Advertisement
ಇಲ್ಲಿ ಕಾಮದಹನವೂ ಇಲ್ಲ. ಹೋಳಿ ಹುಣ್ಣಿಮೆ ಹಬ್ಬದ ಆಚರಣೆಯಂತೂ ನಡೆಯುವುದೇ ಇಲ್ಲ. ಇದು ಇಲ್ಲಿನ ವೈಶಿಷ್ಟ್ಯ. ಶ್ರೀ ಲಕ್ಷ್ಮೀ ಕನಕ ನರಸಿಂಹ ಸ್ವಾಮಿ ಕಣ್ಣಿಗೆ ಕಾಣುವಷ್ಟು ದೂರದವರೆಗೂ ಬಣ್ಣ ಆಡಲ್ಲ ಎಂಬ ಮಾತು ಜನರಲ್ಲಿ ಚಾಲ್ತಿಯಲ್ಲಿದೆ. ಅಂದರೆ ಪಟ್ಟಣ ಸೇರಿ ತಾಲೂಕಿನ ಏಳು ಗ್ರಾಮಗಳಲ್ಲಿ ಬಣ್ಣದ ಹಬ್ಬ ಓಕಳಿ ಆಚರಿಸಲ್ಲ. ಪಟ್ಟಣದಲ್ಲಿ ಮಾತ್ರ ಜನರು ಶತಮಾನಗಳಿಂದ ಹೋಳಿ ಆಚರಿಸುತ್ತಿಲ್ಲ. ಹೋಳಿ ಹುಣ್ಣಿಮೆ ಆಚರಿಸುವುದಕ್ಕೆ ಸ್ಪಷ್ಟವಾದ ಇಂತಹದ್ದೇ ಕಾರಣ ಇಲ್ಲದಿದ್ದರೂ, ಪಟ್ಟಣದ ಗುಡ್ಡದ ಮೇಲೆ ಶ್ರೀ ಲಕ್ಷ್ಮೀ ಕನಕ ನರಸಿಂಹಸ್ವಾಮಿ ಆವಾಸ ಸ್ಥಾನ ಇರುವುದರಿಂದ ಹೋಳಿ ಹುಣ್ಣಿಮೆ ಸಂಪ್ರದಾಯಿಕವಾಗಿ ಆಚರಿಸುತ್ತಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
Related Articles
Advertisement
ನಮ್ಮೂರಿಗೆ ಲಕ್ಷ್ಮೀ ಕನಕ ನರಸಿಂಹ ಸ್ವಾಮಿ ಶ್ರಾವಣ ಮಾಸದಲ್ಲಿ ಆಗಮಿಸುವುದರಿಂದ ಸುತ್ತಲಿನ ಏಳು ಹಳ್ಳಿಗಳಲ್ಲಿ ಹಿಂದಿನಿಂದಲೂ ಹಿರಿಯರುಸಾಂಪ್ರದಾಯಿಕವಾಗಿ ಹೋಳಿ ಹುಣ್ಣಿಮೆ ಆಚರಿಸುತ್ತಿಲ್ಲ.- ಸುರೇಶ ಕ್ಯಾದಗಿಹಳ್ಳಿ, ಬೆಣ್ಣಿಹಳ್ಳಿ
ಗ್ರಾಮಸ್ಥಶ್ರಾವಣ ಮಾಸದಲ್ಲಿ ಕನಕ ನರಸಿಂಹಸ್ವಾಮಿ ಗ್ರಾಮಕ್ಕೆ ಬಂದುಹೋಗುವುದರಿಂದ ನಮ್ಮೂರಾಗ ಹೋಳಿ ಹುಣ್ಣಿಮೆ ಆಚರಿಸಲ್ಲ. ಆದರೆಉಗಾದಿಯಲ್ಲಿ ಬಣ್ಣ ಎರಚಿ ಸಂಭ್ರಮಿಸಲಾಗುತ್ತದೆ. –ಬಸವರಾಜ ಮುಂಡವಾಡ, ನಾಗರಹಳ್ಳಿ ಗ್ರಾಮಸ್ಥ
ಕೊರ್ಲಹಳ್ಳಿ ಗ್ರಾಮಕ್ಕೆ ಮುಂಡರಗಿ ಶ್ರೀ ಲಕ್ಷ್ಮೀ ಕನಕರಾಯಸ್ವಾಮಿದಯಮಾಡಿಸಿ, ತುಂಗಭದ್ರಾ ನದಿ ಆಚೆಯ ದಡಲ್ಲಿರುವ ಮದಲಗಟ್ಟಿ ಶ್ರೀಹನುಮಂತ ದೇವರ ದರ್ಶನ ಪಡೆದು ಹೋಗುವುದರಿಂದ ಕೊರ್ಲಹಳ್ಳಿ-ಮದಲಗಟ್ಟಿ ಗ್ರಾಮ ಗಳಲ್ಲಿ ಹೋಳಿ ಆಚರಿಸುವುದಿಲ್ಲ. –ನಾಗರಾಜ ಅರ್ಕಸಾಲಿ, ಕೋರ್ಲಹಳ್ಳಿ ಗ್ರಾಮಸ್ಥ
ಪಟ್ಟಣದಲ್ಲಿ ಲಕ್ಷ್ಮೀ ಕನಕ ನರಸಿಂಹಸ್ವಾಮಿ ಜಾತ್ರೆ ನಡೆಯುತ್ತದೆ. ಮೊದಲಿನಿಂದಲೂ ನಮ್ಮಲ್ಲಿ ಹೋಳಿ ಹುಣ್ಣಿಮೆ ಆಚರಿಸುತ್ತಿಲ್ಲ. ಆದರೆ, ಯುಗಾದಿ ಹಬ್ಬದಲ್ಲಿ ನಡೆಯುವ ಹನುಮಂತ ದೇವರ ಜಾತ್ರೆಯ ಮರುದಿನ ಓಕಳಿ ಆಡಲಾಗುತ್ತದೆ. ಮಂಜುನಾಥ ಇಟಗಿ, ಸಾಮಾಜಿಕ ಕಾರ್ಯಕರ್ತ, ಮುಂಡರಗಿ
-ಹು.ಬಾ.ವಡ್ಡಟ್ಟಿ