೊಲ್ಹಾಪುರ: ದೇಶದ ಹಿಂದಿನ ಪ್ರಧಾನಿಗಳಿಗೆ ಹೋಲಿಕೆ ಮಾಡಿದರೆ ಸದ್ಯ 56 ಇಂಚಿನ ಎದೆಯುಳ್ಳ ಪ್ರಧಾನಿ ಬಲು ದೊಡ್ಡ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರವಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೆ2àಷ ಸ್ಥಾನ ಹಿಂಪಡೆದದ್ದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ. ಹಿಂದಿನ ಯಾವುದೇ ಪ್ರಧಾನಿಗಳು ಈ ಬಗ್ಗೆ ಧೈರ್ಯವನ್ನೇ ಮಾಡಿರಲಿಲ್ಲ ಎಂದು ಕೊಂಡಾಡಿದ್ದಾರೆ. ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರು ಮತ ಕೇಳಲು ಬಂದ ಸಂದರ್ಭದಲ್ಲಿ ಎನ್‌ಡಿಎ ಸರಕಾರ ಕೈಗೊಂಡ ನಿರ್ಧಾರವನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ.

Advertisement

ಮಹಾರಾಷ್ಟ್ರ ಮತ್ತು ದೇಶದ ಜನರು ನರೇಂದ್ರ ಮೋದಿಯವರ ನೇತೃತ್ವದ ಸರಕಾರವನ್ನು ಎರಡನೇ ಬಾರಿಗೆ ಬಹುಮತದಿಂದ ಆಯ್ಕೆ ಮಾಡಿದಾಗ 70 ವರ್ಷಗಳಿಂದ ದೇಶದ ಜನರು ಕಾಯುತ್ತಿದ್ದ ಪ್ರಮುಖ ನಿರ್ಧಾರ ಕೈಗೊಂಡರು. ಅದುವೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯ ಅನ್ವಯ ನೀಡಲಾಗಿದ್ದ ವಿಶೇಷ ಮಾನ್ಯತೆ ರದ್ದು ಮಾಡಿರುವುದು. ಈ ಮೂಲಕ ಕಣಿವೆ ರಾಜ್ಯ ದೇಶದ ಇತರ ರಾಜ್ಯಗಳ ಜತೆಗೆ ಸಮ್ಮಿಳನವಾಗುವಂತೆ ಮಾಡಿದ್ದಾರೆ’ ಎಂದರು.

ಜನ ಸಂಘದ ಕಾಲದಿಂದಲೇ ಒಂದು ದೇಶಕ್ಕೆ ಇಬ್ಬರು ಪ್ರಧಾನಮಂತ್ರಿಗಳು ಇರಲು ಸಾಧ್ಯವೇ ಇಲ್ಲ ಎಂಬ ವಾದ ಮಂಡಿಸಲಾಗುತ್ತಿತ್ತು. ಆದರೆ ಕಾಂಗ್ರೆಸ್‌ 370ನೇ ವಿಧಿಯನ್ನು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗಗಳಂತೆ ವಿಲೀನ ಮಾಡುವ ಪ್ರಕ್ರಿಯೆನ್ನು ತಡೆ ಹಿಡಿದಿತ್ತು. ಆದರೆ 56 ಇಂಚಿನ ಎದೆಯುಳ್ಳ ವ್ಯಕ್ತಿ (ನರೇಂದ್ರ ಮೋದಿ) ಅದನ್ನು ಒಂದೇ ಹಂತದಲ್ಲಿ ರದ್ದು ಮಾಡಿದರು. ಯುಪಿಎ ಅವಧಿಯಲ್ಲಿ ಉಗ್ರಗಾಮಿಗಳು ಎಲ್‌ಒಸಿ ಮೂಲಕ ನುಗ್ಗಿ ಸೈನಿಕರನ್ನು ಹತ್ಯೆ ಮಾಡುತ್ತಿದ್ದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸರಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಅಮಿತ್‌ ಶಾ.
ಮೌನ ವಹಿಸುತ್ತಿದ್ದ ಸಿಂಗ್‌: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಸೈನಕರನ್ನು ಹತ್ಯೆ ಮಾಡುತ್ತಿದ್ದಾಗ ಪ್ರಧಾನಿಯಾಗಿದ್ದ ಡಾ| ಮನಮೋಹನ್‌ ಸಿಂಗ್‌ ಒಂದೇ ಒಂದು ಖಂಡನಾತ್ಮಕ ಮಾತುಗಳನ್ನು ಆಡುತ್ತಿರಲಿಲ್ಲ. ಆದರೆ ಉರಿ, ಪುಲ್ವಾಮಾಗಳಲ್ಲಿ ದಾಳಿ ನಡೆದಾಗ ಸರ್ಜಿಕಲ್‌ ದಾಳಿ ಮೂಲಕ ಭಯೋತ್ಪಾದಕರಿಗೆ ಸರಿಯಾದ ಪಾಠವನ್ನು ಮೋದಿ ಕಲಿಸಿದರು ಎಂದರು.

ಹನಿ ನೀರು ಬರಲಿಲ್ಲ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ನೇತೃತ್ವದ ಸರಕಾರ ಇದ್ದಾಗ ನೀರಾವರಿ ಯೋಜನೆಗಳಿಗೆ 70 ಸಾವಿರ ಕೋಟಿ ರೂ. ವೆಚ್ಚ ಮಾಡಲಾಯಿತು. ಆದರೆ ರೈತರ ಜಮೀನಿಗೆ ಒಂದೇ ಒಂದು ಹನಿ ನೀರು ಹರಿಯಲಿಲ್ಲ. ಬಿಜೆಪಿ-ಶಿವಸೇನೆ ನೇತೃತ್ವದ ಸರಕಾರ ಐದು ವರ್ಷಗಳ ಅವಧಿಯಲ್ಲಿ ನೀರಿನ ಉಳಿಕೆ ಯೋಜನೆ ವ್ಯಾಪ್ತಿಯಲ್ಲಿ 11 ಸಾವಿರ ಗ್ರಾಮಗಳಿಗೆ ನೀರು ಹರಿಸಲಾಗಿದೆ. ಅದಕ್ಕೆ ವೆಚ್ಚ ಮಾಡಿದ್ದು ಕೇವಲ 9 ಸಾವಿರ ಕೋಟಿ ರೂ. ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

15 ವರ್ಷದ ಎನ್‌ಸಿಪಿ-ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಾರಾಷ್ಟ್ರದ ಕ್ರಮಾಂಕ ಕುಸಿದಿತ್ತು. ಆದರೆ ಹಾಲಿ ಸರಕಾರದ ಅವಧಿಯಲ್ಲಿ ಕೃಷಿ, ಹೈನುಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಾರಾಷ್ಟ್ರದ ಮೊದಲ ಐದು ಸ್ಥಾನಗಳಲ್ಲಿದೆ ಎಂದು ಶ್ಲಾ ಸಿದರು.

Advertisement

ಬಡ್ಡಿ ರಹಿತ ಸಾಲ: ಬಿಜೆಪಿ ಘೋಷಣೆ
ಹರ್ಯಾಣದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಎಸ್‌ಸಿ ಸಮುದಾಯಕ್ಕೆ 3 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಬಿಜೆಪಿ ಘೋಷಣೆ ಮಾಡಿದೆ. ಚಂಡೀಗ ಢ ದಲ್ಲಿ ರವಿವಾರ ಬಿಡುಗಡೆ ಮಾಡಲಾಗಿರುವ ಸಂಕಲ್ಪ ಪತ್ರದಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಇದರ ಜತೆಗೆ ರೈತ ರಿಗೂ 3 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡುವುದರ ಬಗ್ಗೆ ವಾಗ್ಧಾನ ಮಾಡಲಾಗಿದೆ. ವೃದ್ಧರಿಗೆ 3 ಸಾವಿರ
ರೂ. ಪಿಂಚಣಿ, ಹರ್ಯಾಣವನ್ನು ಟಿ.ಬಿ.ರಹಿತ ರಾಜ್ಯವ ನ್ನಾಗಿ ಮಾಡುವುದು, 1 ಸಾವಿರ ಕ್ರೀಡಾ ನರ್ಸರಿ, 2 ಸಾವಿರ ಆರೋಗ್ಯ ಮತ್ತು ಪಾಲನಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸಂಕಲ್ಪ ಪತ್ರದಲ್ಲಿ ಘೋಷಣೆ ಮಾಡಲಾಗಿದೆ.

ಸಿಎಂಗಳ ಪ್ರಚಾರ
ಅ.21ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಉತ್ತರ ಪ್ರದೇಶ ಮತ್ತು ಗೋವಾ ಮುಖ್ಯಮಂತ್ರಿಗಳಾಗಿರುವ ಕ್ರಮವಾಗಿ ಯೋಗಿ ಆದಿತ್ಯನಾಥ್‌, ಡಾ| ಪ್ರಮೋದ್‌ ಸಾವಂತ್‌ ಪ್ರಚಾರಕ್ಕೆ ಆಗಮಿಸಿದ್ದಾರೆ. ಯೋಗಿ ಆದಿತ್ಯನಾಥ್‌ ಔರಂಗಾಬಾದ್‌ನಲ್ಲಿ ಪ್ರಚಾರ ನಡೆಸಿದರೆ, ಗೋವಾ ಸಿಂಗ್‌ ಮುಂಬೈನ ಮರೀನ್‌ ಡ್ರೈವ್‌ನಲ್ಲಿ ಪ್ರಚಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next