ಶಿವಮೊಗ್ಗ: ಮಳೆ ಅಬ್ಬರ ಮುಂದುವರೆದ ಹಿನ್ನೆಲೆ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ತಾಲ್ಲೂಕಿನ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಗುರುವಾರ ಘೋಷಿಸಲಾಗಿದೆ.
ಪುನರ್ವಸು ಮಳೆ ಎರಡು ವರ್ಷಗಳ ನಂತರ ಅಬ್ಬರಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಕಷ್ಟಕರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಿಂದ ಅನೇಕ ಕಡೆ ಅವಘಡಗಳು ಸಂಭವಿಸುತಿದೆ ಈ ಹಿನ್ನಲೆಯಲ್ಲಿ ಜುಲೈ 16 ರ ಮಂಗಳವಾರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬುಧವಾರ ಮೊಹರಂ ಅಂಗವಾಗಿ ಸರ್ಕಾರಿ ರಜೆಯಿತ್ತು.
ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ನಾಳೆ ರಜೆಯನ್ನು ಘೋಷಿಸಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Rajasthan: ಮೊಹರಂ ವೇಳೆ ಶರಬತ್ ಕುಡಿದು 400 ಮಂದಿ ಅಸ್ವಸ್ಥ