Advertisement
ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮುರುಘಾ ಮಠದ ವತಿಯಿಂದ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.
Related Articles
Advertisement
ವಿಷಯಾವಲೋಕನ ಮಾಡಿದ ನಿವೃತ್ತ ಕೃಷಿ ಅಧಿಕಾರಿ ಚಂದ್ರಶೇಖರ ಗುಂಡೇರಿ, ಕಲ್ಯಾಣ ದರ್ಶನ ಸಮಾಜಕ್ಕೆ ಮಾರ್ಗದರ್ಶನ. ಹೆಣ್ಣು ದಾಸಿಯಲ್ಲ, ಹೆಣ್ಣನ್ನು ಹಾಗೆ ನಡೆಸಿಕೊಂಡಲ್ಲಿ ಬದುಕೇ ನಶ್ವರ. ತಾಯಂದಿರು ಕುಟುಂಬದ ಗೌರವ, ಘನತೆ ಕಾಪಾಡುವವರು. ಪ್ರಕೃತಿಯಲ್ಲಿ ನಾವಿದ್ದೇವೆ. ಬದುಕಿಗೆ ಶಿಕ್ಷಣದ ಅಗತ್ಯವಿದ್ದು, ಅದರಲ್ಲಿ ಹೆಣ್ಣುಮಗುವಿಗೆ ತಪ್ಪದೇ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ಹೆಣ್ಣು ಇಡೀ ಕುಟುಂಬವನ್ನು ಶಿಕ್ಷಿತಗೊಳಿಸುತ್ತಾಳೆ. ನಗರದ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಮಕ್ಕಳ ಪಾಲನೆ, ಆರ್ಥಿಕ ಸ್ಥಿತಿಗತಿಯ ಅವಲೋಕನ ಮಾಡಿ ಕುಟುಂಬದ ಸ್ಥಿರತೆಯನ್ನು ಹೆಚ್ಚಿಸುತ್ತಾಳೆ. ಹಣದಿಂದ ಎಲ್ಲವೂ ಸಿಗುವುದಿಲ್ಲ. ಜ್ಞಾನದ ಬೆಳಕು ಬೇಕು. ಆದರೆ ಇಂದಿನ ಆಕರ್ಷಣೆಗಳು ನಮ್ಮನ್ನು ಅನಾರೋಗ್ಯಕರ ಚಟುವಟಿಕೆಗಳಿಗೆ ದಾಸರಾಗುವಂತೆ ಮಾಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಎನ್.ಆರ್. ಪುರ ಬಸವ ಕೇಂದ್ರದ ಶ್ರೀ ಬಸವ ಯೋಗಾನಂದ ಸ್ವಾಮೀಜಿ ಮಾತನಾಡಿ, ಮಹಿಳೆಯರಿಗೆ ಈ ಸಮಾಜ ಹಲವಾರು ನಿರ್ಬಂಧಗಳನ್ನು ಹೇರಿದೆ. ಮಹಿಳೆ ಇನ್ನೂ ಸಂಪೂರ್ಣವಾಗಿ ನಿರ್ಬಂಧ ಗಳಿಂದ ಮುಕ್ತರಾಗಿಲ್ಲ. ಮಹಿಳಾ ಸಬಲೀಕರಣಕ್ಕಾಗಿ ಮುರುಘಾ ಶರಣರು ಅಪಾರ ಕೊಡುಗೆ ನೀಡಿದ್ದಾರೆ. ಲಿಂಗ ಸಮಾನತೆಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಗ್ರಾಪಂ ಉಪಾಧ್ಯಕ್ಷ ಎಸ್. ರಂಗಯ್ಯ, ಎಲ್.ಬಿ. ರಾಜಶೇಖರ್, ಡಾ| ಎನ್.ಬಿ. ಸಜ್ಜನ್, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ, ರೈತ ನಾಯಕಿ ಗಂಗಮ್ಮ ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ನಾಗರಾಜ್ ಸ್ವಾಗತಿಸಿದರು.
ಮುರುಘಾ ಶರಣರು ಚೀರನಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು. ಮಹಿಳೆಯರು ವಚನ ಪುಸ್ತಕಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.