ಹುಳಿಯಾರು: ಹೋಬಳಿಯ ಹೊಯ್ಸಲಕಟ್ಟೆ ಗ್ರಾಮಕ್ಕೆ ಹೊಸದಾಗಿ ಕೇರಳದಿಂದ ಟ್ರೈನು ಬಂದಿದ್ದು ಈ ಟ್ರೇನ್‌ಗೆ ಹೊಯ್ಸಳ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ.
ನಿತ್ಯ ಈ ಟ್ರೇನ್‌ನಲ್ಲಿ ಮಕ್ಕಳು ಹತ್ತಿ ಇಳಿದು ಸಂಭ್ರಮಿಸುತ್ತಿದ್ದಾರೆ. ಗ್ರಾಮಸ್ಥರೂ ಸಹ ಬಂದಿರುವ ಹೊಸ ಟ್ರೇನ್ ಬಗ್ಗೆ ಮೆಚ್ಚುಗೆಯ ಮಾತನಾಡು ತ್ತಿದ್ದಾರೆ. ಅಚ್ಚರಿಯಾದರೂ ಇದು ಸತ್ಯ. ಕೇರಳ ದಿಂದ ಹೊಯ್ಸಲ ಕಟ್ಟೆಗೆ ಹೊಸ ಟ್ರೇನ್ ಬಂದಿದೆ ಯಾದರೂ ಅದು ಹಳಿ ಮೇಲೆ ಚಲಿಸುವ ನಿಜವಾದ ಟ್ರೇನ್ ಅಲ್ಲ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಅರ್ಕರ್ಷಿಸುವ ಟ್ರೇನ್ ಮಾದರಿಯಲ್ಲಿ ಬಣ್ಣ ಬಳಿಯಲಾಗಿದೆ. ಕೇರಳ ಸರ್ಕಾರ ಜಾರಿಗೆ ತಂದಿರುವ ರೈಲು ಬೋಗಿಯ ಶಾಲಾ ಕೊಠಡಿಯ ಪೇಂಟಿಂಗ್ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳ ಕೊಠಡಿಗಳಲ್ಲಿ ಅಲಂಕರಿಸಿರುವಂತೆ ಹೊಯ್ಸಲಕಟ್ಟೆ ಶಾಲೆಗೂ ಪ್ರವೇಶಿಸಿದೆ.
ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹೊಯ್ಸ ಲಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಥೇಟ್ ರೈಲಿನ ಮಾದರಿಯಲ್ಲೇ ಬಣ್ಣ ಬಳಿಯಲಾಗಿದೆ. ಶಾಲೆಯಲ್ಲಿ 2 ಕೊಠಡಿಗಳಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು, ಕಿಟಕಿ ಬಾಗಿಲು ಗಳನ್ನು ಪಕ್ಕಾ ರೈಲು ಬೋಗಿಯ ದೃಶ್ಯದಂತೆ ಪೇಂಟ್ ಮಾಡಲಾಗಿದೆ. ರೈಲನ್ನೇ ನೋಡಿದ ಈ ಭಾಗದ ಮಕ್ಕಳು ಈಗ ಟ್ರೇನ್ ಮಾದರಿ ಶಾಲೆಗೆ ಫಿದಾ ಆಗಿದ್ದಾರೆ.
ಶಾಲೆಯ ಅನುದಾನದ ಜೊತೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಆರ್ಥಿಕ ಸಹಕಾರ ದೊಂದಿಗೆ ಶಾಲಾ ಕೊಠಡಿಗೆ ಹೊಸ ರೂಪ ಕೊಟ್ಟಿದ್ದು ರಜೆಯನ್ನು ಮುಗಿಸಿ ಶಾಲೆಗೆ ವಾಪಸ್ಸಾದ ವಿದ್ಯಾರ್ಥಿ ಗಳಿಗೆ ಮತ್ತು ಹೊಸದಾಗಿ ಸೇರಿದ ಚಿಕ್ಕ ಮಕ್ಕಳಿಗೆ ಮೊದಲ ದಿನ ಅಚ್ಚರಿಯ ಜೊತೆಗೆ ಖುಷಿಯೋ ಖುಷಿಯಾಗಿದೆ. ಶಾಲೆಗೆ ಕಾಲಿಟ್ಟ ಹುಡುಗರು ರೈಲಿನ ರೀತಿಯಲ್ಲಿರುವ ಶಾಲೆಯ ಬಣ್ಣ ನೋಡಿ ಅಚ್ಚರಿ ಪಡುವುದರ ಜೊತೆಗೆ ಸಂಭ್ರಮಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಪರಶಿವಮೂರ್ತಿ ಹೇಳಿ ದ್ದಾರೆ.
ಒಟ್ಟಿನಲ್ಲಿ ಉಚಿತ ಸಮವಸ್ತ್ರ, ಪುಸ್ತಕ, ಪೆನ್ನು ಊಟ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖಮಾಡುವಂತೆ ಮಾಡಲಾಗುತ್ತಿದೆ. ಜತೆಗೆ ಈಗ ಶಾಲೆಯ ವಿನ್ಯಾಸವನ್ನೇ ಬದಲಾಯಿಸುವ ಹೊಸ ಕೆಲಸಕ್ಕೆ ಕೈ ಹಾಕಿ ಎಲ್ಲರಿಂದ ಪ್ರಶಂಸೆ ಪಡೆಯುತ್ತಿದೆ. ಅಲ್ಲದೆ ರೈಲುಗಾಡಿಯಂತೆ ರೂಪು ಗೊಂಡು ಜನಾಕರ್ಷಣೆಯೊಂದಿಗೆ ಪೋಷಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ನಿಂತು ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿ ಸೆಲ್ಫಿ ತೆಗೆದುಕೊಳ್ಳುವಂತ್ತಾಗಿದೆ.
ಶಾಲೆಗೆ ಹೊಸ ರೂಪ ಕೊಡಬೇಕೆನ್ನುವುದು ಶಾಲಾಭಿವರದ್ಧಿ ಸಮಿತಿ ಹಾಗೂ ಸ್ಥಳೀಯ ಶಿಕ್ಷಣ ಪ್ರೇಮಿಗಳ ನಿರ್ಧಾರ ಹಾಗೂ ಅವರ ಸಹಾಯ, ಸಹಕಾರದ ಕೊಡುಗೆಯಿಂದ ಶಾಲೆಗೆ ಹೊಸ ಬಣ್ಣ ಬಳಿದು ಶಾಲೆಯ ಕೊಠಡಿಗಳ ಮುಂಭಾಗದ ಚಿತ್ರಣವನ್ನು ಒಂದು ರೈಲು ಬೋಗಿಯಂತೆ ಚಿತ್ರಿಸಿ ಬಣ್ಣ ಬಳಿಯಲಾಗಿದೆ. ಶಾಲೆಯನ್ನು ಆಕರ್ಷಕ ರೈಲಿನಂತೆ ಮಾಡುವುದರಿಂದ ಶಾಲೆಯ ಮಕ್ಕಳ ಹಾಜರಾತಿ ಹೆಚ್ಚುತ್ತಿದೆ ಎಂದು ಹೇಳಿದರು.