Advertisement
ಗೃಹರಕ್ಷಕ ದಳ ಪುತ್ತೂರು ಘಟಕದ ನೂತನ ಕಚೇರಿಯನ್ನು ರವಿವಾರ ಹಳೆಯ ಪುರಸಭಾ ಕಟ್ಟಡದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ಗೃಹರಕ್ಷಕ ದಳವು ಅತ್ಯಂತ ಉತ್ಸಾಹ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಹಾಲಿ ಈ ಘಟಕದಲ್ಲಿ 60 ಮಂದಿ ಇದ್ದು, ಇನ್ನು 20 ಸಿಬಂದಿಯನ್ನು ಸೇರಿಸಿಕೊಂಡು ಪುತ್ತೂರು ಗ್ರಾಮಾಂತರ ಘಟಕವನ್ನು ಸಾರ್ವಜನಿಕರಿಗೆ ಪ್ರಯೋಜನವಾಗುವ ದೃಷ್ಟಿಯಿಂದ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದ.ಕ. ಜಿಲ್ಲಾ ಗೃಹರಕ್ಷಕ ದಳದಿಂದ ಮೂರನೇ ವರ್ಷ ವನಮಹೋತ್ಸವವನ್ನು ಆಚರಿಸಲಾಗುತ್ತಿದೆ. ಓರ್ವ ಗೃಹ ರಕ್ಷಕನಿಗೆ ಒಂದು ಗಿಡದಂತೆ ಜಿಲ್ಲೆಯಲ್ಲಿ ಒಟ್ಟು 1,000 ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ವೈದ್ಯ ಡಾ| ಕೃಷ್ಣಪ್ರಸಾದ್ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೃಹರಕ್ಷಕ ದಳ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ಸಂತೋಷ್ ಕೆ., ಸುದರ್ಶನ್, ಜಗನ್ನಾಥ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೃಹರಕ್ಷಕರಾದ ಕವಿತಾ ಎಂ.ಎಸ್. ಹಾಗೂ ಕವಿತಾ ಎನ್.ಕೆ. ಪ್ರಾರ್ಥಿಸಿದರು. ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ಸಂತೋಷ್ ಕೆ. ವಂದಿಸಿದರು.