Advertisement

ಹೋಂ ಗಾರ್ಡ್‌ ಅತ್ಯಾಚಾರ ಆರೋಪ: ಮುಖ್ಯ ಪೇದೆ ಬಂಧನ

12:07 PM Nov 20, 2018 | Team Udayavani |

ಬೆಂಗಳೂರು: ಮಹಿಳಾ ಹೋಂ ಗಾರ್ಡ್‌ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಪೊಲೀಸ್‌ ಮುಖ್ಯ ಪೇದೆಯೊಬ್ಬರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜ್ಞಾನಭಾರತಿ ಠಾಣೆಯ ಮುಖ್ಯ ಪೇದೆ ಚಂದ್ರಶೇಖರ್‌ ಬಂಧಿತ ಆರೋಪಿ.

Advertisement

ಸಂತ್ರಸ್ತ ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. “ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಹೋಂ ಗಾರ್ಡ್‌ ಆಗಿ ಸೇವೆ ಸಲ್ಲಿಸುತ್ತಿದ್ದು. ನ.2ರಂದು ಆರೋಪಿ ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯನ್ನು ಮನೆಯವರೆಗೂ ಡ್ರಾಪ್‌ ಮಾಡಿದ್ದು ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದಾನೆ.

ಬಳಿಕ ತನ್ನ ವರಸೆ ಬದಲಿಸಿದ ಚಂದ್ರಶೇಖರ್‌, ಆಕೆಯ ಜೊತೆ ಅಶ್ಲೀಲವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ನ.16ರಂದು ಕೆಲಸ ಮಾಡುತ್ತಿದ್ದಾಗ ರಾತ್ರಿ 8.30ರ ಸುಮಾರಿಗೆ ಅಲ್ಲಿಗೆ ಬಂದು ಲೈಂಗಿಕ ದೌರ್ಜನ್ಯ ಎಸಗಲು ಬಲವಂತ ಪಡಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಮನೆಗೆ ಬಂದು ಅತ್ಯಾಚಾರ: ಆರೋಪಿ ಚಂದ್ರಶೇಖರ್‌ ಲೈಂಗಿಕ ಕಿರುಕುಳ ನೀಡುತ್ತಿದ್ದ ಕುರಿತು ಜ್ಞಾನಭಾರತಿ ಠಾಣೆ ಇನ್ಸ್‌ಪೆಕ್ಟರ್‌ಗೆ ಮಾಹಿತಿ ನೀಡಿದ್ದರಿಂದ, ಅವರು ನ.17ರಂದು ಇಬ್ಬರನ್ನೂ ವಿಚಾರಣೆ ನಡೆಸಿ ಮುಂದೆ ಆ ರೀತಿ ನಡೆಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಆದರೆ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು ಬಾಗಿಲು ಹಾಕಿಕೊಂಡಿದ್ದೆ. ಕೆಲಹೊತ್ತಿನ ಬಳಿಕ ಬಾಗಿಲು ಬಡಿದ ಶಬ್ಧವಾಯಿತು. ಪತಿ ಎಂದು ತಿಳಿದುಕೊಂಡು ಬಾಗಿಲು ತೆಗೆದ ಕೂಡಲೇ ಚಂದ್ರಶೇಖರ್‌ ಒಳನುಗ್ಗಿ ಬಲಾತ್ಕಾರಕ್ಕೆ ಮುಂದಾದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next