Advertisement

ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷರ-ಮುಖ್ಯಾಧಿಕಾರಿ ವಾಗ್ವಾದ

04:30 PM Aug 14, 2022 | Team Udayavani |

ಹೊಳೆನರಸೀಪುರ: ಪುರಸಭೆ ಅಧ್ಯಕ್ಷರ ಗಮನಕ್ಕೆ ಬಾರದೇ ಅಜೆಂಡಾ ನಕಲನ್ನು ಪುರಸಭೆ ಮುಖ್ಯಾಧಿ ಕಾರಿ ಅವರು ತಯಾರಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಸುಧಾನಳಿನಿ ತೀವ್ರ ಆಕ್ಷೇಪ ಪಡಿಸಿದ ಪ್ರಸಂಗ ಪಟ್ಟಣದ ಹೇಮಾವತಿ ನಿರೀಕ್ಷಣ ಮಂದಿರದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಪುರಸಭೆ ಕಚೇರಿಯಲ್ಲಿ ಅಧ್ಯಕ್ಷರ ಗಮನಕ್ಕೆ ಬಾರದೇ ಎಲ್ಲಾ ಕಾರ್ಯಚಟುವಟಿಕೆ ಗಳು ನಡೆಯು ತ್ತಿದೆ. ಅಧ್ಯಕ್ಷರ ಟೇಬಲ್‌ಗೆ ಸಹಿ ಹಾಕುವ ಕಡತಗಳನ್ನು ಹೇಳದೆ ಕೇಳದೆ ತೆಗೆದುಕೊಂಡು ಹೋಗುತ್ತಾರೆ. ಕಡತ ಗಳು ಮಾಯವಾಗುತ್ತವೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಡಿ. ಶಾಂತಲಾ ಅವರ ಮೇಲೆ ಪುರಸಭೆ ಅಧ್ಯಕ್ಷೆ ಸುಧಾನಳಿನಿ ಅವರು ಹರಿಹಾಯ್ದರು. ಮುಖ್ಯಾಧಿಕಾರಿಗಳು ಯಾವುದನ್ನು ನನ್ನ ಗಮನಕ್ಕೆ ತರದೇ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇವರ ವರ್ತನೆ ಖಂಡನೀಯ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದಕ್ಕೆ ದ್ವನಿಗೂಡಿಸಿದ 11 ನೇ ವಾರ್ಡಿನ ಸದಸ್ಯ ಕೆ.ಆರ್‌. ಸುಬ್ರಮಣ್ಯ ರವರು ಜನರ ಹಿತಾ ಕಾಯುವ ಅಧ್ಯಕ್ಷರ ಲೋಪ ದೋಷದಿಂದ ಅಧಿಕಾರಿಗಳು ಹಿಡಿತದಲ್ಲಿಲ್ಲ. ಅಧ್ಯ ಕ್ಷರ ಸಹಿ ಇಲ್ಲದೆ ಕಡತಗಳು, ಅಜೆಂಡಾ ತಯಾರಾಗು ತ್ತಿರುವುದು ಹೇಗೆ ಸಾಧ್ಯ ಎಂದು ಗಂಭೀರವಾಗಿ ಆರೋಪ ಮಾಡಿದರು.

ಜಿಲ್ಲಾಧಿಕಾರಿಗಳ ಆದೇಶ ಮತ್ತು ಸೂಚನೆಗಳು ಪಾಲನೆ ಆಗುತ್ತಿಲ್ಲ. ನಾಮನಿರ್ದೇಶಿತ ಬಿಜೆಪಿ ಸದಸ್ಯ ಪ್ರಸನ್ನ ಅವರು ಮಾತನಾಡಿ ಸಭೆಯಲ್ಲಿ ನಡೆಯುವ ನಡಾವಳಿಕೆ ಯನ್ನು ನಡಾವಳಿ ಪುಸ್ತಕದಲ್ಲಿ ನಮೂದಿಸುವುದೇ ಇಲ್ಲ. ತಮಗೆ ಇಷ್ಟ ಬಂದಂತೆ ನಡಾವಳಿಗಳನ್ನು ಎಲ್ಲೋ ಕುಳಿತು ದಾಖಲಿಸುವುದು ನಡೆಯುತ್ತಿದೆ ಎಂದು ದೂರಿದರು. ಪುರಸಭೆಯಲ್ಲಿ ಬಯೋ ಮೆಟ್ರಿಕ್‌ ಅಳವಡಿಸುವಂತೆ ಹಲವಾರು ಬಾರಿ ಗಮ ನಕ್ಕೆ ತಂದರು ಕಾರ್ಯಗತ ಗೊಳಿಸಿಲ್ಲ. ಪಟ್ಟಣದ ಯುಜಿಡಿ ಕೊಳಚೆ ನೀರು ಹೇಮೆ ನದಿಗೆ ಹರಿಯು ತ್ತಿದೆ. ಇದನ್ನು ತಡೆಗಟ್ಟಲು ಕ್ರಮವಹಿಸಿಲ್ಲ ಎಂದು ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.

ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ತುರ್ತು ದುರಸ್ತಿಗೆ ಸ್ವತ್ಛತಾ ಯಂತ್ರ ಕಳಿಸುವಂತೆ ಮಾಹಿತಿ ನೀಡಿದರೆ, ಬಂದ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟು ಮರಳುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಅಪಾದನೆ ಮಾಡಿದರು. ಈ ರೀತಿ ಹಣಕ್ಕಾಗಿ ಬೇಡಿಕೆಯಿಡುವುದು ಕಾನೂನು ಬಾಹಿರ. ಈ ಬಗ್ಗೆ ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳುವೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದರು.

Advertisement

ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಸಮಸ್ಯೆಗಳು ಬಗೆಹರಿಯು ತ್ತಿಲ್ಲ. ಸಾರ್ವಜನಿಕರಿಗೆ ಉತ್ತರ ಕೊಡದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು 17 ನೇ ವಾರ್ಡಿನ ಪುರಸಭೆ ಸದಸ್ಯ ನಿಂಗಯ್ಯ ಬೇಸರ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next