Advertisement
ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ತಾಲೂಕಿನ ಗುಡ್ಡದಸಾಂತೇನಹಳ್ಳಿಯಲ್ಲಿ ಗುರುವಾರ ನಡೆದ ‘ಕಲ್ಯಾಣ ದರ್ಶನ’
Related Articles
Advertisement
ನಮ್ಮ ಭಾರತ ವಿವಿಧತೆಯಲ್ಲಿ ಏಕತೆ ಸಾರಿದ ರಾಷ್ಟ್ರ. ಅಭಿವೃದ್ಧಿಯತ್ತ ಸಾಗಬೇಕಾದರೆ ಯುವ ಪೀಳಿಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ವಿಶೇಷತೆಯನ್ನು ಗಮನಿಸಿ ಅದೇ ದಾರಿಯಲ್ಲಿ ಸಾಗುವಂತೆ ನಿರ್ದೇಶಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಶಕ್ತಿಯನ್ನು ಅಪವ್ಯಯ ಮಾಡದೆ ಒಳ್ಳೆಯದನ್ನು ಮಾಡಲು ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್, ಗಂಗಮ್ಮ, ವಿಶ್ವನಾಥನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಶಿವಣ್ಣ, ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಮೊದಲಾದವರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಎಚ್.ಡಿ. ರಂಗಪ್ಪ ಸ್ವಾಗತಿಸಿದರು. ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಆಚರಣೆಗೆ ಇಡೀ ಗ್ರಾಮವೇ ಸಿಂಗಾರಗೊಂಡಿತ್ತು. ವೀರಗಾಸೆ ಪದಗಳು, ಹೂವಿನ ಹಾಸಿಗೆ, ತಳಿರು ತೋರಣ, ರಂಗೋಲಿ ಚಿತ್ತಾರದ ಮಧ್ಯೆ ಮುರುಘಾ ಶರಣರನ್ನು ಮೆರವಣಿಗೆ ಮಾಡಿ ವೇದಿಕೆಗೆ ಕರೆತರಲಾಯಿತು. ಶಾಲಾ ಮಕ್ಕಳು ಜಾನಪದ ಮತ್ತು ವಚನ ನೃತ್ಯ ಪ್ರದರ್ಶಿಸಿದರು.