Advertisement

ವಿಶ್ವ ಗೆಲ್ಲುವ ವಿರಾಟ್‌ ಸ್ವಪ್ನ 

10:59 AM Nov 27, 2018 | Team Udayavani |

ಭಾರತ ಹಾಕಿಯ ಏಳುಮುಖ – ಬಿಳುಮುಖ

Advertisement

ವಿಶ್ವ ಹಾಕಿಯಲ್ಲಿ ಭಾರತ ತನ್ನದೇ ಆದ ಸಾಧನೆಯ ಗಾಥೆ ಹೊಂದಿದೆ. ಇತ್ತೀಚಿನ ದಶಕಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಕಳೆದುಕೊಂಡಿದ್ದರೂ, ಏಷ್ಯಾ ಮಟ್ಟದಲ್ಲಿ ಈಗಲೂ ಪ್ರಬಲ ತಂಡ. ಹಿಂದೆ ಕಂಡ ಅದ್ಭುತ ಯಶಸ್ಸು, ಈಗ ಅನುಭವಿಸುತ್ತಿರುವ ಸತತ ವೈಫ‌ಲ್ಯದ ಹೆಜ್ಜೆ ಗುರುತುಗಳು ಇಲ್ಲಿವೆ.

“When I die, India will not shed a tear for me”
ಹೀಗೆಂದು ಹೇಳುವ ಮೂಲಕ ತನ್ನ ಬಗ್ಗೆ ತಾನು ಭವಿಷ್ಯ ಹೇಳಿಕೊಂಡಿದ್ದು ವಿಶ್ವದ ಶ್ರೇಷ್ಠ ಹಾಕಿ ಮಾಂತ್ರಿಕ, ಭಾರತ ಹಾಕಿ ತಂಡದ ನಾಯಕರಾಗಿ ಸಂಚಲನ ಮೂಡಿಸಿದ ಹೆಗ್ಗಳಿಕೆಯ ದಿಗ್ಗಜ ಧ್ಯಾನ್‌ ಚಂದ್‌. ಹಾಕಿಯನ್ನೇ ಧ್ಯಾನವನ್ನಾಗಿಸಿಕೊಂಡು ಬೆಳೆದವರು.

ಹಾಕಿ ಕ್ರೀಡೆಯ ಬಗ್ಗೆ ದೂರಾಲೋಚನೆ ಹೊಂದಿದ್ದ ಸೂಕ್ಷ್ಮ ಜೀವಿಯೂ ಹೌದು. ಅದೆಷ್ಟು ಪ್ರೀತಿ, ಬದ್ಧತೆ ಹೊಂದಿದ್ದರು ಎನ್ನುವುದಕ್ಕೆ ಈ ಮೇಲಿನ ಮಾತಿಗಿಂತ ಮತ್ತೂಂದು ಸಾಕ್ಷಿ ಬೇಕಾಗಿಲ್ಲ. ಹಾಗಂತ ಅವರ ನಿಧನದ ಬಳಿಕ ಭಾರತೀಯರ ಕಣ್ಣುಗಳಲ್ಲಿ ನೀರು ಜಿನುಗಲೇ ಇಲ್ಲ ಎಂದೇನಲ್ಲ. ಅವರ ನಿಧನ ವಾರ್ತೆ ಸಹಸ್ರಾರು ಅಭಿಮಾನಿಗಳ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದವು.

ಮೇರು ವ್ಯಕ್ತಿತ್ವದ ದಿಗ್ಗಜ ಆಟಗಾರನ ನೆನಪು, ಸಾಧನೆಯ ಹೊಳಪು ಮತ್ತೂಮ್ಮೆ ನಮ್ಮ ಕಣ್ಮುಂದೆ ಬರುವ ಸಂದರ್ಭ ಮಗದೊಮ್ಮೆ ಒದಗಿಬಂದಿದೆ. ಕಾರಣ ಇಷ್ಟೆ, ನ.28ರಿಂದ ಭುವನೇಶ್ವರದಲ್ಲಿ ವಿಶ್ವಕಪ್‌ ಹಾಕಿ ಪಂದ್ಯಾವಳಿಗೆ ಚಾಲನೆ ಸಿಗಲಿದೆ. 2010ರ ಬಳಿಕ ಮತ್ತೆ ಪ್ರತಿಷ್ಠಿತ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ ಭಾರತ. ಹೀಗಾಗಿ ಇತಿಹಾಸ ಮೆಲುಕು ಹಾಕುವ ಕ್ಷಣ ಇದಾಗಿದೆ.

Advertisement

ಭಾರತಕ್ಕೆ ಹಾಕಿ ನಂಟು ಹಾಕಿ ಕ್ರೀಡೆ ಹಾಗೂ ಭಾರತಕ್ಕೆ ಇತಿಹಾಸದಲ್ಲಿ ವಿಶೇಷ ಸ್ಥಾನಮಾನವಿದೆ. ಆರನೇ ಶತಮಾನದ ಕಾಲಘಟ್ಟದಲ್ಲಿ ಈಜಿಪ್ಟ್ ಮಂದಿ ಹಾಕಿ ಸ್ಟಿಕ್‌ಗೆ ಹೋಲುವಂತಹ ಸ್ಟಿಕ್‌ ಹಿಡಿದು ಆಟವಾಡುವ ಚಿತ್ರಗಳು, ಉಬ್ಬು ಶಿಲ್ಪಗಳು ಇರುವ ಬಗ್ಗೆ ಶಾಸನಗಳಲ್ಲಿ ದಾಖಲಾಗಿವೆ. ಅಷ್ಟೇ ಅಲ್ಲ, ಆ ಕಾಲಘಟ್ಟದಲ್ಲೇ ಭಾರತೀಯರು ಹಾಕಿ ಕ್ರೀಡೆಯಲ್ಲಿ ಭಾಗಿಯಾಗಿದ್ದರು ಎನ್ನುವುದರ ಬಗ್ಗೆ ಉತ್ತರ ಮತ್ತು ದಕ್ಷಿಣ ಅಮೆರಿಕದ ಇತಿಹಾಸ ಪುಟಗಳಲ್ಲೂ ಇವೆ ಎಂದು ಹೇಳಲಾಗುತ್ತದೆ. ಅಂದರೆ ಸರಿ ಸುಮಾರು 4000 ವರ್ಷಗಳ ಹಿಂದೆಯೇ ಹಾಕಿ ಕ್ರೀಡೆ ಇತ್ತು, ಭಾರತದ ನಂಟೂ ಹೊಂದಿತ್ತು ಎನ್ನುವ ವಾದಕ್ಕೆ ಇವು ಪುಷ್ಟಿ ನೀಡುವಂತಿವೆ.

ಬೆಳವಣಿಗೆಗೆ ನೆರವಾದ ಬ್ರಿಟಿಷ್‌ ಆಡಳಿತ ಭಾರತದಲ್ಲಿ ಹಾಕಿ ಕ್ರೀಡೆ ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಂಡಿದ್ದು ಬ್ರಿಟಿಷ್‌ ಕಾಲದಲ್ಲೆ. ಬ್ರಿಟಿಷ್‌ ಆಡಳಿತ ವೈಖರಿ, ಧೋರಣೆ 19ನೇ ಶತಮಾನದಲ್ಲಿ ಭಾರತದಲ್ಲಿ ಹಾಕಿ ಕ್ರೀಡೆಗೆ ವಿಶೇಷ ಸ್ಥಾನಮಾನ ಲಭಿಸುವಂತೆ ಮಾಡಿತು. ಹಾಕಿ ಕ್ರೀಡೆಯತ್ತ ಭಾರತೀಯರ ಒಲವು ಕೂಡ ಹೆಚ್ಚಾಯಿತು. ಬ್ರಿಟಿಷ್‌ ಆಡಳಿತಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದ ಕರ್ನಾಟಕ ಸೇರಿ ದೇಶದ ಇನ್ನೂ ಕೆಲವು ಪ್ರದೇಶಗಳಲ್ಲಿ ಇಂದಿಗೂ ಹಾಕಿ ಕ್ರೀಡೆಗೆ ವಿಶೇಷ ಮನ್ನಣೆಯಿದೆ.

ಸ್ಥಳೀಯರ ಒಲವು, ಪ್ರೋತ್ಸಾಹದಿಂದಾಗಿ “ಹಾಕಿ ಹಬ್‌’ ಎನಿಸಿಕೊಂಡಿದೆ. ಆ ಕಾಲದ ಅನಿವಾರ್ಯ ಪರಿಸ್ಥಿತಿಯಿಂದ ಬಿಟಿಷ್‌ ಆಡಳಿತಕ್ಕೆ ಅಂಟಿಕೊಂಡಿದ್ದ ಕೊಡಗು ಭಾಗದ ಜನತೆ ಇಂದಿಗೂ ಹಾಕಿಯನ್ನು ಮನೆದೇವರಷ್ಟೇ ಗೌರವಿಸಿಕೊಂಡು ಬಂದಿರುವುದು ವಾಸ್ತವ.

ಮೊದಲ ವಿಶ್ವಕಪ್‌ ನಡೆದಿದ್ದು ಸ್ಪೇನ್‌ನಲ್ಲಿ ವರ್ಷದಲ್ಲಿ ಹತ್ತಾರು ಅಂತಾರಾಷ್ಟ್ರೀಯ ಹಾಕಿ ಟೂರ್ನಿಗಳು ನಡೆಯುವಾಗ ವಿಶ್ವಕಪ್‌ನ ಅಗತ್ಯವಾದರೂ ಏನು ಎಂಬ ಪ್ರಶ್ನೆ ಮೂಡಬಹುದು. ಪಂದ್ಯಾವಳಿಯ ಒಟ್ಟಾರೆ ಆಶಯಗಳನ್ನು ಒಂದೇ ಪದದಲ್ಲಿ ಹೇಳಬೇಕೆಂದರೆ “ಸಹಕಾರ’ ಎನ್ನಬಹುದೇನೊ. ವಿಶ್ವ ಮಟ್ಟದಲ್ಲಿ ಎಲ್ಲಾ ದೇಶಗಳೂ ಸಹಕಾರ, ಬಾಂಧವ್ಯದೊಂದಿಗೆ ಕೂಡಿ ನಡೆಯಲು ಕ್ರೀಡೆ ಒಂದು ಅತ್ಯುತ್ತಮ ವೇದಿಕೆ ಎಂಬ ಪರಿಕಲ್ಪನೆ ಎಂಬುದೇ ವಿಶ್ವ ಹಾಕಿ ಹುಟ್ಟಿಗೆ ಕಾರಣವಾಗಿದ್ದಿರಬಹುದು. ಇದಕ್ಕೆ ಮೂಲ ಹುಡುಕಿ ಹೊರಟರೆ ಪಾಕಿಸ್ತಾನದ ಏರ್‌ ಮಾರ್ಷಲ್‌ ನೂರ್‌ ಖಾನ್‌ ಅವರ ಹೆಸರನ್ನು ಪ್ರಸ್ತಾಪಿಸಲೇಬೇಕು.

ವಿಶ್ವ ಹಾಕಿ ಮ್ಯಾಗಜಿನ್‌ ಸಂಪಾದಕರಾಗಿದ್ದ ಪ್ಯಾಟ್ರಿಕ್‌ ರಾವಿÉ ಮೂಲಕ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್ಐಎಚ್‌)ಗೆ ವಿಶ್ವ ಕೂಟ ನಡೆಸಲು ನೂರ್‌ ಖಾನ್‌ ಪ್ರಸ್ತಾವನೆ ಸಲ್ಲಿಸಿದರು. 1969, ಅಕ್ಟೋಬರ್‌ 26ರಂದು ನಡೆದ ಸಭೆಯಲ್ಲಿ ಅದನ್ನು ಮಾನ್ಯ ಮಾಡಲಾಯಿತು. 1970ರಲ್ಲಿ ವಿಶ್ವಕಪ್‌ ಆಯೋಜನೆಯ ಭಾರ ಹೊತ್ತ ಎಫ್ಐಎಚ್‌ ಮಾರನೇ ವರ್ಷವೇ ಮೊದಲ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಿತು. ಸ್ಪೇನ್‌ ಇದರ ಆತಿಥ್ಯವನ್ನೂ ವಹಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next