Advertisement

ತ್ರಿರಾಷ್ಟ್ರ ವನಿತಾ ಹಾಕಿ ಕೂಟ : ಭಾರತಕ್ಕಿಂದು ನ್ಯೂಜಿಲ್ಯಾಂಡ್‌ ಸವಾಲು

09:38 AM Dec 04, 2019 | Team Udayavani |

ಕ್ಯಾನ್‌ಬೆರಾ: ಭಾರತೀಯ ಜೂನಿಯರ್‌ ವನಿತಾ ಹಾಕಿ ತಂಡವು ಬುಧವಾರದಿಂದ ಆರಂಭವಾಗುವ ತ್ರಿರಾಷ್ಟ್ರ ವನಿತಾ ಹಾಕಿ ಕೂಟದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡದ ಸವಾಲನ್ನು ಎದುರಿಸಲಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್‌ ಅಲ್ಲದೇ ಆತಿಥೇಯ ಆಸ್ಟ್ರೇಲಿಯ ಈ ಕೂಟದಲ್ಲಿ ಭಾಗವಹಿಸಲಿರುವ ಇನ್ನೊಂದು ತಂಡವಾಗಿದೆ.

Advertisement

ಬಲ್ಜೀತ್‌ ಸೈನಿ ಅವರಿಂದ ತರಬೇತಿ ಪಡೆದಿರುವ ಭಾರತೀಯ ತಂಡವು ವಿಶ್ವದ ಎರಡು ಅಗ್ರ ತಂಡಗಳೆದುರು ಆಡುವ ಮೂಲಕ ಬಹಳಷ್ಟು ಅನುಭವ ಪಡೆಯುವ ಅವಕಾಶ ಪಡೆದಿದೆ.

ಭಾರತೀಯ ತಂಡವು ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯುವ ಎಎಚ್‌ಎಫ್ ವನಿತಾ ಜೂನಿಯರ್‌ ಏಶ್ಯಕಪ್‌ನಲ್ಲಿ ಭಾಗವಹಿಸಲಿದೆ. ಹೀಗಾಗಿ ಈ ಕೂಟದಲ್ಲಿ ಆಟಗಾರ್ತಿಯರು ಪರಿ ಪೂರ್ಣವಾಗಿ ತೊಡಗಿಸಿಕೊಂಡು ಆಟದ ಸೂಕ್ಷ್ಮಗಳನ್ನು ತಿಳಿಯಲ್ಲಿ ಎಂಬ ನಿರೀಕ್ಷೆಯನ್ನು ಸೈನಿ ಇಟ್ಟು ಕೊಂಡಿದ್ದಾರೆ.

ಉತ್ತಮ ಪರೀಕ್ಷೆ: ಸೈನಿ
ಕಳೆದ ಮೂರು ನಾಲ್ಕು ವರ್ಷಗಳಲ್ಲಿ ನಾವು ಯಾವುದೇ ಕೂಟಗಳಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಿಲ್ಲ. ಹಾಗಾಗಿ ನಮ್ಮ ಪಂದ್ಯಕ್ಕಿಂತ ಮೊದಲು ನಡೆಯುವ ನ್ಯೂಜಿಲ್ಯಾಂಡ್‌-ಆಸ್ಟ್ರೇಲಿಯ ನಡುವಣ ಪಂದ್ಯವನ್ನು ಗಂಭೀರವಾಗಿ ವೀಕ್ಷಿಸಲಿದ್ದೇನೆ. ಅವರ ಆಟದ ಶೈಲಿಯನ್ನು ಗಮನಿಸಬೇಕಾಗಿದೆ. ಮತ್ತು ಅದರಂತೆ ನಮ್ಮ ಆಟದ ತಂತ್ರವನ್ನು ಯೋಚಿಸಬೇಕಾಗಿದೆ. ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯ ವಿರುದ್ಧ ನಡೆಯುವ ಈ ನಾಲ್ಕು ಪಂದ್ಯಗಳು ನಿಜವಾಗಿಯೂ ನಮ್ಮ ಪಾಲಿಗೆ ಉತ್ತಮ ಪರೀಕ್ಷೆ ಆಗಿದೆ ಎಂದು ಸೈನಿ ಹೇಳಿದ್ದಾರೆ.

ನಮ್ಮಲ್ಲಿ ಒಳ್ಳೆಯ ಪ್ರತಿಭೆಯಿರುವ ಹಲವು ಆಟಗಾರ್ತಿಯರು ಇದ್ದಾರೆ. ಅವರಲ್ಲಿ ಕೆಲವು ಈಗಾಗಲೇ ಸೀನಿ ಯರ್‌ ತಂಡವನ್ನು ಪ್ರತಿನಿಧಿ ಸಿದ್ದಾರೆ. ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಆಟಗಾರ್ತಿ ಯರು ಛಲದಿಂದ ಆಡುವ ನಿರೀಕ್ಷೆಯಿದೆ ಎಂದು ಸೈನಿ ತಿಳಿಸಿದರು.

Advertisement

ಭಾರತವು ಡಿ. 5ರಂದು ಆಸ್ಟ್ರೇಲಿಯ, ಡಿ. 7ರಂದು ನ್ಯೂಜಿಲ್ಯಾಂಡ್‌ ಮತ್ತು ಡಿ. 8ರಂದು ಮತ್ತೆ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next