Advertisement
∙ ಲಿಂಬೆ ರಸಕ್ಕೆ ಸಕ್ಕರೆ/ ಜೇನುತುಪ್ಪ ಹಾಕಿ, ಅಂಟಾದ ಆ ಮಿಶ್ರಣದಿಂದ ಮಸಾಜ್ ಮಾಡಿದರೆ ಮುಖದ ಮೇಲಿನ ರೋಮ ಉದುರುತ್ತದೆ.
Related Articles
Advertisement
∙ ಹಾಲಿನ ಕೆನೆ ಹಚ್ಚಿ, ಪ್ರತಿನಿತ್ಯ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.
∙ ಪಪಾಯ ಹಣ್ಣಿನ ರಸದಿಂದ ಫೇಶಿಯಲ್ ಮಾಡಿಕೊಳ್ಳಬಹುದು.
∙ ಸೋಪ್/ ಫೇಸ್ ವಾಶ್ ಬದಲು, ಕಡಲೆಹಿಟ್ಟು ಬಳಸಿ ಮುಖ ತೊಳೆದುಕೊಳ್ಳಿ.
∙ ಕಡಲೆ ಹಿಟ್ಟು, ಮೊಸರು, ಅರಿಶಿನ, ಜೇನುತುಪ್ಪ, ರೋಸ್ ವಾಟರ್ ಮತ್ತು ಗಂಧದ ಪುಡಿಯನ್ನು ಬೆರೆಸಿ, ಮುಖಕ್ಕೆ ಮಸಾಜ್ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
∙ ಬೆಚ್ಚಗಿನ ನೀರಿಗೆ ಕಲ್ಲುಪ್ಪು ಹಾಕಿ, ಅದರಲ್ಲಿ ಅಂಗಾಲನ್ನು ಮುಳುಗಿಸಿ ಕುಳಿತುಕೊಳ್ಳಿ. ಹೀಗೆ ಮಾಡಿದರೆ ಕಾಲಿನ ಸತ್ತ ಚರ್ಮಗಳು ದೂರಾಗಿ, ತ್ವಚೆ ಕೋಮಲವಾಗುತ್ತದೆ.
ಕಿವಿಮಾತು∙ ಸ್ಕಿನ್ ಫಾಸ್ಟಿಂಗ್ ಮಾಡಲು ಇದು ಒಳ್ಳೆಯ ಸಮಯ. ಸ್ಕಿನ್ ಫಾಸ್ಟಿಂಗ್ ಅಂದರೆ, ವಾರಗಳ ಕಾಲ ರಾಸಾಯನಿಕ ಸೌಂದರ್ಯ ಉತ್ಪನ್ನಗಳನ್ನು ಬಳಸದೇ ಇರುವುದು. ಹಾಗೆ ಮಾಡುವುದರಿಂದ, ಚರ್ಮದ ಉಸಿರಾಟ ಸರಾಗವಾಗಿ ತ್ವಚೆಯ ಕಾಂತಿ ಹೆಚ್ಚುತ್ತದೆ. ∙ ಹೇರ್ ಡ್ರೈಯರ್ , ಹೇರ್ ಕಂಡಿಷನರ್ ಬಳಸಬೇಡಿ.
∙ ಪ್ರತಿನಿತ್ಯ ಕೂದಲಿಗೆ ಎಣ್ಣೆ ಹಚ್ಚಿದರೆ ಒಳ್ಳೆಯದು.
∙ ಮನೆಯಲ್ಲೇ ಇರುವುದರಿಂದ, ಬಾಯಾರಿಕೆ ಆಗದಿದ್ದರೂ ಹೆಚ್ಚೆಚ್ಚು ನೀರು ಕುಡಿಯಿರಿ.