Advertisement

Hockey ಭಾರತದ ಗುರಿ ಏಷ್ಯನ್‌ ಗೇಮ್ಸ್‌  ಚಿನ್ನ

11:53 PM Aug 13, 2023 | Team Udayavani |

ಚೆನ್ನೈ: ಮುಂಬರುವ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸಲು ಏಷ್ಯನ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆಲ್ಲಲು ಭಾರತ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಮಲೇಷ್ಯಾ ವಿರುದ್ಧದ ಅದ್ಭುತ ಗೆಲುವು ಬಹಳಷ್ಟು ಪ್ರಾಮುಖ್ಯ ಪಡೆಯಲಿದೆ ಎಂದು ಭಾರತ ತಂಡದ ಮುಖ್ಯ ಕೋಚ್‌ ಕ್ರೆಗ್‌ ಫುಲ್ಟನ್‌ ಹೇಳಿದ್ದಾರೆ.

Advertisement

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ 1-3 ಗೋಲಿನ ಹಿನ್ನಡೆಯಲ್ಲಿದ್ದರೂ ಅದ್ಭುತವಾಗಿ ಹೋರಾಡಿದ ಭಾರತ ತಂಡವು 4-3 ಗೋಲುಗಳಿಂದ ಮಲೇಷ್ಯಾವನ್ನು ಸೋಲಿಸಿ ದಾಖಲೆ ನಾಲ್ಕನೇ ಬಾರಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಕೂಟದ ಪ್ರಶಸ್ತಿ ಜಯಿಸಿತ್ತು.

ಇಂತಹ ಫೈನಲ್‌ ಹೋರಾಟವು ಏಷ್ಯನ್‌ ಗೇಮ್ಸ್‌ ನಂತಹ ಕೂಟಗಳ ವೇಳೆ ನೆರವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಫ‌ುಲ್ಟನ್‌ ಅವರು ಫೈನಲ್ಸ್‌ ಯಾವಾಗಲೂ ತೀವ್ರ ಸ್ಪರ್ಧೆಯಿಂದ ಕೂಡಿರುತ್ತದೆ. ಅದು ಯಾವತ್ತೂ ಆರಾಮವಾಗಿ ನಡೆಯುವ ಸಾಧ್ಯತೆಯಿಲ್ಲ. ಕೆಲವೊಮ್ಮೆ ಇದು ಶೂಟೌಟ್‌ವರೆಗೂ ಹೋಗಬಹುದು. ಹೀಗಾಗಿ ಫೈನಲ್‌ ರೋಚಕವಾಗಿ ಸಾಗಿದರೆ ಉತ್ತಮ ಮತ್ತು ಇಂತಹ ಹೋರಾಟ ಪ್ರಾಮುಖ್ಯ ಪಡೆಯಲಿದೆ ಎಂದರು.ಏಷ್ಯನ್‌ ಗೇಮ್ಸ್‌ ಸೆ. 23ರಿಂದ ಆರಂಭವಾಗಲಿದೆ.

ಸೆಮಿಫೈನಲ್‌ನಲ್ಲಿ ನಾವು ಜಪಾನ್‌ ತಂಡವನ್ನು ಅಮೋಘವಾಗಿ ಸೋಲಿಸಿದ್ದೆವು. ಮಲೇಷ್ಯಾ ವಿರುದ್ಧ ನಾವು ಆರಂಭದಲ್ಲಿ ಉತ್ತಮವಾಗಿ ಆಡಿರಲಿಲ್ಲ. ಆದರೆ ಪಂದ್ಯ ಸಾಗುತ್ತಿದ್ದಂತೆ ಪಂದ್ಯದಲ್ಲಿ ಹಿಡಿತ ಸಾಧಿಸಿದ ಭಾರತ ಅಂತಿಮ ಹಂತದಲ್ಲಿ ಅದ್ಭುತವಾಗಿ ಆಡಿ ಜಯಭೇರಿ ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next