Advertisement

2 ವರ್ಷದಲ್ಲಿ 9 ಲಕ್ಷ ಮನೆ ನಿರ್ಮಾಣ

08:04 PM Jul 09, 2021 | Team Udayavani |

ಬೆಂಗಳೂರು: ಮುಂದಿನ 2 ವರ್ಷದಲ್ಲಿ ಕೇಂದ್ರ ಹಾಗೂರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಯಡಿ 9 ಲಕ್ಷಮನೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಸತಿಇಲಾಖೆ ಪ್ರಗತಿ ಪರಿ ಶೀಲನೆ ಸಭೆಯಲ್ಲಿ ಈತೀರ್ಮಾನ ಕೈಗೊಳ್ಳಲಾಗಿದೆ.

Advertisement

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ರಾಜ್ಯದಲ್ಲಿವಸತಿಹೀನರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿಎರಡು ವರ್ಷದಲ್ಲಿ ರಾಜ್ಯ ಸರ್ಕಾರದ ಯೋಜನೆ ಗಳಡಿ 5ಲಕ್ಷ ಮನೆ, ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆನಿರ್ಮಿಸಲಾಗುವುದು ಎಂದು ಹೇಳಿದರು.ಮನೆ ನಿರ್ಮಾಣ ಸಂಬಂಧ ಪ.ಜಾತಿ ಫಲಾನುಭವಿಗಳಿಗೆ1.75 ಲಕ್ಷ ರೂ. ಮತ್ತು ಇತರೆ ವರ್ಗದವರಿಗೆ 1.20 ಲಕ್ಷ ರೂ.ಸಹಾಯಧನ ದೊರೆಯಲಿದೆ.

ಕೇಂದ್ರದ ವಸತಿ ಯೋಜನೆ ಗಳಡಿಮಂಜೂರಾಗಿರುವ ಮನೆಗಳಿಗೆ ಫಲಾನುಭವಿಗಳಿಗೆ ಶೇ.60ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ48,000 ರೂ. ಸಹಾಯಧನ ಲಭ್ಯವಿದೆ ಎಂದು ತಿಳಿಸಿದರು.ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತಲಾ 100ಮನೆಗಳನ್ನು ಹಂಚಿಕೆ ಮಾಡಲಾಗುವುದು. ಪ್ರಸ್ತುತನಿರ್ಮಾಣದ ವಿವಿಧ ಹಂತಗಳಲ್ಲಿರುವ ರಾಜ್ಯ ಸರ್ಕಾರದಬಸವ ವಸತಿ ಯೋಜನೆ, ಅಂಬೇಡ್ಕರ್‌ ನಿವಾಸ್‌ ಯೋಜನೆ,ದೇವರಾಜ ಅರಸು ವಸತಿ ಯೋಜನೆ,ವಾಜಪೇಯಿ ನಗರ ವಸತಿ ಯೋಜನೆಗಳಡಿಕೈಗೆತ್ತಿಕೊಂಡಿರುವ ಕಾಮಗಾರಿ ಪೂರ್ಣ ಗೊಳಿಸಲು 6,200 ಕೋಟಿ ರೂ.ಅಗತ್ಯವಿದೆ. ಹಂತಹಂತವಾಗಿ ಬಿಡುಗಡೆ ಮಾಡ ಲಾಗು ವುದುಎಂದು ಮುಖ್ಯಮಂತ್ರಿಯವರಿಂದ ಭರವಸೆದೊರೆತಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹು ಮಹಡಿ ಯೋಜನೆಯಡಿ ಆ.15 ರಂದು 5 ಸಾವಿರ ಮನೆಗಳ ಹಂಚಿಕೆ ಮಾಡಲುನಿರ್ಧರಿಸಲಾಗಿದೆ ಎಂದರು. ಸಿಎಸ್‌ ಪಿ. ರವಿಕುಮಾರ್‌,ಎಸಿಎಸ್‌ ವಂದಿತಾ ಶರ್ಮಾ, ಆರ್ಥಿಕ ಇಲಾಖೆಯ ಐ.ಎಸ್‌.ಎನ್‌.ಪ್ರಸಾದ್‌, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿ, ವಸತಿಇಲಾಖೆ ಪ್ರಧಾನ ಕಾರ್ಯ ದರ್ಶಿ ಮನೋಜ್‌ಕುಮಾ ರ್‌ಮೀನಾ, ರಾಜೀವ್‌ಗಾಂದಿ ವಸತಿ ನಿಗಮದ ವ್ಯವಸ್ಥಾಪಕನಿರ್ದೇಶಕ ಡಾ.ಬಸವರಾಜ್‌. ಕೊಳಗೇರಿ ಅಭಿವೃದ್ಧಿ ಮಂಡಳಿಆಯುಕ್ತ ವೆಂಕಟೇಶ್‌ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next