ಕೆಜಿಎಫ್ 2′ ಸಿನಿಮಾ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ “ಹೊಂಬಾಳೆ ಫಿಲಂಸ್’ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ “ಬಾಕ್ಸಾಫೀಸ್ ಸುಲ್ತಾನ್ನ ರೇಂಜ್ ಮುಂದುವರೆದಿದೆ..’ ಎಂದು ಟ್ವೀಟ್ ಮಾಡಿತ್ತು.
ಈ ಟ್ವೀಟ್ ಇದೀಗ ನಟ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ “ಹೊಂಬಾಳೆ ಫಿಲಂಸ್’ ಸಂಸ್ಥೆ “ಬಾಕ್ಸಾಫೀಸ್ ಸುಲ್ತಾನ್’ ಎಂಬ ಪದವನ್ನು ಬಳಸಿರುವುದಕ್ಕೆ ತರಾಟೆಗೆ ತೆಗೆದು ಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಎಂ.ಬಿ.ಪಾಟೀಲ್ ಹೇಳಿಕೆಯೇ ಮುಖ್ಯ,ನೋ ಕಾಮೆಂಟ್ಸ್ : ಸಿದ್ದರಾಮಯ್ಯ ಕಿಡಿ
ಇಷ್ಟಕ್ಕೆ ನಿಲ್ಲದೆ ಟ್ವಿಟ್ಟರ್ನಲ್ಲಿ ಇಬ್ಬರೂ ನಟರ ಅಭಿಮಾನಿಗಳಿಂದ ಪರ-ವಿರೋಧ ಟ್ವೀಟ್ಗಳು ಜೋರಾಗಿ ನಡೆಯುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ತಣ್ಣಗಾಗಿದ್ದ ಫ್ಯಾನ್ಸ್ಗಳ ನಡುವಿನ ಸ್ಟಾರ್ ವಾರ್ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗುವಂತೆ ಕಾಣುತ್ತಿದೆ.