Advertisement
ಗಜೇಂದ್ರಗಡ ನೂತನ ತಾಲೂಕಾಗಿ ಘೋಷಣೆಯಾಗಿರುವ ಹಿನ್ನೆಲ್ಲೆಯಲ್ಲಿಅಖಂಡ ರೋಣ ತಾಲೂಕಿನಲ್ಲಿ ನಿಡಗುಂದಿ,ಹೊಳೆಆಲೂರ, ಅಬ್ಬಿಗೇರಿ, ಬೆಳವಣಕಿ,ಸೂಡಿ ಕ್ಷೇತ್ರಗಳು ಇದ್ದವು. ಆದರೆ ಈಗ ನಿಡಗುಂದಿ ಹಾಗೂ ಸೂಡಿ ಗಜೇಂದ್ರಗಡತಾಲೂಕಿನ ವ್ಯಾಪ್ತಿಗೆ ಬರುತ್ತವೆ. ಉಳಿದಮೂರು ಕ್ಷೇತ್ರಗಳಲ್ಲಿ ಬೆಳವಣಕಿ, ಅಬ್ಬಿಗೇರಿ ಕ್ಷೇತ್ರವನ್ನು ಯತವತ್ತಾಗಿ ಇಟ್ಟು,ಹೊಳೆಆಲೂರ ಕ್ಷೇತ್ರದಲ್ಲಿ ಹಿರೇಹಾಳ ಎಂಬ ನೂತನ ಜಿಪಂ ಕ್ಷೇತ್ರ ಸೃಷ್ಟಿಸಲಾಗಿದೆ. ಈಮೂಲಕ ಒಟ್ಟು ನಾಲ್ಕು ಕ್ಷೇತ್ರಗಳು ರೋಣ ತಾಲೂಕಿನ ವ್ಯಾಪ್ತಿಯಲ್ಲಿ ಉಳದಿವೆ.
Related Articles
Advertisement
ಹೊಳೆಆಲೂರ: 31,775 ಮತದಾರನ್ನುಒಳಗೊಂಡಿರುವ ಹೊಳೆಆಲೂರಜಿಪಂ ಕ್ಷೇತ್ರದಲ್ಲಿ ಹೊಳೆಆಲೂರ,ಹುನಗುಂಡಿ,ಬೆನಹಾಳ, ಅಮರಗೋಳ,ಹೊಳೆಹಡಗಲಿ, ಕುರವಿಕೊಪ್ಪ,ಬಿ.ಎಸ್.ಬೇಲೇರಿ, ಬಸರಕೋಡ, ಹುಲ್ಲೂರ, ಸೋಮನಕಟ್ಟಿ, ಅಸೂಟಿ,ಮೇಗೂರ, ಮೇಲ್ಮಠ, ಕರಮುಡಿ,ಚಿಕ್ಕಮಣ್ಣೂರ, ಹಿರೇಮಣ್ಣೂರ,ಅರಹುಣಸಿ, ಬಸಾಲಾಪುರ ಸೇರಿದಂತೆ18 ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಅರ್ಧದಷ್ಟು ಗ್ರಾಮಗಳಲ್ಲಿ ಗಾಣಿಗ ಹಾಗೂಪಂಚಸಾಲಿ ಸಮಾಜದ ಮತಗಳು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಕ್ಷೇತ್ರ ಸಮಾನ್ಯ ಅಥವಾ ಪ್ರವರ್ಗ ಆ ವರ್ಗಕ್ಕೆ ಮೀಸಲಾದರೆ ಇಲ್ಲಿ ಕಾಂಗ್ರೆಸ್‌ನಿಂದ ಮಾಜಿ ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧಶರಥ ಗಾಣಿಗೇರಹಾಗೂ ಬಿಜೆಪಿಯಿಂದ ಜಗದೀಶ ಬ್ಯಾಡಗಿ,ಮುತ್ತಣ್ಣ ಜಂಗಣ್ಣವರ, ಶಶಿಧರಗೌಡಪಾಟೀಲ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರ ಪ.ಜಾ. ಪಡಿಯಪ್ಪ ಪ್ರತಿನಿಧಿಸುತ್ತಿದ್ದಾರೆ.
ಹಿರೇಹಾಳ ನೂತನ ಜಿಪಂ ಕ್ಷೇತ್ರ :
ನೂತನ ಜಿಪಂ ಕ್ಷೇತ್ರದಲ್ಲಿ ಒಟ್ಟು 30,945 ಮತದಾರರು ಇದ್ದು, ಹಿರೇಹಾಳ, ಬಳಗೋಡ, ಹೊನ್ನಿಗನೂರ, ಮಾಡಲಗೇರಿ, ನೈನಾಪುರ, ಕೋತಬಾಳ, ಮುಗಳಿ, ತಳ್ಳಿಹಾಳ, ಕುರಹಟ್ಟಿ, ಮುದೇನಗುಡಿ,ಇಟಗಿ, ಯರೇಕುರ ಬನಾಳ, ಹೊಸಳ್ಳಿ,ಜಿಗಳೂರ, ಕಳಕಾಪುರ ಸೇರಿದಂತೆ15 ಗ್ರಾಮಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಈ ಕ್ಷೇತ್ರ ಸದ್ಯ ಹೊಳೆಆಲೂರಕ್ಷೇತ್ರದಿಂದ ವಿಂಗಡಣೆಯಾಗಿದ್ದು, ಪರಿಶೀಷ್ಟ ಜಾತಿಯ ಪಡಿಯಪ್ಪ ಪೂಜಾರ ಪ್ರತಿನಿಧಿಸುತ್ತಿದ್ದಾರೆ.
ಹೆಚ್ಚಿನಸಂಖ್ಯೆಯಲ್ಲಿ ಗಾಣಿಗ ಸಮುದಾಯದಮತಗಳು ಹೆಚ್ಚಿದ್ದು, ಈ ಕ್ಷೇತ್ರ ಸಾಮಾನ್ಯವರ್ಗ ಅಥವಾ ಪ್ರವರ್ಗ ಅ ವರ್ಗಕ್ಕೆ ಮೀಸಲಾದರೆ, ಜಿಪಂ ಮಾಜಿ ಅಧ್ಯಕ್ಷಹಾಗೂ ಇತ್ತೀಚೆಗೆ ಕಾಂಗ್ರೆಸ್‌ನಿಂದಬಿಜೆಪಿಗೆ ಸೇರಿರುವ ನಿಂಗಪ್ಪ ಕೆಂಗಾರ ಪ್ರಬಲ ಆಕಾಂಕ್ಷಿಯಾಗಿದ್ದು,ಇವರ ಜೊತೆಗೆ ಹೂವಪ್ಪ ಕೆಂಗಾರ, ದೇವರಾಜ ದೇಸಾಯಿ,ಇಂದೀರಾ ತೇಲಿ ಬಿಜೆಪಿಯಿಂದ ಪ್ರಬಲಆಕಾಂಕ್ಷಿಗಳಾಗಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಎಪಿಎಂಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದಪರುಶುರಾಮ ಅಳಗವಾಡಿ, ಹಾಲಿತಾಪಂ ಸದಸ್ಯ ಪ್ರಭು ಮೇಟಿ ಹಾಗೂ ರೋಣ ಪಟ್ಟಣದ ಮಾಜಿಪುರಸಭೆ ಅಧ್ಯಕ್ಷ ಟಿ.ಬಿ. ನವಲಗುಂದಅವರ ಪುತ್ರ ಅಭಿಷೇಕ ನವಲಗುಂದ ಆಕಾಂಕ್ಷಿಯಾಗಿದ್ದಾರೆ.
-ಯಚ್ಚರಗೌಡ ಗೋವಿಂದಗೌಡ್ರ