Advertisement

ಹೊಳಲ್ಕೆರೆ: ಲೈನ್ ಶಾರ್ಟ್ ಸರ್ಕ್ಯೂಟ್; 3 ಎಮ್ಮೆ ಸಾವು

02:29 PM Oct 19, 2022 | Team Udayavani |

ಹೊಳಲ್ಕೆರೆ: ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ 3 ಎಮ್ಮೆಗಳು ಸ್ಥಳದಲ್ಲೇ ಸಜೀವ ದಹನವಾಗಿರುವ ಘಟನೆ ಅ.19ರ ಬುಧವಾರ ತಾಲೂಕಿನ ರಾಮಗಿರಿ ಹೋಬಳಿಯ ಅರಬಗಟ್ಟ ಗ್ರಾಮದಲ್ಲಿ ನಡೆದಿದೆ.

Advertisement

ಹೈವೋಲ್ಟೇಜ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ 3 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಮೂರು ಎಮ್ಮೆಗಳು ಗಂಗಪ್ಪರ ಸಿದ್ದರಾಮಪ್ಪ ಎಂಬ ರೈತರಿಗೆ ಸೇರಿದ್ದು, ಸುಮಾರು 1.60 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಲೈನ್ ಹೊತ್ತಿ ಉರಿದಿದ್ದು, ಈ ಅವಘಡದಿಂದ ಇಡೀ ಗ್ರಾಮವೇ ಭಯಭೀತವಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಊರೊಳಗೆ ಹೈವೋಲ್ಟೇಜ್ ಲೈನ್ ಎಳೆದಿರುವುದು ಈ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಲೈನ್ ಬೇರೆಡೆಗೆ ವರ್ಗಾಯಿಸಬೇಕು ಎಂದು ಗ್ರಾಮದ ಮಿಲಿಟರಿ ಮಲ್ಲೇಶ್ ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next