Advertisement

ಚಾಲುಕ್ಯರ ಶೈಲಿಯಲ್ಲಿ ಹೊಳೆಬಸವೇಶ್ವರ ದೇಗುಲ ನಿರ್ಮಾಣ

05:21 PM Oct 18, 2021 | Team Udayavani |

ಮುಧೋಳ: ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಮಾಚಕನೂರ ಹೊಳೆಬಸವೇಶ್ವರ ದೇವಾಲಯ ಎರಡನೆಯ ಹಂತದಲ್ಲಿ ಅಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿದ್ದು, ಅದನ್ನು ಅದೇ ಮಾದರಿಯಲ್ಲಿ ಚಾಲುಕ್ಯರ ಶೈಲಿಯಲ್ಲಿ ಅತ್ಯುತ್ತಮ ದೇವಾಲಯ ನಿರ್ಮಾಣ ಮಾಡಲಾಗುವುದು. ಈ ಕುರಿತು ಗ್ರಾಮಸ್ಥರು ಚರ್ಚಿಸಿ ಹದಿನೈದು ದಿನಗಳಲ್ಲಿ ನಿರ್ಣಯಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಮಾಚಕನೂರ ಗ್ರಾಮದ ಶ್ರೀ ಹೊಳೆಬಸವೇಶ್ವರ ದೇವಾಲಯದ ಹತ್ತಿರ 130ಕೋಟಿ ವೆಚ್ಚದ ಆರ್‌ಎಂಎಸ್‌ಎ ಸರ್ಕಾರಿ ಪ್ರೌಢಶಾಲಾ ಕಟ್ಟಡ ನಿರ್ಮಾಣ, ಎಸ್‌ ಟಿ ಕಾಲೋನಿಯಿಂದ ಹೊಳೆ ಬಸವೇಶ್ವರ ದೇವಾಲಯ ಸಿ.ಸಿ ರಸ್ತೆ ಮತ್ತು ಬೀದಿದೀಪ ಅಳವಡಿಕೆ, ಭೂಮಿಪೂಜೆ ಹಾಗೂ ಟಿಎಸ್‌ಪಿ ಎಸ್‌ಸಿಪಿ ಯೋಜನೆಯಡಿಯಲ್ಲಿ 57 ಲಕ್ಷ ರೂ. ವೆಚ್ಚದ ಜಮೀನಿಗೆ ಕೊಳವೆ ಬಾವಿ ಸೌಲಭ್ಯ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಚಕನೂರ ಗ್ರಾಮದಲ್ಲಿ 417 ವಿದ್ಯಾರ್ಥಿಗಳು ಓದುತ್ತಿದ್ದು ಅದನ್ನು ಉನ್ನತ ದರ್ಜೆಗೆ ಕೊಂಡೊಯ್ಯಲು 130 ಕೋಟಿ ವೆಚ್ಚದಲ್ಲಿ ಅರ್‌ಎಮ್‌ಎಸ್‌ಎ ಸರ್ಕಾರಿ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಹಾಗೂ 25ಲಕ್ಷ ವೆಚ್ಚದ ಎಸ್‌ಟಿ ಕಾಲೋನಿಯಿಂದ ಹೊಳೆ ಬಸವೇಶ್ವರ ದೇವಾಲಯ ಸಿಸಿ ರಸ್ತೆ ಮತ್ತು ಬೀದಿ ದೀಪ ಅಳವಡಿಕೆ, ಭೂಮಿ ಪೂಜೆ ಹಾಗೂ ಟಿಎಸ್‌ಪಿ ಎಸ್‌ಸಿಪಿ ಯೋಜನೆಯಡಿಯಲ್ಲಿ 57 ಲಕ್ಷ ರೂ. ವೆಚ್ಚದ ಜಮೀನಿಗೆ ಕೊಳವೆ ಬಾವಿ ಸೌಲಭ್ಯ ಒದಗಿಸಲು ಆರಂಭಿಸಲಾಗಿದೆ.

110ಕೆವಿ ವಿದ್ಯುತ್‌ ಸ್ಟೇಷನ್‌ ಮಂಜೂರು ಮಾಡಲಾಗುವುದು. ಅದಕ್ಕೆ ಹತ್ತು ಕೋಟಿ ರೂ. ಒದಗಿಸಲು ಮುಂದಿನ ಸಲ ಅಡಿಗಲ್ಲು ನಿರ್ಮಾಣ ಮಾಡಲಾಗುವುದು ಎಂದರು. ಪದ್ಮಾವತಿ ಮಾದರ, ಸಂಸದ ಪಿ.ಸಿ ಗದ್ದಿಗೌಡರ, ಶಿವನಗೌಡ ನಾಡಗೌಡ, ಕೆ.ಅರ್‌.ಮಾಚಪ್ಪನವರ, ಭೀಮನಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹನಮಂತ ತುಳಸಿಗೇರಿ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ಪ್ರಕಾಶ ಚಿತ್ತರಗಿ, ದುಂಡಪ್ಪ ದಾಸರಡ್ಡಿ, ಭೀಮಸಿ ತಳವಾರ, ನಿಂಗಪ್ಪ ಹುಗ್ಗಿ, ಶಿವಾನಂದ ಅಂತಾಪುರ, ಪಿಡಬ್ಲೂ ಡಿಎಇಇ ಸೋಮಶೇಖರ ಸಾವನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ಕೊರಡ್ಡಿ, ಬಿಇಒ ವಿ.ಎಂ.ಪತ್ತಾರ ಇದ್ದರು. ಹೊಳೆಬಸವೇಶ್ವರ ದೇವಾಲಯಕ್ಕೆ ಸೂರ್ಪಾಲಿ ಲಕ್ಷ್ಮೀ ನರಸಿಂಹ ಮಾದರಿ ತಡೆಗೋಡೆ ನಿರ್ಮಾಣ ಮಾಡಬೇಕು ಸೇರಿದಂತೆ ಗ್ರಾಮದ ಪ್ರಮುಖ ದುಂಡಪ್ಪ ದಾಸರಡ್ಡಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next