Advertisement

ನಿರುಪಯುಕ್ತ ಬಲ್ಬ್ ಗಳಿಂದ ಮನೆಯ ಅಲಂಕಾರ

10:29 PM Jan 10, 2020 | mahesh |

ಮನೆಯ ಅಲಂಕಾರಕ್ಕಾಗಿ ಅದೆಷ್ಟೋ ನಿರುಪಯುಕ್ತ ವಸ್ತುಗಳೇ ಪ್ರಯೋಜನಕ್ಕೆ ಬರುತ್ತದೆ. ಅದಕ್ಕಾಗಿ ನೀವು ಸ್ವಲ್ಪ ಸಮಯ ಮತ್ತು ತಲೆ ಖರ್ಚು ಮಾಡಬೇಕಷ್ಟೇ. ಹೌದು, ಕ್ರಿಯೇಟಿವಿಟಿ ಅನ್ನೋದು ನಿಮ್ಮದೇ ಸ್ವಂತ ಸ್ವತ್ತು. ಅದನ್ನು ನೀವು ಬಳಸಿಕೊಳ್ಳಬೇಕು ಅಷ್ಟೇ. ಆಗ ಉಳಿತಾಯದ ಜತೆಗೆ ಮನೆಯ ಅಲಂಕಾರವನ್ನೂ ಮಾಡಬಹುದು. ಕೆಲವು ನಿರುಪಯುಕ್ತವಾಗಿರುವ ಅದೆಷ್ಟೋ ವಸ್ತುಗಳು ನಿಮ್ಮ ಕೈಚಳಕದಿಂದ ಮನೆಯ ಅಲಂಕಾರಕ್ಕೆ ಬಳಕೆ ಮಾಡಿಕೊಳ್ಳಬಹುದು. ಅದರಲ್ಲಿ ಬಲ್ಬ್ಗಳು ಕೂಡ ಒಂದು. ನೀವು ಬೇಡವೆನಿಸಿದ ಬಲ್ಬ್ಗಳಿಂದ ನಿಮ್ಮದೇ ಸ್ವಂತ ಕ್ರಿಯೇಟಿವಿಟಿಯಿಂದ ಸುಂದರವಾಗಿ ಅಲಂಕಾರ ಮಾಡಿಕೊಳ್ಳಬಹುದು. ಅದಕ್ಕಾಗಿ ಕೆಲವೊಂದು ಟಿಪ್ಸ್‌

Advertisement

ಬಣ್ಣದ ಬೆಳಕಿನ ಬಲ್ಬ್
ನೀವು ನಿಮ್ಮ ಮನೆಗೆ ಬಣ್ಣದ ಬಲ್ಬ್ಗಳನ್ನು ತಯಾರಿಸಿಕೊಳ್ಳಬಹುದು. 40 ವ್ಯಾಟ್‌ನ ಬಲ್ಬ್ ಅನ್ನು ಸೆಲೆಕ್ಟ್ ಮಾಡಿಕೊಂಡು ಸೋಪು ಮತ್ತು ನೀರಿನಿಂದ ಸ್ವತ್ಛವಾಗಿರುವ ಟವೆಲ್‌ ಬಳಸಿ ಸ್ವತ್ಛಗೊಳಿಸಿ ಅನಂತರ ಒಣಗಿಸಿ ಅಥವಾ ಒಂದರಿಂದ ಎರಡು ನಿಮಿಷ ಗಾಳಿಯಲ್ಲಿಟ್ಟು ಒಣಗಿಸಿಕೊಳ್ಳಿ. ಬಳಿಕ ನಿಮಗೆ ಬೇಕಾದ ಪೈಂಟ್‌ ಅನ್ನು ಹಚ್ಚುವುದಕ್ಕೆ ಸಣ್ಣ ಬ್ರಷ್‌ ಗಳನ್ನು ಬಳಕೆ ಮಾಡಿ. ಮೊದಲು ಬಣ್ಣವನ್ನು ಬೆಳಕಿನಲ್ಲಿ ಹಚ್ಚಿ. ತೆಳುವಾದ ಪದರವನ್ನು ಮಾಡಿ ಮತ್ತು ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿ. ಯಾವುದೇ ರೀತಿಯ ಡಿಸೈನ್‌ ಮಾಡುವುದಕ್ಕೂ ನಿಮಗೆ ಸ್ವಾತಂತ್ರÂವಿದೆ. ನಿಮ್ಮ ಇಚ್ಛೆಗೆ ಅನುಸಾರವಾಗಿ ಪೈಂಟ್‌ ಮಾಡಬಹುದು. ಚಿತ್ರವು ತಪ್ಪಾದರೆ ಪೇಪರ್‌ ಬಳಸಿ ನಿಧಾನವಾಗಿ ಉಜ್ಜಿ ತೆಗೆಯಬಹುದು.

ಪೈಂಟ್‌ ಕೆಲಸ ಮುಗಿದ ಅನಂತರ ಪೈಂಟ್‌ ಡ್ರೈ ಆಗುವುದಕ್ಕಾಗಿ ಕನಿಷ್ಠ ಒಂದು ಗಂಟೆ ಗಾಳಿಯಲ್ಲಿಡಿ. ಸಂಪೂರ್ಣವಾಗಿ ಒಣಗುವ ತನಕ ತಾಳ್ಮೆಯಿಂದ ಕಾಯಿರಿ. ಅನಂತರ ನಿಮಗೆ ಬಣ್ಣದ ಬಲ್ಬ್ ತರಯಾರಾಗುತ್ತದೆ. ಇದನ್ನು ನೀವು ನಿಮ್ಮ ಮನೆಗೆ ಅಳವಡಿಸಿ ಸುಂದರವಾಗಿಸಿಟ್ಟುಕೊಳ್ಳಬಹುದು.

ಹೂದಾನಿ ತಯಾರಿಸುವುದು
ಬಲ್ಬ್ನಿಂದ ಹೂದಾನಿಗಳನ್ನು ಕೂಡ ತಯಾರಿಸಬಹುದು. ಬಲ್ಬ್ ಒಳಗಿರುವ ಅಂಶಗಳನ್ನು ಪೇಪರ್‌ ಟವೆಲ್‌ ಅಥವಾ ಬಟ್ಟೆಯನ್ನು ಬಳಸಿ ಚೆನ್ನಾಗಿ ಸ್ವತ್ಛಗೊಳಿಸಿ. ಸಾಬೂನಿನ ನೀರಿನಿಂದ ಬಲ್ಬ್ನ ಒಳಭಾಗವನ್ನು ಕ್ಲೀನ್‌ ಮಾಡಿ. ಅನಂತರ ನೈಲ್‌ ಪಾಲಿಶ್‌ ಅಥವಾ ಯಾವುದೇ ರೀತಿಯ ಅಕ್ರಾಲಿಕ್‌ ಪೈಂಟ್‌ ಅನ್ನು ಬಳಸಿ ನಿಮ್ಮದೇ ಶೈಲಿಯ ಚಿತ್ರವನ್ನು ಹೂದಾನಿಗಳಲ್ಲಿ ಬಿಡಿಸಬಹುದು ಅಥವಾ ಸಿಂಪಲ್‌ ಲುಕ್‌ಗಾಗಿ ಕೇವಲ ಕ್ಯಾಪ್‌ ಅನ್ನು ಮಾತ್ರವೇ ಪೈಂಟ್‌ ಮಾಡಬಹುದು.

ಬಲ್ಬ್ನಿಂದ ತಯಾರಿಸಿದ ಹೂದಾನಿಗೆ ನೀರನ್ನು ಹಾಕಿ ಸಣ್ಣಸಣ್ಣ ಹೂವುಗಳನ್ನು ಅದರೊಳಗೆ ಹಾಕಬಹುದು. ಆದರೆ ಅದರ ತೂಕವು ಆರಾಮವಾಗಿ ಹೂದಾನಿಯು ನಿಲ್ಲುವಂತಿರಬೇಕು ಎಂಬುದು ನಿಮ್ಮ ಗಮನದಲ್ಲಿ ಇರಲಿ. ಹುಕ್‌ಗಳನ್ನು ಬಳಸಿ ಅಥವಾ ಕೊಕ್ಕೆಗಳಲ್ಲಿ ಇವುಗಳನ್ನು
ನೇತಾಡುವಂತೆ ಮಾಡಬಹುದು.

Advertisement

– ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next