Advertisement

Udupi: ಮನೆಬಿಟ್ಟು ಮಲ್ಪೆಗೆ ಬಂದಿದ್ದ ಹಾವೇರಿಯ ಇಬ್ಬರು ಬಾಲಕಿಯರ ರಕ್ಷಣೆ

02:16 AM Oct 20, 2024 | Team Udayavani |

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಇಬ್ಬರು ಬಾಲಕಿಯರನ್ನು ಶುಕ್ರವಾರ ರಕ್ಷಿಸಲಾಗಿದೆ. ಮನೆ ಬಿಟ್ಟು ಬಂದಿದ್ದ ಹಾವೇರಿ ಮೂಲದ ರೋಸ (13) ಹಾಗೂ ದುರ್ಗಮ್ಮ (16) ರಕ್ಷಿಸಲ್ಪಟ್ಟವರು.

Advertisement

ಬಾಲಕಿಯರ ಚಲನವಲನವನ್ನು ಕಂಡು ಸಂಶಯಗೊಂಡು ಬೀಚ್‌ ಗಸ್ತು ಸಿಬಂದಿ ಸುರೇಶ್‌ ಅಂಚನ್‌ ಮತ್ತು ಸುಬ್ರಹ್ಮಣ್ಯ ವಿಚಾರಿಸಿದಾಗ ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ. ತತ್‌ಕ್ಷಣ ಅವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದಾರೆ.

ನಿತ್ಯಾನಂದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣ ಘಟಕಕ್ಕೆ ವಸ್ತುಸ್ಥಿತಿಯನ್ನು ವಿವರಿಸಿ, ನಗರ ಮಹಿಳಾ ಪೊಲೀಸ್‌ ಠಾಣೆಯ ನಿರೀಕ್ಷಕ ಪ್ರೇಮನ್‌ ಗೌಡ ಪಾಟೀಲ್‌ ಮಾರ್ಗದರ್ಶನದಲ್ಲಿ ಪೇದೆ ಮಹದೇವ್‌ ಜತೆಗೆ ಬೀಚ್‌ಗೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ.

ಕಲ್ಯಾಣ ಸಮಿತಿಯ ಆದೇಶದಂತೆ ಬಾಲಕಿಯರನ್ನು ನಿಟ್ಟೂರಿನ ಬಾಲಭವನದಲ್ಲಿ ಇರಿಸಲಾಗಿದೆ. ಬಾಲಕಿಯರಿಗೆ ಹೆತ್ತವರಿಲ್ಲ. ಆದ ಕಾರಣ ಪೋಷಕರನ್ನು ಕರೆಸಲಾಗಿದ್ದು, ಅವರು ಜತೆಯಲ್ಲಿ ಕರೆದೊಯ್ಯಲು ಒಪ್ಪದ ಕಾರಣ ಉಡುಪಿಯಲ್ಲೇ ಇವರಿಗೆ ಶಿಕ್ಷಣ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next