Advertisement

ಫ್ಲಾಸ್ಟರ್‌, ಕಾರು, ಗನ್.. ಪೋಸ್ಟರ್‌ ನಲ್ಲೇ ಸಸ್ಪೆನ್ಸ್‌ ; ʼಧೂಮಂʼ ಫಸ್ಟ್‌ ಲುಕ್‌ ಔಟ್  

12:26 PM Apr 17, 2023 | Team Udayavani |

ಬೆಂಗಳೂರು: ʼಲೂಸಿಯʼ ಪವನ್‌ ಕುಮಾರ್‌ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಬಹು ನಿರೀಕ್ಷಿತ ʼಧೂಮಂʼ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.  

Advertisement

ಈಗಾಗಲೇ ಸಿನಿಮಾರಂಗದಲ್ಲಿ ಮುಟ್ಟಿದೆಲ್ಲ ಚಿನ್ನವೆಂಬಂತೆ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದೆಲ್ಲವೂ ಕೋಟಿ ಕಮಾಯಿ ಮಾಡುತ್ತಿದೆ. ಈಗಾಗಲೇ ಪೃಥ್ವಿರಾಜ್‌ ಸುಕುಮಾರನ್‌ ಅವರ ʼಟೈಸನ್‌ʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ, ಫಾಹದ್‌ ಫಾಸಿಲ್‌ ಅವರನ್ನು ನಾಯಕನ್ನಾಗಿಸಿಕೊಂಡು ʼಧೂಮಂʼ ಸಿನಿಮಾಕ್ಕೆ ಬಂಡವಾಳ ಹಾಕಿದ್ದು ಗೊತ್ತೇ ಇದೆ. ಸಿನಿಮಾ ಅನೌನ್ಸ್‌ ಆದ ದಿನದಿಂದ ದೊಡ್ಡ ಮಟ್ಟದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿತ್ತು. ಇದೀಗ ಸಿನಿಮಾದ ಮೊದಲ ಲುಕ್‌ ರಿಲೀಸ್‌ ಮಾಡಿದೆ.

ಫೋಸ್ಟರ್‌ ನಲ್ಲಿ ನಾಯಕನ ಬಾಯಿಗೆ ಫ್ಲಾಸ್ಟರ್‌ ಹಾಕಲಾಗಿದೆ. ಅದರ ಸುತ್ತ ಸಸ್ಪೆನ್ಸ್‌ ಹುಟ್ಟಿಸುವಂತೆ ಇತರೆ ಪಾತ್ರಗಳ ಲುಕ್‌ ತೋರಿಸಲಾಗಿದೆ.  ಕಾರು, ಗನ್‌ ಶೂಟ್.‌. ಹೀಗೆ ಪೋಸ್ಟರ್‌ ನಲ್ಲಿ ಸಸ್ಪೆನ್ಸ್‌ ಕ್ರಿಯೇಟ್‌ ಮಾಡಲಾಗಿದೆ. ಬೆಂಕಿ ಇಲ್ಲದೆ ಹೊಗೆ ಆಡಲ್ಲ, ಇದು ಮೊದಲ ಕಿಡಿ ಎನ್ನುವ ಬರಹವನ್ನು ಪೋಸ್ಟರ್‌ ಕೆಳಗೆ ಬರೆಯಲಾಗಿದೆ.

ಫಾಹದ್‌ ಜೊತೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾ ರಿಲೀಸ್‌ ಆಗಲಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next