Advertisement

ಹಾಕಿ ಟೆಸ್ಟ್‌: ಭಾರತಕ್ಕೆ ಭಾರೀ ಸೋಲು

02:27 AM May 16, 2019 | Team Udayavani |

ಪರ್ತ್‌: ಆಸ್ಟ್ರೇಲಿಯ ಪ್ರವಾಸದ ಕಳೆದ 3 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ್ದ ಭಾರತ ಹಾಕಿ ತಂಡ ಕಾಂಗರೂ ರಾಷ್ಟ್ರೀಯ ತಂಡದೆದುರಿನ ಟೆಸ್ಟ್‌ ಸರಣಿಯಲ್ಲಿ ಸೋಲಿನ ಆರಂಭ ಪಡೆದಿದೆ. ಬುಧವಾರ ಪರ್ತ್‌ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 4-0 ಗೋಲುಗಳಿಂದ ಹೀನಾಯವಾಗಿ ಸೋತಿದೆ.

Advertisement

ಆಸ್ಟ್ರೇಲಿಯದ ಜೆರೆಮಿ ಹೇವಾರ್ಡ್‌,ಬ್ಲೇಕ್‌ ಗೋವರ್ ಅವಳಿ ಗೋಲು ಬಾರಿಸಿ ಗೆಲುವು ತಂದುಕೊಟ್ಟರು.

ಕೋಚ್ ಗ್ರಹಾಂ ರೀಡ್‌ ಅವರ ಹೊಸ ಆಟದ ಶೈಲಿಗೆ ಹೊಂದಿಕೊಳ್ಳು ತ್ತಿರುವ ಭಾರತೀಯ ಪಡೆ, ಆಸ್ಟ್ರೇಲಿ ಯದ ಮಿಡ್‌ಫೀಲ್ಡ್ ಆಟದ ಎದುರು ಪರದಾಡಿತು. 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಪಡೆದ ಆಸ್ಟ್ರೇಲಿಯ, ಬ್ಲೇಕ್‌ ಗೋವರ್ ಅವರಿಂದ ಗೋಲಿನ ಖಾತೆ ತೆರೆಯಿತು.

19ನೇ ನಿಮಿಷದಲ್ಲಿ ಬಿರೇಂದ್ರ ಲಾಕ್ರ ಗೋಲಿಗೆ ಹತ್ತಿರ ಬಂದರೂ ಚೆಂಡನ್ನು ಗುರಿ ತಲುಪಿಸುವಲ್ಲಿ ವಿಫ‌ಲರಾದರು. ದ್ವಿತೀಯ ಕ್ವಾರ್ಟರ್‌ನಲ್ಲಿ ಜೆರೆಮಿ ಹೇವಾರ್ಡ್‌ ಪೆನಾಲ್ಟಿ ಅವಕಾಶ ಬಳಸಿಕೊಂಡು 20ನೇ ನಿಮಿಷದಲ್ಲಿ ಆಸ್ಟ್ರೇಲಿಯಕ್ಕೆ 2-0 ಮುನ್ನಡೆ ತಂದಿತ್ತರು. 24ನೇ ನಿಮಿಷದಲ್ಲಿ 3ನೇ ಪೆನಾಲ್ಟಿ ಪಡೆದ ಭಾರತಕ್ಕೆ ಇದನ್ನೂ ಗೋಲಾಗಿಸಲು ಸಾಧ್ಯವಾಗಲಿಲ್ಲ.

60ನೇ ನಿಮಿಷ ಹೇವಾರ್ಡ್‌ ಮತ್ತು ಹೆಚ್ಚುವರಿ ಸಮಯದ 2ನೇ ನಿಮಿಷದಲ್ಲಿ ಬ್ಲೇಕ್‌ ಗೋಲು ಬಾರಿಸಿ ತಂಡಕ್ಕೆ 4-0 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.

Advertisement

2ನೇ ಹಾಗೂ ಅಂತಿಮ ಟೆಸ್ಟ್‌ ಮೇ 17ರಂದು ನಡೆಯಲಿದೆ.

ಭಾರತದ ವಿಫ‌ಲ ಪ್ರಯತ್ನ
3ನೇ ಕ್ವಾರ್ಟರ್‌ನ ಆರಂಭದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟವಾಡಿದವು. ಫೈನಲ್ ಕ್ವಾರ್ಟರ್‌ನಲ್ಲಿ ಸಕಾರಾತ್ಮಕವಾಗಿಯೇ ಆಟಕ್ಕಿಳಿದ ಭಾರತ ಗೋಲಿಗಾಗಿ ಭಾರೀ ಪ್ರಯತ್ನ ನಡೆಸಿತು. ಮನ್‌ಪ್ರೀತ್‌, ವಿವೇಕ್‌ ಪ್ರಸಾದ್‌, ಜಸ್‌ಕರಣ್‌ ಸಿಂಗ್‌ ಗೋಲು ಬಾರಿಸುವ ಪ್ರಯತ್ನಕ್ಕೆ ಆಸ್ಟ್ರೇಲಿಯನ್ನರು ಅಡ್ಡಿಪಡಿಸಿದರು. 52ನೇ ನಿಮಿಷದಲ್ಲಿ ಮತ್ತೂಂದು ಪೆನಾಲ್ಟಿ ಕಾರ್ನರ್‌ ಪಡೆದ ಭಾರತ, ಈ ಅವಕಾಶವನ್ನೂ ಕೈಚೆಲ್ಲಿತು.

Advertisement

Udayavani is now on Telegram. Click here to join our channel and stay updated with the latest news.

Next