ಆನೇಕಲ್: ಸಮಾಜದಲ್ಲಿನ ಎಲ್ಲ ಬಡವರಿಗೂ ಕನಿಷ್ಠ ಸೌಲಭ್ಯಗಳೊಂದಿಗೆ ಜೀವನ ಸಾಗಿಸಬೇಕು ಎನ್ನುವ ಕನಸು ನಮ್ಮದು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲರೆಡ್ಡಿ ಹೇಳಿದರು. ತಾಲೂಕಿನ ಹುಲಿಮಂಗಲದಲ್ಲಿ ಬಡವರಿಗೆ ಗೃಹ ನಿರ್ಮಾಣ ಸಲಕರಣೆ ಹಾಗೂ ವೃದ್ಧರಿಗೆ ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಾಯ ಮಾಡಿ: ನಾವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಾಗ, ಆರ್ಥಿಕವಾಗಿ ಹಿಂದುಳಿದಿರುವವರಿಗೆ ಕನಿಷ್ಠ ಒಂದು ಮನೆ ನಿರ್ಮಾಣ ಮಾಡಿಕೊಳ್ಳಲು ಶೀಟು, ಸಿಮೆಂಟ್ ಉಚಿತವಾಗಿ ನೀಡಿದರೆ ಅವರು ಮನೆ ಕಟ್ಟಿಕೊಂಡು ನಮ್ಮಂತೆಯೇ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಸಂಘಗಳ ಮೂಲಕ ಈ ಭಾಗದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ, ಸರ್ಕಾರದಿಂದ ಸಿಗುವ ಸವಲತ್ತು ಮನೆಬಾಗಿಲಿಗೆ ತಲುಪಿಸಿದ್ದೇನೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಮಾಜ ಸೇವಕ, ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಪಿ.ರಾಜಗೋಪಾಲರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಯಿಂದ ಡಿಗ್ರಿವರೆಗೆ ಓದಲು 1,382 ವಿದ್ಯಾರ್ಥಿ ವೇತನ, 529 ಮನೆ ಕಟ್ಟಲು ಸಿಮೆಂಟ್ ಶೀಟ್‌ಗಳ ವಿತರಣೆ, ಒಂದು ಸಾವಿರ ನೋಟ್ ಪುಸ್ತಕ, 427 ವೃದ್ಧರಿಗೆ ಕಂಬಳಿ, ಅಂಗವಿಕಲರಿಗೆ 3
ತ್ರಿಚಕ್ರ ವಾಹನ, ಒಂದು ವ್ಹೀಲ್‌ಚೇರ್, ಹೃದಯ ಚಿಕಿತ್ಸೆಗೆ ಸಹಾಯ ಧನ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ನಾಮರ್ದೇಶಿತ ಸದಸ್ಯೆ ಡಿ.ಕೆ.ರಾಧಾಗೌಡ, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಎಂ.ಬಾಬು,
ಪದವೀಧರ ವೇದಿಕೆ ಅಧ್ಯಕ್ಷ ರಾಮೋಜಿಗೌಡ, ಉದಯ್ ಕುಮಾರ್, ಜೊಸೇಫ್, ಚಿನ್ನಪ್ಪ, ಸಾಯಿ ಮಂಜು, ಕೃಷ್ಣಮೂರ್ತಿ, ಕುಮಾರ್, ತಿರುಪಾಳ್ಯ ಉದಯ್ ಶಂಕರ್, ಪುನೀತ್, ಪುರುಷೋತ್ತಮ್, ಪಾಟೀಲ್, ರತ್ನಮ್ಮ,
ಮುದಾಸಿರ್, ವಿನೋದ ಮತ್ತಿತರರಿದ್ದರು.