Advertisement

 ಕಾರ್ಕಳದಲ್ಲಿ ಮನೆ-ಮನ ಆಂದೋಲನ: ಡಿಸಿ, ಎಸ್‌ಪಿ, ಸಿಇಒ ಭಾಗಿ

10:59 PM Jan 27, 2020 | Sriram |

ಕಾರ್ಕಳ: ಎಸೆಸೆಲ್ಸಿ ವಿದ್ಯಾರ್ಥಿಗಳ ಸಂಪೂರ್ಣ ಉತ್ತೀರ್ಣ ಆಂದೋಲನದ ಅಂಗವಾಗಿ ಜ. 27ರಂದು ಬೆಳಗಿನ ಜಾವ 5ರಿಂದ 6.30ರ ವರೆಗೆ ಮನೆ-ಮನ ಆಂದೋಲನ ನಡೆಯಿತು.

Advertisement

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್‌ ಸಿಇಒ, ವಿದ್ಯಾಂಗ ಉಪನಿರ್ದೇಶಕರು, ಸ್ಥಳೀಯ ಶಾಸಕರು, ವಿಧಾನ ಪರಿಷತ್‌ ಮಾಜಿ ಸದಸ್ಯರು, ಕಾರ್ಕಳದಲ್ಲಿನ ವಿವಿಧ ಕ್ಷೇತ್ರಗಳ ಗಣ್ಯರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಧುರೀಣರು, ಉದ್ಯಮಿಗಳು, ಎಲ್ಲ ಸ್ತರದ ಜನಪ್ರತಿನಿಧಿಗಳು ಕನಿಷ್ಠ 5ರಿಂದ ಗರಿಷ್ಠ 10 ಮನೆಗಳಿಗೆ ಏಕಕಾಲದಲ್ಲಿ ಭೇಟಿ ನೀಡುವ ಮೂಲಕ ವಿನೂತನ, ಅಪೂರ್ವ ಆಂದೋಲನವಾಗಿ ಸ್ಮರಣೀಯಗೊಳಿಸಿ ಮಿಷನ್‌ ಹಂಡ್ರಡ್‌ ಯೋಜನೆ ಮತ್ತಷ್ಟು ಪರಿಣಾಮಕಾರಿಗೊಳಿಸಿದರು.

554 ಮನೆಗಳಿಗೆ ಭೇಟಿ
ಶಾಸಕ ವಿ. ಸುನಿಲ್‌ ಕುಮಾರ್‌ ಹಾಗೂ ಬಿಇಒ ಶಶಿಧರ್‌ ಜಿ.ಎಸ್‌. ಅವರ ನೇತೃತ್ವದಲ್ಲಿ ಒಂದೇ ದಿನ ಸುಮಾರು 554 ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಉತ್ತಮ ಅಂಕ ಗಳಿಸುವಂತೆ ಪ್ರೋತ್ಸಾಹಿಸುವ ಕಾರ್ಯ ಮಾಡಲಾಯಿತು.ಶಿಕ್ಷಕರು ಆಂದೋಲನದಲ್ಲಿ ಅತ್ಯಂತ ಉತ್ಸಾಹದಿಂದಲೇ ಭಾಗವಹಿಸಿದ್ದು, 22 ನೋಡೆಲ್‌ ಅಧಿಕಾರಿಗಳು ಯೋಜನೆ ಹಿಂದೆ ಕಾರ್ಯನಿರ್ವಹಿಸಿದ್ದರು.ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಜಿ.ಪಂ. ಸಿಇಒ ಪ್ರೀತಿ ಗೆಹೊÉàಟ್‌, ವಿದ್ಯಾಂಗ ಉಪ ನಿರ್ದೇಶಕ ಶೇಷಶಯನ ಕಾರಿಂಜ,ವಿಧಾನ ಪರಿಷತ್‌ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್‌, ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಮೇ| ಹರ್ಷ ಕೆ.ಬಿ., ನೋಡಲ್‌ ಅಧಿಕಾರಿಗಳಾದ ವೆಂಕಟರಮಣ ಕಲ್ಕೂರ್‌, ಗುಬ್ಬಚ್ಚಿ ನ್ಪೋಕನ್‌ ಇಂಗ್ಲಿಷ್‌ ಮತ್ತು ಪೆರ್ಮೆದ ಸ್ವರ್ಣ ಕಾರ್ಲ ನೋಡಲ್‌ ಅಧಿಕಾರಿಗಳಾದ ರತ್ನಾಕರ್‌ ಹಾಗೂ ಸಂತೋಷ್‌ ಕುಮಾರ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ, ತಾಲೂಕು ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಜಿ.ಪಂ. ಸದಸ್ಯರಾದ ಸುಮಿತ್‌ ಶೆಟ್ಟಿ ಕೌಡೂರು, ರೇಷ್ಮಾ ಉದಯ್‌ ಕುಮಾರ್‌, ದಿವ್ಯಾಶ್ರೀ ಅಮೀನ್‌, ಜ್ಯೋತಿ ಹರೀಶ್‌, ಉದಯ ಕೋಟ್ಯಾನ್‌ ಪಾಲ್ಗೊಂಡರು.

ಅಭಿನಂದನೀಯ
ಎಸೆಸೆಲ್ಸಿ ವಿದ್ಯಾರ್ಥಿಗಳ ಫ‌ಲಿತಾಂಶ ವೃದ್ಧಿಗಾಗಿ ಶಾಸಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಳಜಿ ಹಾಗೂ ಪ್ರಯತ್ನ ಅತ್ಯಂತ ಶ್ಲಾಘನೀಯವಾದುದು. ಹಾಗೆಯೇ ಈ ಆಂದೋಲನದಲ್ಲಿ ಊರಿನ ಮಹನೀಯರು ಹಾಗೂ ಎಲ್ಲ ಶಿಕ್ಷಕರೂ ಸ್ವಯಂಪ್ರೇರಿತರಾಗಿ ಭಾಗಿಯಾಗಿರುವುದು ಅಭಿನಂದನೀಯ.
-ನಾರಾಯಣ ಶೆಣೈ,
ಪೋಷಕರು

ಸ್ಪಂದನೆ
ಶಾಸಕರ ಧ್ಯೇಯ ಸ್ವರ್ಣ ಕಾರ್ಲ, ಸ್ವತ್ಛ ಕಾರ್ಕಳಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆಯಿಂದ ಪೂರಕ ಚಟುವಟಿಕೆ ಮಾಡಲಾಗುತ್ತಿದೆ. ಕಾರ್ಕಳ ತಾಲೂಕಿನ 2,657 ಮಂದಿ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕೆಂಬ ನಿಟ್ಟಿನಲ್ಲಿ ಹಮ್ಮಿಕೊಂಡ ಆಂದೋಲನಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ.
-ಶಶಿಧರ್‌ ಜಿ.ಎಸ್‌.,
ಕ್ಷೇತ್ರ ಶಿಕ್ಷಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next