Advertisement

ತಂಡಕ್ಕೆ ಮರಳಿದ ರೂಪಿಂದರ್‌ಪಾಲ್‌ ಸಿಂಗ್‌

10:56 AM Oct 19, 2019 | Sriram |

ಹೊಸದಿಲ್ಲಿ: ಹಾಕಿ ಒಲಿಂಪಿಕ್‌ ಕ್ವಾಲಿಫೈಯರ್ ಪಂದ್ಯಾವಳಿಗಾಗಿ ಭಾರತದ ಪುರುಷರ ಮತ್ತು ವನಿತಾ ತಂಡಗಳನ್ನು ಶುಕ್ರವಾರ ಪ್ರಕಟಿಸಲಾಗಿದೆ. ಇತ್ತೀಚಿನ ಯುರೋಪ್‌ ಪ್ರವಾಸದಿಂದ ಹೊರಗುಳಿದಿದ್ದ ರೂಪಿಂದರ್‌ಪಾಲ್‌ ಸಿಂಗ್‌ ತಂಡಕ್ಕೆ ಮರಳಿದರೆ, ಬೀರೇಂದ್ರ ಲಾಕ್ರಾ ಮತ್ತು ಕೊಥಜಿತ್‌ ಸಿಂಗ್‌ ಅವರನ್ನು ಕೈಬಿಡಲಾಗಿದೆ.

Advertisement

ಪುರುಷರ ತಂಡವನ್ನು ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದು, ಕರ್ನಾಟಕದ ಎಸ್‌.ವಿ. ಸುನೀಲ್‌ ಉಪನಾಯಕರಾಗಿದ್ದಾರೆ. ಈ ತಂಡ ನ. 1 ಮತ್ತು 2ರಂದು ರಶ್ಯ ವಿರುದ್ಧ ಆಡಲಿದೆ. ವನಿತಾ ಪಡೆಯನ್ನು ರಾಣಿ ರಾಮ್‌ಪಾಲ್‌ ಮುನ್ನಡೆಸಲಿದ್ದಾರೆ. ಇಲ್ಲಿ ಭಾರತದ ಎದುರಾಳಿಯಾಗಿರುವ ತಂಡ ಯುಎಸ್‌ಎ.ರೂಪಿಂದರ್‌ ಪಾಲ್‌ ಪುನರಾಗಮನದಿಂದ ಭಾರತದ ಪೆನಾಲ್ಟಿ ಕಾರ್ನರ್‌ ಸ್ಪೆಷಲಿಸ್ಟ್‌ಗಳ ಸಂಖ್ಯೆ ನಾಲ್ಕಕ್ಕೇರಿದೆ. ವರುಣ್‌ ಕುಮಾರ್‌, ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಅಮಿತ್‌ ರೋಹಿದಾಸ್‌ ಉಳಿದ ಮೂವರು.

ಪುರುಷರ ತಂಡ
ಮನ್‌ಪ್ರೀತ್‌ ಸಿಂಗ್‌ (ನಾಯಕ), ಎಸ್‌.ವಿ. ಸುನೀಲ್‌ (ಉಪನಾಯಕ), ಪಿ.ಆರ್‌. ಶ್ರೀಜೇಶ್‌, ಕೃಶನ್‌ ಬಹದ್ದೂರ್‌ ಪಾಠಕ್‌, ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಸುರೇಂದರ್‌ ಕುಮಾರ್‌, ಗುರೀಂದರ್‌ ಸಿಂಗ್‌, ರೂಪಿಂದರ್‌ಪಾಲ್‌ ಸಿಂಗ್‌, ಅಮಿತ್‌ ರೋಹಿದಾಸ್‌, ನೀಲಕಂಠ ಶರ್ಮ, ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಮನ್‌ದೀಪ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಸಿಮ್ರನ್‌ಜಿàತ್‌ ಸಿಂಗ್‌.

ವನಿತಾ ತಂಡ
ರಾಣಿ ರಾಮ್‌ಪಾಲ್‌ (ನಾಯಕಿ), ಸವಿತಾ (ಉಪನಾಯಕಿ), ರಜನಿ ಎಟಿಮರ್ಪು, ದೀಪ್‌ ಗ್ರೇಸ್‌ ಎಕ್ಕಾ, ಗುರ್ಜಿತ್‌ ಕೌರ್‌, ರೀನಾ ಖೋಕರ್‌, ಸಲೀಮಾ ಟೇಟೆ, ಸುಶೀಲಾ ಚಾನು, ನಿಕ್ಕಿ ಪ್ರಧಾನ್‌, ಮೋನಿಕಾ, ನೇಹಾ ಗೋಯಲ್‌, ಲಿಲಿಮಾ ಮಿಂಜ್‌, ನಮಿತಾ ಟೋಪೊ, ವಂದನಾ ಕಟಾರಿಯಾ, ನವನೀತ್‌ ಕೌರ್‌, ಶರ್ಮಿಳಾದೇವಿ.

Advertisement

Udayavani is now on Telegram. Click here to join our channel and stay updated with the latest news.

Next