Advertisement

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

07:12 PM Sep 12, 2024 | Team Udayavani |

ಬೆಂಗಳೂರು: ಬ್ಲಾಕ್‌ಬಸ್ಟರ್ ಚಲನಚಿತ್ರಗಳಾದ ‘ಕೆಜಿಎಫ್’, ‘ಕಾಂತಾರ’ ಮತ್ತು ‘ಸಾಲಾರ್’ ಮೂಲಕ ದೊಡ್ಡ ಯಶಸ್ಸು ಪಡೆದ ಹೊಂಬಾಳೆ ಫಿಲ್ಮ್ಸ್(Hombale Films) ಬ್ಯಾನರ್ನ ಆಕ್ಷನ್ ಚಿತ್ರ “ಬಘೀರ”(Bagheera) ವನ್ನು ಅಕ್ಟೋಬರ್ 31 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ.

Advertisement

ವಿಜಯ್ ಕಿರಗಂದೂರು ಅವರ ಪ್ರೊಡಕ್ಷನ್ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ಬುಧವಾರ(ಸೆ11) ಸಂಜೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕದ ಸುದ್ದಿಯನ್ನು ಹಂಚಿಕೊಂಡಿದೆ.

“ನ್ಯಾಯಕ್ಕಾಗಿ ಹುಡುಕಾಟ ಪ್ರಾರಂಭವಾಗುತ್ತದೆ! ಅಕ್ಟೋಬರ್ 31 ರಂದು #ಬಘೀರಾ ಚಿತ್ರಮಂದಿರಗಳಲ್ಲಿ ಘರ್ಜಿಸುತ್ತದೆ” ಎಂದು ಹೊಂಬಾಳೆ ಫಿಲ್ಮ್ಸ್ ಚಿತ್ರದ ಪೋಸ್ಟರ್ ಅನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದೆ.

content-img

ಯಶ್ ಅವರ “ಕೆಜಿಎಫ್” ಎರಡು ಸರಣಿ ಚಿತ್ರಗಳು ಮತ್ತು ಪ್ರಭಾಸ್ “ಸಲಾರ್: ಭಾಗ 1” ನಿರ್ದೇಶಕ ಪ್ರಶಾಂತ್ ನೀಲ್ ಅವರು “ಬಘೀರ” ಕಥೆ ಬರೆದಿದ್ದು , ಚಿತ್ರವನ್ನು ಡಾ ಸೂರಿ ನಿರ್ದೇಶಿಸಿದ್ದಾರೆ “ಉಗ್ರಂ” ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಯಶಸ್ಸಿನ ನಿರೀಕ್ಷೆಯನ್ನು ಶ್ರೀ ಮುರಳಿ ಇರಿಸಿಕೊಂಡಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಆಕ್ಷನ್ ಥ್ರಿಲ್ಲರ್ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.