Advertisement
ಈ ಹಿಂದೆ ಮಂಜೂರಾಗಿರುವ ಮನೆಗಳನ್ನು ಪೂರ್ಣಗೊಳಿಸದೆ ಹೊಸದಾಗಿ ಮನೆ ಮಂಜೂರು ಮಾಡದಿರಲು ಸರಕಾರ ನಿರ್ಧರಿಸಿದ್ದು, ಇದರಿಂದ ಹೊಸ ಆಕಾಂಕ್ಷಿಗಳಿಗೆ ತೊಡಕಾಗಿದೆ. ನಾಲ್ಕು ವರ್ಷಗಳಿಂದ ಹೊಸ ಮನೆ ಮಂಜೂರಾತಿ ಆಗುತ್ತಿಲ್ಲ. ಸದ್ಯ ಆಯ್ದ ಗ್ರಾ.ಪಂ.ಗಳಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆಯಲ್ಲಿ ಮಾತ್ರ ಹೊಸ ಮನೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.
Related Articles
Advertisement
ತಳಪಾಯದಲ್ಲೇ ಬಾಕಿ :
ದ.ಕ. ಜಿಲ್ಲೆಯಲ್ಲಿ 2010-11ರಲ್ಲಿ ಮಂಜೂರಾದ ಮನೆಗಳ ಪೈಕಿ 266 ಮನೆಗಳು ಇನ್ನೂ ತಳಪಾಯದ ಹಂತ ದಲ್ಲಿವೆ. 140 ಮನೆಗಳು ಗೋಡೆ ಹಂತ ದಲ್ಲಿವೆ. ಉಡುಪಿ ಜಿಲ್ಲೆಯಲ್ಲಿ 2010-11ರಲ್ಲಿ ಮಂಜೂರಾದ ಮನೆಗಳ ಪೈಕಿ 230 ಮನೆಗಳು ತಳಪಾಯದಲ್ಲೇ ಬಾಕಿಯಾಗಿವೆ.
ಪಿಡಿಒಗಳಿಗೆ ಹೊಣೆ:
ಮನೆ ಕಾಮಗಾರಿ ಪೂರ್ಣಗೊಳಿಸುವ ಹೊಣೆಯನ್ನು ಪಿಡಿಒಗಳಿಗೆ ವಹಿಸಲಾಗಿದೆ. ಮನೆ ಕಾಮಗಾರಿ ಬಾಕಿ ಇರಿಸಿ ಕೊಂಡಿರುವ ಫಲಾನುಭವಿಗಳ ಪೈಕಿ ಹೆಚ್ಚಿನ ಮಂದಿ ಹಣಕಾಸಿನ ಕಾರಣ ಮುಂದಿಡುತ್ತಿದ್ದಾರೆ. ಮಳೆ, ಕೊರೊನಾ ಕಾರಣ ಇನ್ನು ಕೆಲವರದು. 2010ರಲ್ಲಿ ಮನೆ ಕಾಮಗಾರಿ ಆರಂಭಿಸಿ ಈಗ ಪೂರ್ಣ ಗೊಳಿಸಿದರೆ ಅನುದಾನ ಬಿಡುಗಡೆಯಾಗುತ್ತದೆ ಎನ್ನುತ್ತಾರೆ ಪಿಡಿಒಗಳು.
ಈಗ ಮನೆಗಳು ಪೂರ್ಣಗೊಳ್ಳದಿರಲು ಆರ್ಥಿಕ ತೊಡಕು ಪ್ರಮುಖ ಕಾರಣ. ಕೆಲವು ಮಂದಿ ನಿಯಮವನ್ನು ಉಲ್ಲಂ ಸಿ ಮನೆ ನಿರ್ಮಿಸಿದ್ದಾರೆ. ಅವುಗಳನ್ನು “ನಾಟ್ ಒಕೆ’ ಎಂದು ಪರಿಗಣಿಸಲಾಗಿದೆ. ಹಂತ ಹಂತವಾಗಿ ಫೋಟೋ ತೆಗೆಯದಿರುವುದು, ವಸತಿಯೇತರ ಉದ್ದೇಶಕ್ಕೆ ನಿರ್ಮಾಣ, ನಿಗದಿತ ಮೊತ್ತ, ನಿಗದಿತ ವಿಸ್ತೀರ್ಣ ಮೀರಿ ನಿರ್ಮಾಣ ಮಾಡದಿರುವುದು ಮೊದಲಾದವು “ನಾಟ್ ಓಕೆ’ ಪಟ್ಟಿಯಲ್ಲಿ ಸೇರುತ್ತವೆ. ಇಂತಹ “ನಾಟ್‌ಒಕೆ’ ಮನೆಗಳ ಬಗ್ಗೆ ಮತ್ತೂಮ್ಮೆ ಪರಿಶೀಲಿಸಿ “ಓಕೆ’ ಸಾಧ್ಯ
ತೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ನಿಗಮವು ಸೂಚಿಸಿದೆ. ಆದರೆ ಇಂತಹ “ನಾಟ್‌ಒಕೆ’ ಮನೆಗಳು “ಒಕೆ’ ಆಗುವ ಸಾಧ್ಯತೆಗಳು ಕಡಿಮೆ. ಇದರ ಜತೆಗೆ ಆಧಾರ್, ಮೊಬೈಲ್ ಸಂಖ್ಯೆ ಮೊದಲಾದ ತಾಂತ್ರಿಕ ದೋಷಗಳಿಂದ ಅನುದಾನ ವಿಳಂಬವಾಗಿರುತ್ತದೆ. ಆದರೆ “ತಾಂತ್ರಿಕ ಕಾರಣ’ದ ಪ್ರಕರಣಗಳು ತೀರಾ ಕಡಿಮೆ, ಇದನ್ನು ಸರಿಪಡಿಸಬಹುದು ಎನ್ನುತ್ತಾರೆ ಅಧಿಕಾರಿಗಳು.
-ಸಂತೋಷ್ ಬೊಳ್ಳೆಟ್ಟು