Advertisement

ಶೀಘ್ರದಲ್ಲೇ ಅರ್ಹರೆಲ್ಲರಿಗೂ ವಸತಿ ಭಾಗ್ಯ

01:57 PM Mar 15, 2021 | Team Udayavani |

ಅರಸೀಕೆರೆ: ಬಡವರು ಬಡವರಾಗಿ ಬದುಕಬೇಕೆಂದಿಲ್ಲ, ಅವರಿಗೂ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪಕ್ಷಾತೀತ, ಜಾತ್ಯತೀತವಾಗಿ ಅರ್ಹಫ‌ಲಾನುಭವಿಗಳನ್ನು ಗುರುತಿಸಿ ಅತಿ ಶೀಘ್ರದಲ್ಲಿಯೇವಸತಿ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಯಾದಾಪುರರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವಹೌಸಿಂಗ್‌ ಫಾರ್‌ ಆಲ್‌ ಜಿ.ಪ್ಲಸ್‌ 1 ವಸತಿಗಳಸಮುಚ್ಚಾಲಯದಲ್ಲಿ 1800 ವಸತಿಗಳ ನಿರ್ಮಾಣಕಾಮಗಾರಿ ಮಂದಿಗತಿಯಲ್ಲಿ ಸಾಗುತ್ತಿರುವ ಬಗ್ಗೆಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ: ನಗರದಲ್ಲಿ ನಿರ್ಮಾಣಹಂತದಲ್ಲಿರುವ ಹೌಸಿಂಗ್‌ ಫಾರ್‌ ಆಲ್‌ ಜಿ.ಪ್ಲಸ್‌ 1 ವಸತಿ ಸಮುಚ್ಚಾಲಯ ಕಾಮಗಾರಿಗಳು ಕೊರೊನಾಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದು, ಈಗ ಪ್ರಾರಂಭಿಸಲಾಗಿದೆ.

ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ವಸತಿ ಹಂಚಿಕೆಮಾಡುವಲ್ಲಿ ನಮ್ಮ ಸರ್ಕಾರ ಪಕ್ಷಾತೀತವಾಗಿ, ಜಾತ್ಯತೀತವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಈಮೂಲಕ ವಸತಿ ರಹಿತ ಬಡವರನ್ನು ಗುರುತಿಸಿವಿತರಿಸಬೇಕಾಗಿದೆ. ಆದ್ದರಿಂದ ಏಪ್ರಿಲ್‌ 2ನೇ ವಾರದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ತಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮೂಲ ಸೌಲಭ್ಯ ಕಲ್ಪಿಸಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಬಡವರು ಕಡೆವರೆಗೂ ಬಡವರಾಗಿ ಉಳಿಯ ಬೇಕಾಗಿಲ್ಲ. ಆದ್ದರಿಂದ ಅತಿ ಶೀಘ್ರವಾಗಿ ವಸತಿ ರಹಿತ ರಿಗೆ ಸೌಲಭ್ಯವನ್ನು ಕಲ್ಪಿಸಲಾಗುವುದಾಗಿ ಭರವಸೆ ನೀಡಿದರು.

ಫ‌ಲಾನುಭವಿಗಳು ವಂತಿಕೆ ಪಾವತಿಸಲಿ: ತಮ್ಮ ಇಲಾಖೆಗೆ ದೊರೆಯುವ ಅನುದಾನದ ಇತಿಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಫ‌ಲಾನುಭವಿಗಳು ಕೂಡ ತಮ್ಮ ಪಾಲಿನ ವಂತಿಕೆಯನ್ನು ಇದುವರೆಗೂ ಪಾವತಿ ಮಾಡಿಲ್ಲ, ಆದ್ದರಿಂದ ಲೀಡ್‌ ಬ್ಯಾಂಕ್‌ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿಗಳು ಮತ್ತು ತಾವು ಸಭೆ ನಡೆಸಿ ಸಮಸ್ಯೆ ಬಗ್ಗೆ ಸುದೀರ್ಘ‌ವಾಗಿ ಚರ್ಚೆ ನಡೆಸಿ, ಫ‌ಲಾನುಭವಿಗಳಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಿ, ವಸತಿ ರಹಿತ ಫ‌ಲಾನುಭವಿಗಳಿಗೆ ಮನೆಗಳ ಹಂಚಿಕೆಯನ್ನು ಮಾಡಲು ತೀರ್ಮಾ ನಿಸಲಾಗಿದೆ. 2021ರ ಕೊನೆಯಲ್ಲಿ ನೂತನ ವಸತಿ ಸಮುಚ್ಚಾಲಯದ ಉದ್ಘಾಟನೆಯನ್ನು ನೆರವೇರಿಸುವ ಭರವಸೆ ನೀಡಿದರು.

Advertisement

18 ಲಕ್ಷ ಮನೆ ನಿರ್ಮಾಣ ಗುರಿ: ರಾಜ್ಯ ಸರ್ಕಾರ 18 ಲಕ್ಷ ಮನೆಗಳನ್ನು ವಿತರಣೆ ಮಾಡಲು ಆದೇಶ ಮಾಡಿದ್ದು, ಕಾರ್ಯಾದೇಶ ಕೂಡ ನೀಡಿದೆ. ಆದರೆ, ಇದುವರೆಗೂ ಒಂದೇ ಒಂದು ಮನೆಯನ್ನು ನೀಡಲು ಸಾಧ್ಯವಾಗಿಲ್ಲ. 5.93 ಲಕ್ಷ ಮನೆ ನಿರ್ಮಿಸಲು 1,700 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ 93 ಸಾವಿರ ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಇನ್ನು 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ ಎಂದು ಹೇಳಿದರು.

ಮನೆ ವಿತರಣೆಗೆ ಶೀಘ್ರ ಕ್ರಮ: ಹಿಂದಿನ ಸರ್ಕಾರದ 6 ಲಕ್ಷ ಮನೆಗಳ ಫ‌ಲಾನುಭವಿಗಳ ಆಯ್ಕೆಯನ್ನು ಪರಿಶೀಲನೆಗೆ ಒಳಪಡಿಸಿದ್ದ ಕಾರಣ, 6 ಲಕ್ಷ ಮನೆಗಳ ವಿತರಣೆಗೆ ಬ್ಲಾಕ್‌ ಮಾಡಲಾಗಿದೆ. ನಂತರ ಪರಿಶೀಲನೆಯಲ್ಲಿ 2.94 ಲಕ ಅ‌Ò ರ್ಹ ಫ‌ಲಾನುಭವಿಗಳೆಂದು ಗುರುತಿಸಲಾಗಿದೆ. ಅವರೆಲ್ಲರಿಗೂ ಶೀಘ್ರದಲ್ಲಿ ಮನೆಗಳ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರೋತ್ಸಾಹಧನ: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ವಸತಿ ರಹಿತ ಫ‌ಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ 78 ಸಾವಿರ ರೂ., ರಾಜ್ಯ ಸರ್ಕಾರ 42 ಸಾವಿರ ರೂ. ಸೇರಿ ಒಟ್ಟು 1.20 ಲಕ್ಷ ರೂ. ಪ್ರೋತ್ಸಾಹಧನವನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ವಸತಿ ರಹಿತ ಅರ್ಹ ಫ‌ಲಾನುಭವಿಗಳು ಮಾಡಿಕೊಂಡು ಮನೆಯನ್ನು ಕಟ್ಟಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿ.ವಿ.ಟಿ.ಬಸವರಾಜು, ಗ್ರಾಮಾಂತರ ಬಿಜೆಪಿ ಅಧ್ಯಕ Ò ಎಂ.ಜಿ.ಲೋಕೇಶ್‌, ನಗರಾಧ್ಯಕ್ಷ ಪುರುಷೋತ್ತಮ್‌, ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next