Advertisement

ಹಾಕಿ ಆಟಗಾರ ಮನ್ ದೀಪ್ ಸಿಂಗ್ ಗೆ ಕೋವಿಡ್-19 ದೃಢ: ಬೆಂಗಳೂರಿನಲ್ಲಿ ಚಿಕಿತ್ಸೆ

02:21 PM Aug 10, 2020 | keerthan |

ಬೆಂಗಳೂರು: ಭಾರತೀಯ ಹಾಕಿ ತಂಡದ ಸದಸ್ಯ ಮನ್ ದೀಪ್ ಸಿಂಗ್ ಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ಮೂಲಕ ಕೋವಿಡ್ ಸೋಂಕು ದೃಢವಾದ ಆರನೇ ಭಾರತೀಯ ಹಾಕಿ ಆಟಗಾರನಾಗಿದ್ದಾರೆ.

Advertisement

ಭಾರತೀಯ ಕ್ರೀಡಾ ಪ್ರಾಧಿಕಾರ ಈ ವಿಚಾರವನ್ನು ತಿಳಿಸಿದ್ದು, ಮನ್ ದೀಪ್ ಸಿಂಗ್ ಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಇತರ ಐವರು ಸೋಂಕಿತ ಆಟಗಾರನೊಂದಿಗೆ ಬೆಂಗಳೂರಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದೆ.

25 ವರ್ಷದ ಜಲಂಧರ್ ಮೂಲದ ಮನ್ ದೀಪ್ ಸಿಂಗ್ ಇತರ 20 ರಾಷ್ಟ್ರೀಯ ಆಟಗಾರರೊಂದಿಗೆ ಬೆಂಗಳೂರಿನ ಎಸ್ ಎಐ ಕೇಂದ್ರದಲ್ಲಿ ಶಿಬಿರಕ್ಕೆ ಭಾಗವಹಿಸಲು ಆಗಮಿಸಿದ್ದರು. ಎಲ್ಲಾ ಆಟಗಾರರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ನಾಯಕ ಮನ್ ಪ್ರೀತ್ ಸಿಂಗ್ ಮತ್ತು ಇತರ ನಾಲ್ಕು ಆಟಗಾರರಿಗೆ ಕಳೆದ ವಾರವೇ ಸೋಂಕು ದೃಢವಾಗಿತ್ತು.

ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರಾಗ್ ಫೀಲ್ಡರ್ ವರುಣ್ ಕುಮಾರ್ ಮತ್ತು ಗೋಲ್ ಕೀಪರ್ ಕೃಷ್ಣನ್ ಬಹದ್ದೂರ್ ಪಾಠಕ್ ಅವರಿಗೆ ಕೋವಿಡ್ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next