Advertisement

ಹುಟ್ಟು ಹಬ್ಬಕ್ಕೆ ಮನೆಯ ಅಲಂಕಾರ 

12:56 PM Nov 24, 2018 | |

ಮನೆಯಲ್ಲಿ ತಮ್ಮ ಮಕ್ಕಳದ್ದು ಅಥವಾ ಅಪ್ಪ, ಅಮ್ಮನ ಹುಟ್ಟು ಹಬ್ಬವನ್ನು ಮಕ್ಕಳು ಸಪ್ಸೆನ್ಸ್‌ ಆಗಿ ಅವರಿಗೆ ತಿಳಿಯದೆ ಡೆಕೊರೇಟ್‌ ಮಾಡಬೇಕು ಅಂದುಕೊಳ್ಳುತ್ತೇವೆ. ಆದರೆ ಅದು ಹೇಗೆ ಎನ್ನುವುದು ಎಲ್ಲರಲ್ಲಿ ಗೊಂದಲ ಉಂಟು ಮಾಡುತ್ತದೆ. ಕಡಿಮೆ ಖರ್ಚಿನಲ್ಲಿ ಗ್ರಾಂಡ್‌ ಆಗಿ ಹುಟ್ಟು ಹಬ್ಬವನ್ನು ಆಚರಿಸಬೇಕಾದರೆ ಕೆಲವೊಂದು ಕ್ರಿಯಾಶೀಲತೆಯಿಂದ ಇದನ್ನು ರೂಪುಗೊಳಿಸಬಹುದು.

Advertisement

ಲೈಟಿಂಗ್‌
ಲೈಟಿಂಗ್‌ಗೆ ಇಂತಹ ಆಚರಣೆಯಲ್ಲಿ ಮುಖ್ಯ ಪಾತ್ರವಹಿ ಸುತ್ತದೆ. ಏಕೆಂದರೆ ಈ ದೀಪಗಳು ನಮ್ಮ ಒಟ್ಟು ಮನಸ್ಥಿತಿ ಅಥವಾ ಮೂಡ್‌ ಅನ್ನು ಬದಲಿಸುತ್ತದೆ. ಆದ್ದರಿಂದ ಇದರ ಬಗ್ಗೆಯೂ ಗಮನಹರಿಸಬೇಕು. ಕಲರ್‌ ಕಲರ್‌ ಮಿನೇಚರ್‌ಗಳು, ಜೀರೊ ವೋಲ್ಟ್ ಬಲ್ಬ್  ಗಳನ್ನು ಬಳಸಿ ಕಲರ್‌ ಫ‌ುಲ್‌ ಆಗಿ ಹಾಲ್‌ ಅಥವಾ ಬೆಡ್‌ರೂಮ್‌ ಅನ್ನು ಅಲಂಕರಿಸಬಹುದು.

ಕ್ಯಾಂಡಲ್‌ಗ‌ಳನ್ನೂ ಇಲ್ಲಿ ಬಳಸಬಹುದು. ವಿದ್ಯುತ್‌ ದೀಪದ ಬದಲುಎಲ್ಲ ಕ್ಯಾಂಡಲ್‌ಗ‌ಳನ್ನು ಅಲ್ಲಲ್ಲಿ ಉರಿಸಿ ಕ್ಯಾಂಡಲ್‌ ಲೈಟ್‌ ಸೆಲೆಬ್ರೇಶನ್‌ ಮಾಡಬಹುದು. ಅದಲ್ಲದೆ ಈ ಕ್ಯಾಂಡಲ್‌ ಲೈಟ್‌ಡಿನ್ನರ್‌ ಒಂದು ಟ್ರೆಂಡ್‌ಕೂಡ ಹೌದು. ಬಹು ಮುಖ್ಯ ಅಂಗವಾದ ಟೇಬಲ್‌ ಅನ್ನು ಫ‌ುಲ್‌ ಡೆಕೊರೇಟ್‌ ಮಾಡಬೇಕು. ಏಕೆಂದರೆ ಬರ್ತ್‌ಡೇ ಸೆಲೆಬ್ರೇಶನ್‌ಗೆ ಕೇಕ್‌ ಹಾಗೂ ಇನ್ನಿತರ ತಿಂಡಿ ತಿನಿಸುಗಳನ್ನು ಇಡಲು ಮುಖ್ಯವಾಗಿರುತ್ತದೆ. ಹಾಗಾಗಿ ಸ್ವಲ್ಪದೊಡ್ಡ ಟೇಬಲ್‌ ಅನ್ನು ನೀಟ್‌ ಆಗಿ ವ್ಯವಸ್ಥಿತಗೊಳಿಸಬೇಕು.

ಗಾರ್ಲಂಡ್‌ ಬೆಬಿ ಫೇಸ್‌
ಅಂದರೆ ಹುಟ್ಟುಹಬ್ಬ ಆಚರಿಸುವವರ ಫೋಟೋಗಳನ್ನು ಅಥವಾ ಕಲರ್‌ ಪ್ರಿಂಟ್‌ಗಳನ್ನು ಒಂದು ನೂಲಿಗೆ ಕಟ್ಟಿತೋರಣದ ರೀತಿ ನೇತು ಹಾಕಿ. ಇದರಿಂದ ಎಲ್ಲೆಡೆ ಹುಟ್ಟುಹಬ್ಬ ಆಚರಿಸುವವರ ಮುಖ ಕಂಗೊಳಿಸುತ್ತದೆ. ಮಾತ್ರವಲ್ಲದೆ ಒಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತದೆ.

ಬರ್ತ್‌ಡೇಯಲ್ಲಿ ಎಲ್ಲದಿಕ್ಕಿಂತ ಮುಖ್ಯ ಪಾತ್ರವಹಿಸುವುದು ಡಿನ್ನರ್‌. ಹಾಗಾಗಿ ಈ ಡಿನ್ನರ್‌ ಟೇಬಲ್‌ ಅನ್ನು ಡೆಕೊರೇಟ್‌ ಮಾಡಿದರೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಕ್ಯಾಂಡಲ್‌ ಲೈಟ್‌ ಡಿನ್ನರ್‌ ಮಾಡುವ ಮೂಲಕ ಹೊಸ ಡಿನ್ನರ್‌ಅನ್ನು ಅರೇಂಜ್‌ ಮಾಡಬಹುದು. ಜತೆಗೆ ಟೇಬಲ್‌, ಚೆಯರ್‌ಗಳಿಗೆ ವಿಭಿನ್ನ ಕವರ್‌ ಮಾಡಿ ಸುಂದರಗೊಳಿಸಬ ಹುದು. ಖಾದ್ಯಗಳನ್ನು ಆಕರ್ಷಕ ಸರ್ವಿಂಗ್‌ ಬೌಲ್‌ನಲ್ಲಿ ಇಡುವುದು. ಮತ್ತು ತಿನ್ನಲು ಬಳಸುವ ಪ್ಲೇಟ್‌, ಸ್ಪೂನ್‌, ಗ್ಲಾಸ್‌, ಫೋರ್ಕ್‌ ಇನ್ನಿತರ ವಸ್ತುಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಮನೆಯವರ ಹುಟ್ಟುಹಬ್ಬವನ್ನು ಆಚರಿಸಿ ಸಂತೋಷದ ಕ್ಷಣಗಳನ್ನು ಜೀವನದಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳಬಹುದು.

Advertisement

ಬಲೂನ್‌
ಬಲೂನ್‌, ಲೈಟಿಂಗ್‌ ಹಾಗೂ ಕೆಲವು ಕರಕುಶಲ ವಸ್ತುಗಳಿದ್ದರೆ ಸಾಕು. ಮನೆಯ ಅಂದವನ್ನು ಹೆಚ್ಚಿಸಿ ಮತ್ತಷ್ಟು ಸುಂದರಗೊಳಿಸಬಹುದು. ಕಲರ್‌ಕಲರ್‌ ಬೆಲೂನ್‌ ಗಳನ್ನು ಊದಿ ಮನೆಯ ಹಾಲ್‌ನಲ್ಲಿ ನೇತು ಹಾಕುವುದು ಹಾಗೂ ಒಂದು ಗೋಡೆಗೆ ಸ್ಟೇಜ್‌ ರೀತಿಯಲ್ಲಿ ಹ್ಯಾಪಿ ಬರ್ತ್‌ಡೇ ಎಂದು ಬಲುನ್‌ನಿಂದ ಅಲಂಕರಿಸುವುದು, ಹುಟ್ಟು ಹಬ್ಬ ಆಚರಿಸುವವರ ಹೆಸರು ಹಾಗೂ ವಯಸ್ಸನ್ನು ಬಲೂನ್‌ನಲ್ಲಿ ಗೋಡೆಗೆ ಹಚ್ಚಬಹುದು. ಇದಕ್ಕೆ ಬೇಕಾದ ಅಕ್ಷರ ಹಾಗೂ ಅಂಕೆ ಬಲೂನ್‌ ದೊರೆಯುತ್ತದೆ. ಜತೆಗೆ ಡೆಕೊರೇಟಿಂಗ್‌ ವಸ್ತುಗಳಾದ ಚಿಟ್ಟೆ, ಕಲರ್‌ರೋಲ್‌, ಕುರ್ಲಕ್ರೀಪ್‌ ಪೇಪರ್‌ಗಳನ್ನು ಇಲ್ಲಿ ಬಳಸಬಹುದು. 

 ಭರತ್‌ ರಾಜ್‌ ಕರ್ತಡ್ಕ 

Advertisement

Udayavani is now on Telegram. Click here to join our channel and stay updated with the latest news.

Next