Advertisement
RLLR ಒಂದು ಬಾಹ್ಯ ಮಟ್ಟವನ್ನು ಆಧರಿಸಿ ಲೆಕ್ಕ ಹಾಕುವ ಬಡ್ಡಿ ದರ ಪದ್ಧತಿ. ಹಾಗಾಗಿ ಸ್ಪೆಷಲ…! ಇದುವರೆಗೆ ಬ್ಯಾಂಕುಗಳಲ್ಲಿ ಇದ್ದಿದ್ದು ಆಂತರಿಕ ಮಟ್ಟವನ್ನು ಆಧರಿಸಿ ಅಂತಿಮ ಬಡ್ಡಿ ದರ ನಿಗದಿಪಡಿಸುವ ಪದ್ಧತಿ. ಈ ಆಂತರಿಕ ಪದ್ಧತಿಯು PLR, Base rate ಹಾಗೂ MCLR ಎಂಬ ಮುಖ್ಯ ಮೂರು ಪದ್ಧತಿಗಳನ್ನು ಹಾದು ಬಂದಿದೆ. ಒಂದರಿಂದ ಒಂದು ಉತ್ತಮವಾಗುತ್ತಾ ಬಂದಿದ್ದರೂ ಆರ್.ಬಿ.ಐ. ನಿಗದಿ ಮಾಡುತ್ತಿದ್ದ ರಿಪೊ ಬಡ್ಡಿದರದ ಕಡಿತಗಳು ಸಂಪೂರ್ಣವಾಗಿ ತಕ್ಷಣ ಗ್ರಾಹಕರಿಗೆ ಮುಟುತ್ತಿಲ್ಲ ಎನ್ನುವುದು ಗ್ರಾಹಕರ ಖಾಯಂ ದೂರು ಆಗಿತ್ತು. ಏರಿಕೆ ಮಾತ್ರ ಆ ಕೂಡಲೇ ವರ್ಗಾವಣೆಯಾಗುತ್ತಿತ್ತು ಎನ್ನುವ ಟ್ಯಾಗ್‌ಲೈನ್ ಜೊತೆಗೆ. ಇದಕ್ಕೆ ಕಾರಣ ಅರ್.ಬಿ.ಐ.ಯ ರಿಪೊ ದರಕ್ಕೂ ಬ್ಯಾಂಕಿನ ಆಂತರಿಕ ದರಕ್ಕೂ ಇರುವ ವ್ಯತ್ಯಾಸವೇ ಆಗಿತ್ತು. ಯಾವುದೇ ಪದ್ಧತಿ ತಂದರೂ ಬ್ಯಾಂಕಿನ ಆಂತರಿಕ ದರ ರಿಪೊ ಜೊತೆಗೆ ಹೊಂದಾಣಿಕೆ ಆಗುತ್ತಲೇ ಇರಲಿಲ್ಲ. ಹಾಗಾಗಿ ಈಗ ಆರ್. ಬಿ.ಐ.ಯು ಅದ್ಯಾವ ತಲೆನೋವೂ ಕೂಡಾ ಬೇಡ ಎಂದು ಅದು ಘೋಷಿಸುವ ರಿಪೊ ರೇಟನ್ನು ಯಥಾವತ್ತಾಗಿ ಎತ್ತಿಕೊಂಡು ಅದರ ಆಧಾರದಲ್ಲಿಯೇ ಹೌಸ್‌ಲೋನಿನ ಬಡ್ಡಿದರವನ್ನು ನಿಗದಿ ಪಡಿಸಬೇಕು ಎನ್ನುವ ಕಾನೂನು ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಬಡ್ಡಿದರಗಳು ಸುಲಭವಾಗಿ ಅರ್ಥವಾಗುವಂತಿದ್ದು ಅರ್.ಬಿ.ಐ. ರಿಪೊ ದರಗಳನ್ನು ಸಂಪೂರ್ಣವಾಗಿ ಪ್ರತಿಫಲಿಸಲಿದೆ.
ಬ್ಯಾಂಕು ತನ್ನ ಎÇÉಾ ಸಾಲಗಳ ಮೇಲೆ ವಿಧಿಸುವ ಬಡ್ಡಿದರಗಳೂ ಈ ಪಿಎಲ್ಆರ್/ಬೇಸ್ ರೇಟ್/ಎಮ್.ಸಿ.ಎಲ್ಆರ್ (ಅಥವಾ ಈಗ ಗೃಹ ಸಾಲಕ್ಕೆ ರಿಪೊ ರೇಟ್) ದರವನ್ನು ಅನುಸರಿಸುತ್ತದೆ. ಉದಾಹರಣೆಗೆ ಗೃಹಸಾಲಕ್ಕೆ ರಿಪೋ ದರ +4%, ವಿದ್ಯಾ ಸಾಲಕ್ಕೆ ಪಿಎಲ್ಆರ್ -1.5%, ವಾಹನ ಸಾಲಕ್ಕೆ ಎಮ್ ಸಿಎಲ್ಆರ್ +3%, ಇತ್ಯಾದಿ. ಅಂದರೆ ಮೂಲ ದರಕ್ಕೆ ಇಂತಿಷ್ಟು ಕೂಡಿ ಅಥವಾ ಇಂತಿಷ್ಟು ಕಳೆದು ವಿವಿಧ ಸಾಲಗಳ ಹೊಸ ಬಡ್ಡಿ ನಿಗದಿಯಾಗುತ್ತದೆ. ಈ ಕೂಡು ಅಥವಾ ಕಳೆಯುವ ಭಾಗವನ್ನು ಸ್ಪ್ರೆಡ್ ಅನ್ನುತ್ತಾರೆ. ಅಂದರೆ ಒಂದು ಸಾಲದ ಬಡ್ಡಿ ದರದಲ್ಲಿ ಮೂಲ ದರ ಮತ್ತು ಸ್ಪ್ರೆಡ್ ಎಂಬ 2 ಭಾಗಗಳು ಇವೆ ಎಂದರ್ಥ. ಈ ಸ್ಪ್ರೆಡ್ ಎಂಬುದು ಬ್ಯಾಂಕಿನ ಆಡಳಿತಾತ್ಮಕ ವೆಚ್ಚ ಹಾಗೂ ಸಾಲ ನೀಡುವಲ್ಲಿ ತೆಗೆದುಕೊಳ್ಳುವ ರಿಸ್ಕ್ ಮೇಲಿನ ಪ್ರೀಮಿಯಂನ್ನು ಒಳಗೊಂಡಿರುತ್ತದೆ. ಇವೆರಡೂ ಸೇರಿ ನಿಮಗೆ ನಮೂದಿಸಿದ ಅಂತಿಮ ಬಡ್ಡಿ ದರ ಸಿಗುತ್ತದೆ.
ಅಂದರೆ,
ಸಾಲದ ಬಡ್ಡಿದರ = ರಿಪೊ ದರ+ಸ್ಪ್ರೆಡ್.
ಇಲ್ಲಿ ರಿಪೊ ರೇಟ್ ಎಲ್ಲಾ ಬ್ಯಾಂಕುಗಳಿಗೂ ಸಮಾನವಾಗಿ ಅನ್ವಯವಾಗುತ್ತಾದರೂ ಸ್ಪ್ರೆಡ್ ಭಾಗ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಹಾಗಾಗಿ RLLR ಬಂದ ಮೇಲೂ ಎಲ್ಲಾ ಬ್ಯಾಂಕುಗಳೂ ಒಂದೇ ಬಡ್ಡಿ ದರ ಚಾರ್ಜ್ ಮಾಡುತ್ತವೆ ಎಂದು ಭಾವಿಸಬಾರದು. ಸದ್ಯ ವಿವಿಧ ಬ್ಯಾಂಕುಗಳು 3% ದಿಂದ 4% ವರೆಗೆ ತಮ್ಮ ಸ್ಪ್ರೆಡ್ ಘೋಷಿಸಿವೆ. ಮುಂದಿನ ಹೆಜ್ಜೆ
ಹೊಸ RLLR ಪದ್ಧತಿ ಹೊಸ ಸಾಲಕ್ಕೆ ಮಾತ್ರ ಅನ್ವಯ ವಾಗುತ್ತದೆ. ಹಳೆಯ ಕರಾರು ಪ್ರಕಾರ ಬೇಸ್ ರೇಟ್/ಎಂಸಿಎಲ…ಆರ್ ಪದ್ಧತಿಯಲ್ಲಿ ಇರುವವರು ಹಾಗೆಯೇ ಮುಂದುವರಿ ಯುತ್ತಾರೆ. ಏಕೆಂದರೆ ಅದು ಕರಾರು. ಆದರೆ ಸಾಮಾನ್ಯವಾಗಿ ಎÇÉಾ ಬ್ಯಾಂಕುಗಳೂ ನಿಮ್ಮ ಕಳೆಯ ಕರಾರು ಮುರಿದು ಹೊಸ ಕರಾರಿನೊಂದಿಗೆ ಹೊಸ ರಿಪೊ ಪದ್ಧತಿಗೆ ಹೊರಳುವ ಆಯ್ಕೆಯನ್ನು ನಿಮಗೆ ಕೊಟ್ಟೇ ಕೊಡುತ್ತಾರೆ. ಈ ಬಗ್ಗೆ ವಿವರಗಳು ಈಗಾಗಲೇ ಬರತೊಡಗಿವೆ. ಆದರೆ ಎÇÉಾ ಕಡೆಯೂ ಈ ರೀತಿಯ ಸ್ವಿಚ್ ಮಾಡಲು ಬಾಕಿ ಸಾಲದ ಮೊತ್ತದ ಮೇಲೆ ಸ್ವಿಚ್ಚಿಂಗ್ ಚಾರ್ಜ್ ವಿಧಿಸುತ್ತಾರೆ. (ಸುಮಾರು 0.25%-0.5% ಇರಬಹುದು). ಅಲ್ಲದೆ ಒಂದು ಬ್ಯಾಂಕಿನ ಸಾಲವನ್ನು ಇನ್ನೊಂದು ಕಡಿಮೆ ಬಡ್ಡಿದರದ ಬ್ಯಾಂಕಿಗೆ ವರ್ಗಾವಣೆ ಮಾಡಲೂ ಸಾಧ್ಯ. ಅದಕ್ಕೂ ವೆಚ್ಚಗಳಿವೆ. ಈ ಹೆಚ್ಚುವರಿ ವೆಚ್ಚವನ್ನು ನಿಮ್ಮ ಒಟ್ಟು ಬಡ್ಡಿ ಉಳಿತಾಯದ ಜೊತೆಗೆ ಹೋಲಿಕೆ ಮಾಡಿಯೇ ನಿರ್ಧಾರ ತೆಗೆದುಕೊಳ್ಳಿ.
Related Articles
ಪ್ರತಿ ಬಾರಿ ರಿಸರ್ವ್ ಬ್ಯಾಂಕು ಬಡ್ಡಿ ದರವನ್ನು ಬದಲಾಯಿಸಿದಾಗಲೂ ಬ್ಯಾಂಕುಗಳು ತಮ್ಮ ಬಡ್ಡಿವೆಚ್ಚವನ್ನು, ಆದಾಯ ವ್ಯಯಗಳನ್ನು ಲೆಕ್ಕ ಹಾಕಿ, ಅಗತ್ಯ ಬಂದರೆ ತಮ್ಮ ಮೂಲಭೂತ ಬಡ್ಡಿದರವನ್ನು ಬದಲಾಯಿಸುತ್ತವೆ. ಈ ರೀತಿಯ ತೂಕ ಆಧಾರಿತ (Weighted Average) ಮೂಲಭೂತ ದರವನ್ನು ಪ್ರೈಮ್ ಲೆಂಡಿಂಗ್ (ಪಿಎಲ್ಆರ್) ಎಂದು ಕರೆಯುತ್ತಾರೆ. ಪ್ರತಿಯೊಂದು ಬ್ಯಾಂಕಿಗೂ ಈ ರೀತಿಯಲ್ಲಿ ತನ್ನದೇ ಆದ ಪಿಎಲ…ಆರ್ ಇರುತ್ತದೆ ಹಾಗೂ ದೇಶದ ಬಡ್ಡಿ ವ್ಯವಸ್ಥೆ ಬದಲಾದಂತೆ ಬ್ಯಾಂಕಿನ ನಿರ್ಧಾರದ ಪ್ರಕಾರ ಬದಲಾಗುತ್ತದೆ. ಎÇÉಾ ಸಾಲಗಳ ಬಡ್ಡಿದರಗಳನ್ನು ಈ ಪ್ರೈಮ್ ಲೆಂಡಿಂಗ್ ರೇಟ್ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ. ಪಿಎಲ…ಆರ್ ಗಿಂತ ಇಂತಿಷ್ಟು ಜಾಸ್ತಿ ಅಥವಾ ಇಂತಿಷ್ಟು ಕಡಿಮೆ ಎಂಬಂತೆ ವಿವಿಧ ಸಾಲಗಳ ಬಡ್ಡಿ ದರಗಳನ್ನು ನಿಗದಿಪಡಿಸಲಾಗುತ್ತದೆ.
Advertisement
BASE Rate
ಬಳಿಕ ಬಂತು ಬೇಸ್ ರೇಟ್. ಬೇಸ್ ರೇಟ್ ಎನ್ನುವುದು ಒಂದು ಕನಿಷ್ಠ ದರ. ಬ್ಯಾಂಕುಗಳು ತಮ್ಮ ಎÇÉಾ ಮೂಲಗಳಿಂದಲೂ ಬರುವ ಧನರಾಶಿಯ ಮೇಲಿನ ಬಡ್ಡಿದರವನ್ನು ಸರಾಸರಿ ಲೆಕ್ಕ ಹಾಕಿ ಈ ಬೇಸ್ ರೇಟ್ ಅನ್ನು ಲೆಕ್ಕ ಹಾಕಲಾಗುತ್ತಿತ್ತು. ಆ ದರಕ್ಕಿಂತ ಕಡಿಮೆ ದರದಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಬಡ್ಡಿ ವಿಧಿಸುವಂತಿಲ್ಲ. ಬ್ಯಾಂಕಗಳು ಪೈಪೋಟಿಯಲ್ಲಿ ದರ ಇಳಿಸಿ ಗ್ರಾಹಕರಿಗೆ ಸಾಲ ನೀಡುತ್ತಿದ್ದ ಕಾಲದಲ್ಲಿ ಮೊದಲು ಇದ್ದ ಪ್ರೈಮ್ ಲೆಂಡಿಂಗ್ ರೇಟ್ ದರವನ್ನು ತೆಗೆದು ಹಾಕಿ ಈ ಬೇಸ್ ರೇಟ್ ದರವನ್ನು ತರಲಾಯಿತು. ಬೇಸ್ ರೇಟ್ ದರಕ್ಕೆ ಬ್ಯಾಂಕ್ ವೆಚ್ಚ ನಿಮಿತ್ತ ಒಂದಿಷ್ಟು ಸ್ಪ್ರೆಡ್ ಸೇರಿಸಿ ಅಂತಿಮ ಗ್ರಾಹಕರ ಬಡ್ಡಿ ದರವನ್ನು ಬ್ಯಾಂಕುಗಳು ನಿಗಧಿ ಮಾಡುತಿದ್ದವು. ಬೇಸ್ ರೇಟ್ ಎಂಬುದು ಕನಿಷ್ಠ ದರವನ್ನು ನಿಗದಿ ಮಾಡಲು ಯಶಸ್ವಿಯಾದರೂ ಕೂಡಾ ಅದರಲ್ಲೂ ಒಂದು ಸಮಸ್ಯೆ ಹಾಗೆಯೇ ಉಳಿದಿತ್ತು. ಅದೇನೆಂದರೆ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕಗಳಿಗೆ ಸಾಲ ನೀಡುವ ರಿಪೋ ದರ ಇಳಿಕೆಯಾದರೂ ಬೇಸ್ ರೇಟ್ ಅದೇ ಸಮಯಕ್ಕೆ ಅದೇ ಪ್ರಮಾಣಕ್ಕೆ ಇಳಿಕೆಯಾಗುತ್ತಿರಲಿಲ್ಲ. ಬ್ಯಾಂಕುಗಳು ತಮ್ಮ ಎÇÉಾ ಮೂಲದಿಂದ ಬಂದ ದುಡ್ಡಿನ ದರವನ್ನು ಸರಾಸರಿ ಮಾಡುವುದೇ ಇದಕ್ಕೆ ಕಾರಣ. ಹಾಗಾಗಿ ರಿಸರ್ವ್ ಬ್ಯಾಂಕ್ ಕಡಿತ ಮಾಡಿದರೂ ಅದು ಜನರನ್ನು ಸರಿಯಾಗಿ ತಲುಪುತ್ತಿರಲಿಲ್ಲ.
MCLRಈ ಸಮಸ್ಯೆಯನ್ನು ತಡೆಗಟ್ಟಲು ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ ಅನ್ನುವ ಹೊಸ ಪದ್ಧತಿಯನ್ನು ಆರಂಭಿಸಲಾಗಿದೆ. ಇಲ್ಲಿ ಸರಾಸರಿ ಇಲ್ಲ. ಮಾರ್ಜಿನಲ್ ಕಾಸ್ಟ್ ಪರಿಕಲ್ಪನೆ ಮಾತ್ರ – ಅಂದರೆ ಹೆಚ್ಚುವರಿ ವೆಚ್ಚ. ನಿಮಗೆ ಸದ್ಯಕ್ಕೆ ನೀಡಬೇಕಾದ ಸಾಲ ಬ್ಯಾಂಕುಗಳಿಗೆ ಯಾವ ದರಕ್ಕೆ ಸದ್ಯಕ್ಕೆ ಸಿಗುತ್ತದೋ ಅದೇ ದರವನ್ನು ನಿಮಗೆ ವಿಧಿಸಲಾಗುತ್ತದೆ. ಈ ಪದ್ಧತಿಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ಸಾಲಕ್ಕೆ ರಿಪೊ ರೇಟ್ ಇಳಿಸಿದಾಕ್ಷಣ ಅಥವಾ ಬ್ಯಾಂಕಗಳು ಬೇರಾವ ಮೂಲದಿಂದಲಾದರೂ ಹೆಚ್ಚುವರಿ ದುಡ್ಡು ಠೇವಣಿ ಪಡಕೊಂಡಾಗ (ಉದಾ: ಡಿಮೊನೆಟೈಸೇಶನ್) ಆ ದರವನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗುತ್ತದೆ. ಇಲ್ಲೂ ಬ್ಯಾಂಕ್ ವೆಚ್ಚ ಅನುಸಾರ ಸ್ಪ್ರೆಡ್ ಸೇರಿಸಲಾಗುತ್ತದೆ. ಆದರೆ ಪ್ರತಿ ದರವೂ ಒಂದು ನಿಗದಿತ ಅವಧಿಗೆ ಅನ್ವಯವಾಗುತ್ತದೆ. ಸರಾಸರಿ ತೆಗೆಯದೆ ನೇರವಾಗಿ ದರ ವರ್ಗಾವಣೆ ಮಾಡುವುದೇ ಇದಕ್ಕೆ ಕಾರಣ. ಇದು ಕೂಡಾ ರಿಪೋ ದರವನ್ನು ಸಂಪೂರ್ಣವಾಗಿ ವರ್ಗಾಯಿಸುವುದರಲ್ಲಿ ವಿಫಲವಾಗಿತ್ತು. – ಜಯದೇವ ಪ್ರಸಾದ ಮೊಳೆಯಾರ