Advertisement

ಕೊಡಗು ಜಿಲ್ಲೆಯ 25 ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ನೆಲೆ

01:15 AM Aug 11, 2019 | sudhir |

ಮಡಿಕೇರಿ :ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅತಿವೃಷ್ಟಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ. ಪರಿಹಾರ ಕೇಂದ್ರ ಆರಂಭ, ಸಂತ್ರಸ್ತರ ಸ್ಥಳಾಂತರ ಕಾರ್ಯ ಹೀಗೆ ಹಲವು ಕ್ರಮ ಕೈಗೊಂಡಿದೆ.

Advertisement

ಪರಿಹಾರ ಕೇಂದ್ರಗಳ ಮಾಹಿತಿ ಇಂತಿದೆ: ಮಡಿಕೇರಿ ತಾಲ್ಲೂಕಿನ ಕಾಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಮರ್ಥ್ಯ ಸೌಧ, ಜಿ.ಪಂ. ಸಂಪನ್ಮೂಲ ಕೇಂದ್ರ, ಕೇಂದ್ರೀಯ ವಿದ್ಯಾಲಯ(ಜಿಲ್ಲಾ ತರಬೇತಿ ಕೇಂದ್ರ ಹಳೇ ಕಟ್ಟಡ), ಹೊದ್ದೂರು, ವಾಟೆಕಾಡು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹೊದವಾಡ ಸರ್ಕಾರಿ ಪ್ರೌಢ ಶಾಲೆ, ಪಾರಾಣೆ ಕೊಣಂಜಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಪೋಕ್ಲು ಸ.ಪದವಿ ಪೂರ್ವ ಕಾಲೇಜು ಈ ಕೇಂದ್ರಗಳಲ್ಲಿ ಒಟ್ಟು 157 ಕುಟುಂಬಗಳ, 574 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಹರದೂರು (ಮಾದಾಪುರ) ಚೆನ್ನಮ್ಮ ಕಾಲೇಜು, ಕುಶಾಲನಗರ ವಾಲ್ಮೀಕಿ ಭವನ, ನೆಲ್ಲಿಹುದಿಕೇರಿ ಬೆಟ್ಟದಕಾಡು ಅಂಗನವಾಡಿ ಕೇಂದ್ರ, ನೆಲ್ಲಿಹುದಿಕೇರಿ ಹಿರಿಯ ಪ್ರಾಥಮಿಕ ಶಾಲೆ ಈ ಕೇಂದ್ರಗಳಲ್ಲಿ ಒಟ್ಟು 62 ಕುಟುಂಬಗಳ 213 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಸವೇಶ್ವರ ಸಮುದಾಯ ಭವನ, ಕೊಂಡಂಗೇರಿ ಸ.ಹಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆ ಪಟ್ಟಣದ ಬಿ.ಇ.ಒ ಕಚೇರಿ ಹತ್ತಿರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಂಗಾಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ, ಕಾಕೋಟು ಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಳೆಲೆ ಸಾರ್ವಜನಿಕ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಸಿದ್ದಾಪುರ ಆದಿಚುಂಚನಗಿರಿ ಪ್ರೌಢ ಶಾಲೆ, ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಟ್ಟು 385 ಕುಟುಂಬಗಳ 1349 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ವ್ಯಾಪಕ ಮಳೆಯಿಂದಾಗಿ ಭೂ ಕುಸಿತ ಪ್ರವಾಹ ಉಂಟಾಗಿದ್ದು, ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ವಿವರ ಇಂತಿದೆ.

Advertisement

ಜಿಲ್ಲೆಯ 25 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ವಿವರ ಇಂತಿದೆ. ಕಟ್ಟೆಮಾಡು ಪರಂಬು ಪೈಸಾರಿ, ಹೊದವಾಡ, ವಾಟೆಕಾಡು, ಐಕೊಳ, ನಾಪೋಕ್ಲು, ಬೇತು, ಕಾಲೂರು, ಪಾರಾಣೆ, ಕೊಂಡಂಗೇರಿ, ಕಕ್ಕಬ್ಬೆ, ನಾಲಡಿ, ಬಲಮುರಿ, ಬಲ್ಲಮಾವಟಿ, ಪೆರೂರು, ಯವಕಪಾಡಿ, ಮರಂದೊಡ, ಚೇಲಾವರ, ಚೆಯ್ಯಂಡಾಣೆ, ಕಿರಂದಾಡು, ಎಮ್ಮೆಮಾಡು, ನೆಲಜಿ, ದೊಡ್ಡಪುಲಿಕೋಟು, ಅರಪಟ್ಟು, ಕಡಂಗ, ಭಾಗಮಂಡಲ, ಅಯ್ಯಂಗೇರಿ.

ವಿರಾಜಪೇಟೆ ತಾಲ್ಲೂಕಿನ ನಿಡುಗುಂಬ, ಕಾನೂರು, ¸ ೆಕ್ಕೆಸೊಡ್ಲೂರು, ಅರುವತ್ತೋಕ್ಲು, ಕೈಕೇರಿ, ಹಾತೂರು, ಕುಂದ, ಹಳ್ಳಿಗಟ್ಟು, ಬಾಳೆಲೆ, ನಿಟ್ಟೂರು, ಕೊಟ್ಟಗೇರಿ, ಚೀನಿವಾಡ, ತೆರಾಲು, ಟಿ.ಶೆಟ್ಟಿಗೇರಿ, ಕರಡಿಗೋಡು, ಗುಹ್ಯ. ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗುಂಡಿ, ಬೆಟ್ಟದ ಕಾಡು, ವಾಲ್ನೂರು ತ್ಯಾಗತ್ತೂರು. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ತಮ್ಮಣ್ಣ ಶೆಟ್ಟಿ ಬಡಾವಣೆ, ಇಂದಿರಾ ಬಡಾವಣೆ, ನಿಜಾಮುದ್ದೀನ್‌ ಬಡಾವಣೆ.

ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸು ನಗರ, ನೆಹರು ನಗರ, ಮಲೆತಿರಿಕೆ ಬೆಟ್ಟ, ಮೋಗರಗಲ್ಲಿ, ಸುಂಕದ ಕಟ್ಟೆ, ಅಪ್ಪಯ್ಯಸ್ವಾಮಿ ರಸ್ತೆ, ಸುಭಾಶ್‌ ನಗರ, ವಿಜಯನಗರ.

ಕೊಣನೂರು-ವಿರಾಜಪೇಟೆ-ಮಾಕುಟ್ಟ ರಾಜ್ಯ ಹೆದ್ದಾರಿ 91 ರಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ರಸ್ತೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದ್ದು, ಭಾರೀ ಮಳೆಯಾಗುತ್ತಿರುವುದರಿಂದ ಭೂ ಕುಸಿತ ಮತ್ತು ಮರಗಳು ಬೀಳುವ ಸಾಧ್ಯತೆಗಳು ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.

ಅಲ್ಲದೆ ಗಾಳಿಬೀಡು-ಪಾಟಿ-ಕಾಲೂರು ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಈ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಗಾಳಿಬೀಡು-ಪಾಟಿ-ಕಾಲೂರು ಶಾಲೆ ರಸ್ತೆ ವ್ಯಾಪ್ತಿಯ ಗ್ರಾಮಸ್ಥರು ಈ ರಸ್ತೆಗೆ ಬದಲಾಗಿ ಕೆ.ನಿಡುಗಣೆ-ಹೆಬ್ಬೆಟ್ಟಗೇರಿ-ದೇವಸ್ತೂರು-ಕಾಲೂರು ರ ಸ್ತೆಯನ್ನು ಬಳಸುವಂತೆ ತಿಳಿಸಲಾಗಿದೆ.

ಅತಿ ಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿರುತ್ತಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ 24*7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ವಾಟ್ಸಪ್‌ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.

ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ : 08272-221077 ಮತ್ತು ವಾಟ್ಸಪ್‌ ನಂ. 8550001077 ನ್ನು ಸಂಪರ್ಕಿಸಬಹುದು.

ಮಡಿಕೇರಿ-ಕುಶಾಲನಗರ, ಕೊಯನಾಡು- ಜೋಡುಪಾಲ ಮೂರ್ನಾಡು- ವಿರಾಜಪೇಟೆ, ಅಯ್ಯಂಗೇರಿ- ಭಾಗಮಂಡಲ, ಗೋಣಿಕೊಪ್ಪ- ಪಾಲಿಬೆಟ್ಟ, ಗೋಣಿಕೊಪ್ಪ- ಪೊನ್ನಂಪೇಟೆ, ನಾಪೋಕ್ಲು-ಪಾರಾಣೆ, ಸಿದ್ದಾಪುರ-ಕರಡಿಗೋಡು, ಭಾಗಮಂಡಲ-ಮಡಿಕೇರಿ, ವಿರಾಜಪೇಟೆ- ಮಾಕುಟ್ಟ, ಭಾಗ ಮಂಡಲ-ನಾಪೋಕ್ಲು, ಭಾಗ ಮಂಡಲ-ತಲಕಾವೇರಿ, ಮೂರ್ನಾಡು-ನಾಪೋಕ್ಲು, ನಿಟ್ಟೂರು-ಬಾಳೆಲೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next