Advertisement

ಡಿಸಿಸಿ ಬ್ಯಾಂಕ್‌ನಿಂದ ಗೃಹೋಪಕರಣ ಮಾರಾಟ

03:26 PM Nov 25, 2019 | Suhan S |

ಕೋಲಾರ: ಬಡ, ಮಧ್ಯಮವರ್ಗದ ಜನತೆಗೆ ಗೃಹೋಪಕರಣಗಳನ್ನು ಬಡ್ಡಿರಹಿತ ಸುಲಭ ಕಂತು ಗಳಲ್ಲಿ ಒದಗಿಸುವ ಡಿಸಿಸಿ ಬ್ಯಾಂಕ್‌ ನಿರ್ಧಾರ ಸಹಕಾರ ರಂಗದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

Advertisement

ನಗರದ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್‌, ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಗೃಹಬಳಕೆ ವಸ್ತುಗಳ ಪ್ರದರ್ಶನ ಉದ್ಘಾಟಿಸಿ, 102 ಮಹಿಳಾ ಸಂಘಗಳಿಗೆ 4.94 ಕೋಟಿ ರೂ. ಸಾಲ ವಿತರಿಸಿ ಮಾತನಾಡಿದ ಅವರು, ಬಡ ಮಹಿಳೆಯರಿಗೆ ತಮ್ಮ ಮನೆಗೆ ಆಧುನಿಕ ಗೃಹೋಪಯೋಗಿ ಉಪಕರಣ ಕೊಂಡೊಯ್ಯುವ ಆಸೆ ಇದ್ದರೂ, ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಡ್ಡಿರಹಿತ ಸುಲಭ ಕಂತುಗಳಲ್ಲಿ ಪ್ರತಿಷ್ಠಿತ ಕಂಪನಿ ಗಳ ಟೀವಿ, ಫ್ರೀಡ್ಜ್, ಫ್ಯಾನ್‌, ವಾಷಿಂಗ್‌ ಮೆಷಿನ್‌ ಮತ್ತಿತರ ಉಪಕರಣಗಳನ್ನು ಪಡೆಯಲು ಅವಕಾಶ ಕಲ್ಪಿಸಿರುವುದು ಬ್ಯಾಲಹಳ್ಳಿ ಗೋವಿಂದಗೌಡರ ಜನಪರ ನಿರ್ಧಾರಕ್ಕೆ ಸಾಕ್ಷಿ ಎಂದು ಹೇಳಿದರು.

ಮೀಟರ್‌ ಬಡ್ಡಿ ಹಾಕಿ ಸಾಲ ಕೊಟ್ಟವರನ್ನು ಜನತೆ ಎಂದಿಗೂ ಸ್ಮರಿಸುವುದಿಲ್ಲ, ಸತ್ತಾಗ ಹೆಣ ಹೊರು ವವರೂ ಇರುವುದಿಲ್ಲ ಎಂಬುದನ್ನು ಉದಾಹರಣೆ ಸಹಿತ ತಿಳಿಸಿದ ಅವರು, ಡಿಸಿಸಿ ಬ್ಯಾಂಕಿನಿಂದ ತಾಯಂದಿರು, ರೈತರಿಗೆ ಬಡ್ಡಿ ವ್ಯವಹಾರದಿಂದ ಮುಕ್ತಿ ಸಿಕ್ಕಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ನಿಷ್ಕ್ರಿಯ ಆಸ್ತಿಯ ಮೌಲ್ಯ ಎನ್‌ ಪಿಎ ಶೇ.3ಕ್ಕೆ ಇಳಿದು, ರಾಜ್ಯಮಟ್ಟದಲ್ಲಿ ಗೌರವ ಗಳಿಸಿದೆ. ಮಹಿಳೆಯರು ನಂಬಿಕೆ ಉಳಿಸಿಕೊಂಡು ಸಾಲ ಪಾವತಿ ಮಾಡಿ, ಉಪಕರಣಕೊಂಡು ಉತ್ತಮ ಜೀವನ ನಡೆಸಿ ಎಂದು ಹೇಳಿದರು.ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್‌ ಕಸಬಾ ದಕ್ಷಿಣ ಸೊಸೈಟಿ ವತಿಯಿಂದ ಮಹಿಳೆಯರಿಗೆ 17 ಕೋಟಿ ರೂ ಹಾಗೂ ರೈತರಿಗೆ ಐದು ಕೋಟಿ ರೂ ಸಾಲ ಒದಗಿಸಿದೆ ಇದೀಗ ಗೃಹೋಪಯೋಗಿ ಉಪಕರಣಗಳನ್ನು ಇಲ್ಲೇ ಮೊದಲು ಒದಗಿಸಲಾಗಿದ್ದು, ತಾಯಂದಿರು ಸದುಪಯೋಗ ಪಡೆದಕೊಳ್ಳಬೇಕು ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ ಕುಮಾರ್‌, ದೇಶದಲ್ಲೇ ಮಹಿಳೆಯರಿಗೆ 1 ಸಾವಿರ ಕೋಟಿ ರೂ ಸಾಲ ಒದಗಿಸಿರುವ ಕೋಲಾರ ಡಿಸಿಸಿ ಬ್ಯಾಂಕ್‌ ಸಾಧನೆ ಐತಿಹಾಸಿಕ ದಾಖಲೆ ಎಂದು ತಿಳಿಸಿದರು. ಅದೇ ರೀತಿ ಗೃಹೋಪಕರಣಗಳನ್ನು ಬಡ್ಡಿರಹಿತ ಸುಲಭ ಕಂತುಗಳಲ್ಲಿ ಒದಗಿಸುವ ಕಾರ್ಯವೂ ರಾಜ್ಯದ ಸಹಕಾರಿ ರಂಗದಲ್ಲೇ ಇದೇ ಮೊದಲು ಎಂದು ತಿಳಿಸಿ,ಮಹಿಳೆಯರು ಇದರ ಸದುಪ ಯೋಗ ಪಡೆಯಬೇಕು ಎಂದರು.

Advertisement

ಕಸಬಾ ಸೊಸೈಟಿಯಿಂದ 102 ಮಹಿಳಾ ಸಂಘ ಗಳಿಗೆ 4.94 ಕೋಟಿ ರೂ ನೀಡುತ್ತಿರುವ ಸಾಲ ಸದ್ವಿನಿ ಯೋಗವಾಗಲಿ, ಮಹಿಳೆಯರು ಸಮರ್ಪಕ ಮರು ಪಾವತಿ ಮೂಲಕ ನಂಬಿಕೆ ಹೆಚ್ಚಿಸಿಕೊಳ್ಳಿ ಎಂದರು. ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್‌ ನಿರ್ದೇಶಕ

ಯಲವಾರ ಸೊಣ್ಣೇಗೌಡ, ಡಿಸಿಸಿ ಬ್ಯಾಂಕ್‌ ಮೂಲಕ ಸಾಲ ಪಡೆಯುವುದು ಮಾತ್ರವಲ್ಲ ನಿಮ್ಮ ಉಳಿತಾಯ ಹಣವನ್ನು ಇದೇ ಬ್ಯಾಂಕಿನಲ್ಲಿಟ್ಟು ಮತ್ತಷ್ಟು ಮಹಿಳಾ ಸಂಘಗಳಿಗೆ ಸಾಲ ಸಿಗಲು ಸಹಕಾರ ನೀಡಿ ಎಂದರು.  ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌, ಭದ್ರತೆಯಿಲ್ಲದೇ ಸಾಲ ನೀಡುವ ದಿಟ್ಟ ನಿರ್ಧಾರ ಬ್ಯಾಂಕ್‌ ಕೈಗೊಂಡು ಕಾರ್ಯಗತಗೊಳಿಸಿದೆ, ತಾಯಂದಿರು ಅಷ್ಟೇ ನಂಬಿಕೆಯಿಂದ ಮರುಪಾವತಿ ಮಾಡಿ ಎಂದರು.

ಡಿಸಿಸಿ ಬ್ಯಾಂಕ್‌ ಎಂಡಿ ರವಿ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಚೆಂಜಿಮಲೆ ರಮೇಶ್‌, ಕಸಬಾ ದಕ್ಷಿಣ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್‌, ಉಪಾಧ್ಯಕ್ಷ ಸೀನಪ್ಪ, ಸಿಇಒ ವೆಂಕಟೇಶ್‌, ನಿರ್ದೇಶಕರಾದ ನಾರಾಯಣಸ್ವಾಮಿ, ವೆಂಕಟೇಶಪ್ಪ, ಶ್ರೀರಾಮ ರೆಡ್ಡಿ, ಚಿಕ್ಕಹಸಾಳ ಸೀನಪ್ಪ, ಮುನಿ ವೆಂಕಟಪ್ಪ, ಪದ್ಮಾವತಿ, ಸರೋಜಮ್ಮ, ವೈ.ಶಿವ ಕುಮಾರ್‌, ಗ್ರೀನ್‌ವೇ, ಶ್ರೀರಾಮ ಬಳಕೆದಾರರ ಸಹಕಾರ ಸಂಘದ ಪ್ರತಿನಿಧಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next