Advertisement
ಅಡಿಕೆಯನ್ನು ಕೇವಲ ಪಾನ್‌ಗಳಲ್ಲಿ ಮಾತ್ರ ಬಳಸಬಹುದು ಎಂಬ ಕಲ್ಪನೆ ತಪ್ಪು, ಅಡಿಕೆಯ ಮರದಿಂದ ಬಿದ್ದ ಎಲೆಗಳು, ದಿಂಬುಗಳಿಂದ ಪೀಠೊಪಕರಣಗಳನ್ನು ತಯಾರಿಸಲಾಗುತ್ತದೆ.ಅಡಿಕೆ ಮರದ ಉರುವಲಿಗಾಗಿ, ಅಟ್ಟ ಕಟ್ಟಲು ಬಳಸ್ಪಲ್ಪಟ್ಟರೆ, ಪೂಜೆಗೆ ಕೂಡ ಅಡಿಕೆ ಸಿಂಗಾರ ಬಹು ಶ್ರೇಷ್ಠವಾದುದು.
ಅಡಿಕೆ ಮರದಿಂದ ಮನೆಯ ಹೊರಾಂಗಣ ಗೇಟ್ ನಿರ್ಮಾಣ, ಮನೆಯ ಅಟ್ಟ ಕಟ್ಟಲು , ಟೇಬಲ್, ಕಬೋರ್ಡ್, ಮಂಚ ಹಾಗೂ ದೇವರ ಮನೆಯ ದೇವರ ಸ್ಥಾನ ಜತೆ ಜತೆಗೆ ಮುಂತಾದ ರೀತಿಯಾಗಿ ಉಪಕರಣಗಳನ್ನು ತಯಾರಿಸಬಹುದು. ಇದು ಕೂಡ ಮನೆಯ ಆರೋಗ್ಯಕ್ಕೆ ಒಳ್ಳೆಯದು.
Related Articles
Advertisement
ಬಾಳಿಕೆಅಡಿಕೆ ಮರದ ಪಿಠೊಪಕರಣಗಳ ಬಳಕೆಯೂ, ಮನೆಯ ಪರಿಸರಕ್ಕೆ ಒಳ್ಳೆಯದು ಜತೆ ಜತೆಗೆ ಅತಿ ಹೆಚ್ಚು ದಿನಗಳು ಬಾಳಿಕೆ ಬರುತ್ತದೆ ಎಂದು ಕುಶಲ ಕರ್ಮಿಗಳು ಅಭಿಪ್ರಾಯಪಡುತ್ತಾರೆ. ಇನ್ನು ಅಡಿಕೆ ಮರದ ಪೀಠೊಪಕರಣಗಳನ್ನು ಸರಿಯಾಗಿ ಮೊದಲ ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ, ಸರಿ ಸುಮಾರು 20 ವರ್ಷಗಳ ಬಾಳಿಕೆ ಬರುತ್ತವೆ. ಸಾಂಪ್ರಾದಾಯಿಕ ಸೌಂದರ್ಯ
ಮನೆಗಳಲ್ಲಿ ಲೋಹಗಳಿಂದ ತಯಾರಿಸಿದ ಪೀಠೊಪಕರಣಗಳ ಬಳಕೆಗಿಂತ ಮರದಿಂದ ತಯಾರಿಸಿದ ಪಿಠೊಪಕರಣಗಳು ಮನೆಯ ಸಾಂಪ್ರದಾಯಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ ಹಾಗೂ ಮನೆಯಲ್ಲಿ ಒಂದು ನೆಮ್ಮದಿಯ ವಾತಾವರಣವನ್ನು ತಂದು ಕೊಡುತ್ತದೆ.