Advertisement

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು

01:20 AM Sep 16, 2024 | Team Udayavani |

ಮಲ್ಪೆ: ಒಂದಡೆ ಶನಿವಾರದಿಂದ ಸೋಮವಾರದವರೆಗೆ ಶಾಲಾ-ಕಾಲೇಜು, ಸರಕಾರಿ ರಜೆಯಾದರೆ, ಇನ್ನೊಂದಡೆ ಮಳೆಯ ಕೊಂಚ ಬಿಡುವಿನಿಂದ ಶುಭ್ರ ವಾತಾವರಣ ಇರುವ ಹಿನ್ನೆಲೆಯಲ್ಲಿ ರವಿವಾರ ಮಲ್ಪೆ ಬೀಚ್‌ ಮತ್ತು ಸೀವಾಕ್‌ ವೇಯಲ್ಲಿ ಜನಸಂದಣಿ ಕಂಡು ಬಂದಿದೆ.

Advertisement

ಶನಿವಾರದಿಂದ ಕಡಲತೀರಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ರವಿವಾರ ಬೆಳಗ್ಗಿನಿಂದ ಪ್ರವಾಸಿಗರ ವಾಹನಗಳು ಬೀಚ್‌ ಕಡೆಗೆ ಬರಲಾರಂಭಿಸಿವೆ.
ತಡೆಬೇಲಿ ದಾಟಿದ ಪ್ರವಾಸಿಗರು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಜಿಲ್ಲಾಡಳಿತ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸುತ್ತದೆ. ಆದರೆ ರವಿವಾರ ಮಾತ್ರ ಬಹುತೇಕ ಎಲ್ಲ ಪ್ರವಾಸಿಗರು ತಡೆಬೇಲಿ ದಾಟಿ ನೀರಿಗಿಳಿದು ಈಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ.

ಇತ್ತ ಸೀವಾಕ್‌ನಲ್ಲೂ ಜನ
ಸೈಂಟ್‌ಮೇರಿಸ್‌ ದ್ವೀಪ ಪ್ರವೇಶವನ್ನು ಜಿಲ್ಲಾಡಳಿತ ಮುಕ್ತಗೊಳಿಸಿದ್ದು, ರವಿವಾರದಿಂದ ದ್ವೀಪಯಾನ ಆರಂಭವಾಗಿದೆ. ಹೆಚ್ಚಿನ ಪ್ರವಾಸಿಗರು ಸೈಂಟ್‌ಮೇರಿಸ್‌ ದ್ವೀಪಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನದ ಬಳಿಕ ಸೀವಾಕ್‌ ಮತ್ತು ಇಲ್ಲಿನ ಗಾರ್ಡನ್‌ನಲ್ಲೂ ಜನಸಂದಣಿ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next