Advertisement

ಮದ್ಯದಂಗಡಿ ಬಂದ್‌ ಮಾಡಿಸಿದ ಮಹಿಳೆಯರು

05:17 PM May 08, 2020 | Naveen |

ಹೊಳೆಆಲೂರ: ಗ್ರಾಮದಲ್ಲಿ ಮದ್ಯದಂಗಡಿ  ಬಂದ್‌ ಮಾಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಿಳಾ ರೈತ ಸಂಘಟನೆಯ ಹಾಗೂ ಹೊಳೆಆಲೂರ ಗ್ರಾಮದ ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಗುರುವಾರ ದಿಢೀರ್‌ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಗ್ರಾಮದ ವಿವೇಕ ವೈನ್‌ ಶಾಪ್‌ ಹಾಗೂ ಪ್ರಗತಿ ವೈನ್‌ ಶಾಪ್‌ ಮುಂದೆ ಆಗಮಿಸಿದ ಮಹಿಳೆಯರು ತಕ್ಷಣ ಅಂಗಡಿ ಬಂದ್‌ ಮಾಡುವಂತೆ ಆಗ್ರಹಿಸಿದರು. ಆಗ ವೈನ್‌ ಶಾಪ್‌ನವರು ಸರಕಾರದ ಆದೇಶದಂತೆ ಅಂಗಡಿ ಆರಂಭಿಸಲಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಿರ್ಮಾನ ಮಾಡೋಣ ಎಂದರು.

ಇದಕ್ಕೆ ಒಪ್ಪದ ಮಹಿಳೆಯರು ನಿಮಗೆ ನಾಚಿಕೆಯಾಗುವುದಿಲ್ಲವೇ, ಪಕ್ಕದ ಗ್ರಾಮದಲ್ಲಿ ಎರಡು ದಿನದಲ್ಲಿ 16 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಜನ ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಯಿದ್ದೇವೆ. ತಕ್ಷಣ ಅಂಗಡಿ ಬಂದ್‌ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಅಂಗಡಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಎಎಸ್‌ಐ ಮಹೇಶ ಹೆರಕಲ್ಲ, ಮೇಘರಾಜ ಅಲ್ಲಿಪೂರ, ಪಿಡಿಒ ಮಂಜುನಾಥ ಗಣಿ ಸ್ಥಳಕ್ಕೆ ಆಗಮಿಸಿ, ಮಾಲೀಕರಿಗೆ ತಿಳಿ ಹೇಳಿ ಅಂಗಡಿ ಬಂದ್‌ ಮಾಡಿಸಿದರು. ಪ್ರತಿಭಟನೆಯಲ್ಲಿ ಶರಣಮ್ಮ ಯಾದವಾಡ, ಲಕ್ಷ್ಮೀಭಾಯಿ ಹೆಗ್ರಿ, ದ್ರಾಕ್ಷಾಯಣಿ ಹೆಬ್ಬಳ್ಳಿ, ಸುಮಂಗಲಾ ಕಾತರಕಿ, ಸರೋಜಮ್ಮ ಗೌರಿಮಠ, ಶಿವವ್ವ ಮೂಲಿಮನಿ, ಹನುಮವ್ವ ಕಡಿಯವರ, ಶಾವಕ್ಕ ಪೂಜಾರ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next