Advertisement
1998ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಆರಂಭವಾದಾಗಿನಿಂದಲೂ ಹಾಕಿ ಈ ಕ್ರೀಡಾಕೂಟದಲ್ಲಿ ತಪ್ಪದೇ ಕಾಣಿಸಿಕೊಂಡಿತ್ತು. ಆದರೆ ಗೇಮ್ಸ್‌ನ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ಲಾಸ್ಗೋ ಗೇಮ್ಸ್ ಸಂಘಟಕರು ಹಾಕಿ, ನೆಟ್‌ಬಾಲ್ ಮತ್ತು ರೋಡ್ ರೇಸ್ ಸ್ಪರ್ಧೆಯನ್ನು ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕೂಟದ ಕ್ರೀಡಾ ಯಾದಿ ಮಂಗಳವಾರ ಪ್ರಕಟಗೊಳ್ಳಲಿದೆ.
Related Articles
Advertisement
ಭಾರತ, ಆಸೀಸ್‌ಗೆ ನಷ್ಟಹಾಕಿಯನ್ನು ಹೊರಗಿಟ್ಟರೆ ಭಾರತ, ಆಸ್ಟ್ರೇಲಿಯ ತಂಡಗಳಿಗೆ ಭಾರೀ ನಷ್ಟ ಎಂಬುದರಲ್ಲಿ ಅನುಮಾನವಿಲ್ಲ. ಭಾರತದ ಪುರುಷರ ತಂಡ ಈವರೆಗೆ 5 ಪದಕ ಜಯಿಸಿದೆ (3 ಬೆಳ್ಳಿ, 2 ಕಂಚು). ವನಿತಾ ತಂಡ 2000ದ ಆವೃತ್ತಿಯ ಚಾಂಪಿಯನ್ ಆಗಿದ್ದು, ಒಟ್ಟು 3 ಪದಕ ಗೆದ್ದಿದೆ. ಆಸ್ಟ್ರೇಲಿಯದ್ದು ದಾಖಲೆ ಸಾಧನೆ. ಆಸೀಸ್ ಪುರುಷರ ತಂಡ ದಾಖಲೆ 7 ಬಾರಿ ಚಿನ್ನ ಗೆದ್ದಿದೆ. ವನಿತೆಯರು 4 ಸಲ ಚಾಂಪಿಯನ್ ಆಗಿದ್ದಾರೆ.