Advertisement

‘ಸೋತವರ ಕೈಹಿಡಿಯುವುದು ಸಹಕಾರ ಕ್ಷೇತ್ರದ ಕೆಲಸ’

03:57 PM Nov 17, 2017 | |

ಕೆಯ್ಯೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಿಂಗಳಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮಂಗಳೂರು, ದ.ಕ. ಜಿಲ್ಲಾ ಸಹಕಾರ ಯೂನಿಯನ್‌ ಮಂಗಳೂರು, ಸಹಕಾರ ಇಲಾಖೆ ದ.ಕ. ಜಿಲ್ಲಾ, ಮಂಗಳೂರು ಹಾಗೂ ಪುತ್ತೂರು ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 64ನೇ ಅಖೀಲ ಭಾರತ ಸಹಕಾರ ಸಪ್ತಾಹ 2017 ಇದರ ಅಂಗವಾಗಿ ಸಹಕಾರ ಅಭಿವೃದ್ಧಿಗೆ ಶಾಸನವನ್ನು ಸಶಕ್ತಗೊಳಿಸುವ ಕಾರ್ಯಕ್ರಮ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತಿಂಗಳಾಡಿ ಇದರ ವಠಾರದಲ್ಲಿ ನಡೆಯಿತು.

Advertisement

ಜನಸೇವೆ ಮುಖ್ಯ
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಯಾರು ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಾರೋ ಅವರಿಗೆ ಕಷ್ಟ ಕಾಲದಲ್ಲಿ ಭಾಗಿಯಾಗುವುದು ಸಹಕಾರ ಬ್ಯಾಂಕ್‌. ನಮಗೆ ಜನರ ಸೇವೆಯೇ ಮುಖ್ಯ. ಸೋತವರನ್ನು ಅಲ್ಲಿಯೇ ತುಳಿಯ ಬಾರದು. ಅವರ ಕೈಹಿಡಿಯುವುದೇ ಸಹಕಾರ ಕ್ಷೇತ್ರದ ಕೆಲಸ. ಹೊಸ ಹೊಸ ಚಿಂತನೆಗಳನ್ನು ಜನರ ಮುಂದಿಟ್ಟಾಗ ಸಹಕಾರ ಕ್ಷೇತ್ರ ಬೆಳೆಯಲು ಸಾಧ್ಯ ಎಂದರು.

ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಅನಂತರ ಮಾತನಾಡಿ, ನವೋದಯ ಸಂಘಗಳ ಮೂಲಕ ಸ್ವಾವಲಂಬಿಯಾಗಿ ಬದುಕಿ, ಮನೆಯ ಸಂಸಾರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಉಪನ್ಯಾಸ
ಕಾರ್ಯಕ್ರಮದಲ್ಲಿ ‘ಸಹಕಾರ ಅಭಿವೃದ್ಧಿಗೆ ಶಾಸನವನ್ನು ಸಶಕ್ತಗೊಳಿಸುವಿಕೆ’ ಎಂಬ ವಿಷಯದ ಕುರಿತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಭಟ್‌ ಉಪ್ಪಂಗಳ ಉಪನ್ಯಾಸ ನೀಡಿದರು. ಈ ಸಂದರ್ಭ 19 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರನ್ನು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಸಮ್ಮಾನಿಸಿದರು.

ಮಂಗಳೂರು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್ಯ ಧ್ವಜಾರೋಹಣ ಮಾಡಿ ಶುಭ ಹಾರೈಸಿದರು. ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್‌.ಬಿ. ಜಯರಾಮ ರೈ ಬಳಜ್ಜ, ಶಶಿಕುಮಾರ್‌ ರೈ ಬಾಲ್ಯೊಟ್ಟು, ಜಿಲ್ಲಾ  ಸಹಕಾರ ಯೂನಿಯನ್‌ ನಿರ್ದೇಶಕ ಪ್ರಸಾದ್‌ ಕೌಶಲ್‌ ಶೆಟ್ಟಿ, ಜಿಲ್ಲಾ  ಸಹಕಾರ ಯೂನಿಯನ್‌ ನಿರ್ದೇಶಕ ಮಂಗಳೂರು ಶಿವರಾಮ ರೈ, ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು ಬಿ., ಪುತ್ತೂರು ಸಹಕಾರ ಯೂನಿಯನ್‌ ಅಧ್ಯಕ್ಷ ಶಿವರಾಮ ಕಜೆ, ಜಿಲ್ಲಾ  ಜನತಾ ಬಜಾರ್‌ನ ಅಧ್ಯಕ್ಷ ಉದಯ ರೈ ಮಾದೋಡಿ, ಶುಭ ಹಾರೈಸಿದರು.

Advertisement

ಕೆದಂಬಾಡಿ, ಕೆಯ್ಯೂರು ಸಿ.ಎಬ್ಯಾಂಕ್‌ ನ ಅಧ್ಯಕ್ಷ ಶಶಿಧರ್‌ ರಾವ್‌ ಬೊಳಿಕಲ ಸ್ವಾಗತಿಸಿ, ಕೆದಂಬಾಡಿ ಕೆಯ್ಯೂರು ಸಿ.ಎ. ಬ್ಯಾಂಕ್‌ನ ಸಹಾಯಕ ಇಒ ಸದಾಶಿವ ಭಟ್‌ ಕೆಯ್ಯೂರು ನಿರೂಪಿಸಿದರು.

ಸಮ್ಮಾನ, ರೇಖಾಚಿತ್ರ ಬಿಡುಗಡೆ 
ಮಹಾಬಲ ರೈ, ಮಂಗಳೂರು ಜಿಲ್ಲಾ ಸಹಕಾರ ಯೂನಿಯನ್‌ನ ನಿವೃತ್ತ ಇಒ ಸಾವಿತ್ರಿ , ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ| ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಮಹಾಲಸ ಕಾಲೇಜಿನ ವಿಸ್ವಾತ್‌ ಆರ್ಟ್ಸ್ ನ ಪ್ರಣೀತ್‌ ಶೆಟ್ಟಿ ಅವರು ರಚಿಸಿದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ರೇಖಾಚಿತ್ರವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next