Advertisement

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

11:19 AM Mar 22, 2020 | mahesh |

ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ. ಇನ್ನು ಹೊರಗಡೆ ಸುಂದರವಾದ ಗಾರ್ಡನ್‌ ನಿರ್ಮಿಸುತ್ತೇವೆ. ಮನೆಯ ಒಳಗಡೆ ಕೂಡ ನೀವು ಸುಂದರವಾದ ಗಾರ್ಡನ್‌ ನಿರ್ಮಿಸಿಕೊಂಡರೆ ನಿಮ್ಮ ಮನೆಯ ಅಂದವನ್ನು ಇನ್ನೂ ಹೆಚ್ಚಿಸಬಹುದು. ಆದರೆ ನೀವು ಮನೆಯ ಒಳಾಂಗಣಕ್ಕೆ ಕೆಲವೊಂದು ವೈವಿಧ್ಯಮಯ ಸಸ್ಯಗಳಿವೆ.

Advertisement

ಸ್ಪೈಡರ್‌ ಪ್ಲಾಂಟ್‌
ಸ್ಪೈಡರ್‌ ಪ್ಲಾಂಟ್‌ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಒಳಾಂಗಣ ಅಲ್ಲದೇ ಹೊರಾಂಗಣದಲ್ಲೂ ಇದ್ನನು ಬೆಳೆಸಬಹುದು. ಆದರೆ ಈ ಗಿಡ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ. ಬೆಳಕು ಹೆಚ್ಚು ಬೇಕಾಗಿದ್ದು ಕಿಟಕಿ ಬದಿಯಲ್ಲಿ ಜಾಗ ಇದ್ಕಕೆ ಸೂಕ್ತ.

ಝಡ್‌ ಝಡ್‌ ಪ್ಲಾಂಟ್‌
ಝಡ್‌ ಝಡ್‌ ಪ್ಲಾಂಟ್‌ ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಟ್ರೆಂಡ್‌ ಆಗಿವೆ. ಸಣ್ಣ ಕುಂಡದಲ್ಲಿ ನೆಟ್ಟು ಮನೆಯ ಯಾವ ಮೂಲೆಯಲ್ಲೂ ಇಡಬಹುದು.

ಬಿದಿರು ಸಸ್ಯ
ಮನೆಯ ಒಳಾಂಗಣ ಗಾರ್ಡನ್‌ಗೆ ಬಿದಿರು ಸಸ್ಯ ಕೂಡ ಉತ್ತಮ ಆಯ್ಕೆಯಾಗಿದೆ. ಈ ಸಸ್ಯ ಮಣ್ಣು ಇಲ್ಲದೆ ಬೆಳೆಯುವ ಸಸ್ಯವಾಗಿದೆ. ಬೆಣಚುಕಲ್ಲು, ಅಥವಾ ಗೋಲಿಗಳಿಂದ ನೀರಿನಲ್ಲಿ ತುಂಬಿದ ಹೂದಾನಿಯಲ್ಲಿ ಈ ಕಾಂಡವನ್ನು ಇರಿಸಿ ಬೆಳೆಸಬಹುದು.

ತಾಳೆ ಸಸ್ಯ
ಈ ಸೊಂಪಾದ ತಾಳೆ ಸಸ್ಯಕ್ಕೆ ಪ್ರಕಾಶಮಾನವಾದ ಫಿಲ್ಟರ್‌ ಮಾಡಿದ ಬೆಳಕು ಉತ್ತ¤ ಮವಾಗಿದೆ, ಆದರೆ ಅಗತ್ಯವಿದ್ದರೆ ಅದು ಕಡಿಮೆ ಬೆಳಕಿಗೆ ಹೊಂದಿಕೊಳ್ಳುತ್ತದೆ. ನೀರಿನ ವಿಷಯದಲ್ಲಿ ತಾಳೆ ಗಿಡಕ್ಕೆ ಹೆಚ್ಚಿನ ನೀರು ಅಗತ್ಯವಿಲ್ಲ. ಈ ಗಿಡದ ಮಣ್ಣನ್ನು ನೀವು ಒಣಗಲು ಬಿಡಬೇಡಿ. ಹೆಚ್ಚಿನ ನೀರು ಕೂಡ ಈ ಸಸ್ಯಗಳಿಗೆ ಅಗತ್ಯವಿಲ್ಲ. ಚಳಿಗಾಲದ ಸಮಯದಲ್ಲಿ ಈ ಗಿಡಗಳಿಗೆ ಹೆಚ್ಚಿನ ನೀರು ಅಗತ್ಯವಿಲ್ಲ. ನೀವು ಈ ಸಸ್ಯವನ್ನು ಬೆಚ್ಚಗಿನ ಸ್ಥಳದಲ್ಲಿ ಇರಿಸುವುದು ಉತ್ತಮ.

Advertisement

ಸ್ನೇಕ್‌ ಪ್ಲಾಂಟ್‌
ಸ್ನೇಕ್‌ ಪ್ಲಾಂಟ್‌ ಮನೆಯ ಒಳಾಂಗಣ ಗಾರ್ಡನಿಗೆ ಸೂಕ್ತ ಗಿಡವಾಗಿದೆ. ಏಕೆಂದರೆ ಈ ಸಸ್ಯದ ಕಾಳಜಿ ವಹಿಸುವುದು ತುಂಬಾ ಸುಲಭ. ಇವುಗಳಿಗೆ ಹೆಚ್ಚಿನ ಸೂರ್ಯನ ಬೆಳಕು ಬೇಕಾಗಿರುವುದಿಲ್ಲ. ಹಾಗಾಗಿ ಈ ಸಸ್ಯಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದು

– ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next