Advertisement

ಸದ್ಯಕ್ಕೆ ಎಸ್ಮಾ ಜಾರಿ ಇಲ್ಲ; ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ: ಗೃಹ ಸಚಿವರ ಮನವಿ

03:52 PM Dec 12, 2020 | sudhir |

ಬೆಂಗಳೂರು : ನಷ್ಟದ ಸಂದರ್ಭದಲ್ಲಿ ಸರಕಾರ ನೌಕರರ ಪರವಾಗಿತ್ತು ಈಗಲೂ ನೌಕರರ ಪರವಾಗಿದೆ ಕೋವಿಡ್ ಕಾಲದಲ್ಲಿ ನೌಕರರ ಬೇಡಿಕೆ ಈಡೇರಿಸುವುದು ಕಷ್ಟದ ಕೆಲಸ ಮೊದಲು ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ಸಿಎಂ ಸರಕಾರಿ ನಿವಾಸ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರ ಯಾವತ್ತೂ ನೌಕರರ ಕಷ್ಟದ ಜೊತೆಗೆ ಇದೆ ಅಲ್ಲದೆ ಸಾರಿಗೆ ಸಚಿವರು ಈ ವಿಚಾರದಲ್ಲಿ ನಿರ್ಲಕ್ಷ ತೋರಿಲ್ಲ ಬೆಳಿಗ್ಗೆಯಿಂದಲೇ ನಿರಂತರವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ, ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಬಹುತೇಕ ನೌಕರರು ಗೈರಾಗಿದ್ದರೆ ಎಂದರು.

ಸಾರಿಗೆ ನೌಕರರು ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ ಆದರೆ ಕೆಲವರು ಈಗ ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರಬಹುದು ಎಸ್ಮಾ ಜಾರಿಯ ಪರಿಸ್ಥಿತಿ ಇನ್ನೂ ಬಂದಿಲ್ಲ, ನೌಕರರರಿಗೂ ಜನರ ಕಷ್ಟ ಏನೆಂದು ಗೊತ್ತಾಗಿದೆ, ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಇದನ್ನೂ ಓದಿ:ಕೊಡಪಾನದ ಒಳಗೆ ಮೂಗು ತೂರಿಸಲು ಹೋಗಿ ತಲೆ ಸಿಲುಕಿಕೊಂಡು ಒದ್ದಾಡಿದ ಬೀದಿ ನಾಯಿ

Advertisement

Udayavani is now on Telegram. Click here to join our channel and stay updated with the latest news.

Next