Advertisement

ನಡೆದು ಹೋಗುತ್ತಿದ್ದವರಿಗೆ ಇರಿದು ಹೋದರು 

11:44 AM Mar 03, 2017 | Team Udayavani |

ಬೆಂಗಳೂರು: ಪಾನಮತ್ತರಾಗಿದ್ದ ನಾಲ್ವರು ದುಷ್ಕರ್ಮಿಗಳು ಆಟೋದಲ್ಲಿ ಪ್ರಯಾಣಿಸುತ್ತಲೇ ರಸ್ತೆಬದಿ ನಿಂತಿದ್ದ ಸಾರ್ವಜನಿಕರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ರಾಜಾಜಿನಗರ ಒಂದನೇ ಅಡ್ಡರಸ್ತೆಯಲ್ಲಿ ಗುರುವಾರ ಮಧ್ಯಾಹ ನಡೆದಿದೆ. ದುಷ್ಕರ್ಮಿಗಳ ಕೃತ್ಯದಿಂದ ಐವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಯಾವ ಕಾರಣಕ್ಕಾಗಿ ಈ ರೀತಿ ಕೃತ್ಯ ನಡೆಸಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ  ಆಟೋದಲ್ಲಿ ಬಂದ ದುಷ್ಕರ್ಮಿಗಳು ರಾಜಾಜಿನಗರ ಒಂದನೇ ಅಡ್ಡರಸ್ತೆ, ಗಾಯತ್ರಿ ಪಾರ್ಕ್‌ ಸೇರಿದಂತೆ ಹಲವು ಕಡೆ ಸುತ್ತಾಡಿ, ಮನಸೋ ಇಚ್ಛೆ ಸಾರ್ವಜನಿಕರಿಗೆ ಉಪಟಳ ನೀಡಿದ್ದಾರೆ. 

ಚಾಕು ಇರಿತದಿಂದ ಆರವಿಂದ್‌, ಸರ್ವೇಶ್‌, ಮೃಂತ್ಯುಜಯ, ಪುರೋಷತ್ತಮ ಎಂಬುವವರು ಗಾಯಗೊಂಡಿದ್ದು ಅನನ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೋರ್ವ ಗಾಯಾಳು ಕುಮಾರಸ್ವಾಮಿ ಎಂಬಾತನ ಭುಜಕ್ಕೆ ಚಾಕು ಇರಿತವಾಗಿದ್ದು ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೂ ಪ್ರಾಣಾಪಾಯವಿಲ್ಲ  ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

ದುಷ್ಕರ್ಮಿಗಳ ಪುಂಡಾಟದ ಬಗ್ಗೆ ಸಾರ್ವಜನಿಕರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳು ಸುತ್ತಾಡಿದ ಕಡೆ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿ ಪಡೆದು ಗುರುತು ಪತ್ತೆಹಚ್ಚಲಾಗುತ್ತಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next