Advertisement
ಬೇಕಾಗುವ ಸಾಮಗ್ರಿಗಳುತೊಗರಿಬೇಳೆ- 2 ಕಪ್
ಕಡಳೆಬೇಳೆ- 1 ಕಪ್
ಹಸಿಮೆಣಸಿನಕಾಯಿ- 5
ಜೀರಿಗೆ – 1 ಚಮಚ
ತೆಂಗಿನ ತುರಿ- 1 ಕಪ್
ಅರಶಿನ- ಒಂದು ಚಿಟಿಕೆ
ಶುಂಠಿ- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಮೈದಾ ಹಿಟ್ಟು- 3 ಕಪ್
ಎಣ್ಣೆ – ಸ್ವಲ್ಪ
ಮೈದಾ ಹಿಟ್ಟನ್ನು ಚೆನ್ನಾಗಿ ಕಲಸಿ ಅದಕ್ಕೆ ಎಣ್ಣೆ ಹಾಕಿ ಒಂದು ಗಂಟೆ ಇಡಿ. ಅನಂತರ ಅದಕ್ಕೆ ತೊಗರಿಬೇಳೆ ಮತ್ತು ಕಡಲೆಬೇಳೆಯನ್ನು ಚೆನ್ನಾಗಿ ಬೇಯಿಸಿದ ಬಳಿಕ ಅದರ ನೀರನ್ನು ತೆಗೆದು ಅದಕ್ಕೆ ಹಸಿಮೆಣಸಿಕಾಯಿ, ಜೀರಿಗೆ, ತೆಂಗಿನ ತುರಿ, ಅರಿಶಿನ, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಮೈದಾ ಹಿಟ್ಟನ್ನು ಸಣ್ಣಕ್ಕೆ ಉಂಡೆಯನ್ನಾಗಿ ಮಾಡಿ ಅದರ ಮಧ್ಯೆ ರುಬ್ಬಿದ ಖಾರವನ್ನು ಲಟ್ಟಿಸಿ. ಅನಂತರ ಅದನ್ನು ಕಾವಲಿಯಲ್ಲಿ ಬೇಯಿಸಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಚಿರೋಟಿ ರವೆ-1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಹಾಲು- 1 ಕಪ್
ಸಕ್ಕರೆ- ಅರ್ಧ ಕಪ್
ಗಸೆಗಸೆ- 2 ಚಮಚ
ಬಾದಾಮಿ- 1 ಹಿಡಿ
ಕಾಯಿತುರಿ- 1 ಹಿಡಿ
ಏಲಕ್ಕಿ-2
ಕೇಸರಿ ದಳ- ಸ್ವಲ್ಪ
ಎಣ್ಣೆ- ಸ್ವಲ್ಲ
ಗೋಡಂಬಿ-ಸ್ವಲ್ಪ
Related Articles
ಮೊದಲು ಬಾದಾಮಿ ಮತ್ತು ಗೋಡಂಬಿಯನ್ನು ಒಂದು ಗಂಟೆ ನೆನೆಸಿಡಿ. ಅನಂತರ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಗಸೆಗಸೆಯನ್ನು ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಅದು ತನ್ನಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ. ಜತೆಗೆ ತುರಿದ ತೆಂಗಿನಕಾಯಿ ಮತ್ತು ನೆನೆಸಿಟ್ಟ ಗೋಡಂಬಿ ಮತ್ತು ಬಾದಾಮಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಕ್ಕರೆ ಮತ್ತು ಸ್ವಲ್ಪ ಏಲಕ್ಕಿ ಹಾಕಿ. ಅನಂತರ ಅದಕ್ಕೆ ಹಾಲು ಹಾಕಿ ಅದನ್ನು ಕುದಿಯಲು ಇಡಿ. ಕುದಿಯುವಾಘ ಅದಕ್ಕೆ ಕೇಸರಿ ದಳ ಹಾಕಿ. ಚೆನ್ನಾಗಿ ಕುದಿದ ಹಾಲನ್ನು ಒಂದು ಬದಿಗಿಡಿ.
Advertisement
ಒಂದು ಪಾತ್ರೆಯಲ್ಲಿ ಮೈದಾ ತೆಗೆದುಕೊಂಡು ಅದಕ್ಕೆ ಉಪ್ಪು ಮತ್ತು ಎಣ್ಣೆ ಅಥವಾ ತುಪ್ಪ ಹಾಕಿ ಗಟ್ಟಿ ಹಿಟ್ಟು ತಯಾರಿಸಿಕೊಳ್ಳಿ. ಬೇಕಾದಷ್ಟು ನೀರು ಸೇರಿಸಿಕೊಳ್ಳಬಹುದು. ಅನಂತರ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿ ಮಾದರಿಯಲ್ಲಿ ಲಟ್ಟಿಸಿಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ ಪ್ಯಾನ್‌ಗೆ ಎಣ್ಣೆ ಹಾಕಿ ಅದರಲ್ಲಿ ಹಿಟ್ಟನ್ನು ಕಂದು ಬಣ್ಣದವರೆಗೆ ಕಾಯಿಸಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಮೊದಲೇ ತಯಾರಿಸಿ ಹಾಲು ಹಾಕಿ. ಈಗ ಹಾಲು ಪಾಯಸ ಸವಿಯಲು ಸಿದ್ಧ.
ರಂಜಿನಿ ಮಿತ್ತಡ್ಕ