Advertisement
0-1 ಹಿನ್ನಡೆಯಲ್ಲಿದ್ದ ಭಾರತ, ಈ ಒತ್ತಡವನ್ನೆಲ್ಲ ಮೆಟ್ಟಿ ನಿಂತು ಗೆಲುವು ಸಾಧಿಸಿ ಮೆರೆದದ್ದೊಂದು ವಿಶೇಷ. ಶರ್ಮಿಳಾದೇವಿ ಮತ್ತು ಗುರ್ಜಿತ್ ಸಿಂಗ್ ಭಾರತದ ಗೆಲುವಿನ ರೂವಾರಿಗಳಾಗಿ ಮೂಡಿಬಂದರು.
ಅಂತಿಮ ಕ್ವಾರ್ಟರ್ ಆಟ ವಿಭಿನ್ನವಾಗಿತ್ತು. ಪಂದ್ಯದ ಮೂರೂ ಗೋಲುಗಳು ಈ ಅವಧಿಯಲ್ಲೇ ಸಿಡಿಯಲ್ಪಟ್ಟವು. 46ನೇ ನಿಮಿಷದಲ್ಲಿ ಎಮಿಲಿ ಡಿಫ್ರಂಡ್ ಖಾತೆ ತೆರೆದು ಬ್ರಿಟನ್‌ಗೆ ಮುನ್ನಡೆ ತಂದಿತ್ತರು. ಆದರೆ ಕೆಲವೇ ಹೊತ್ತಿನಲ್ಲಿ ಶರ್ಮಿಳಾದೇವಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಮುಂದಿನದು ಗುರ್ಜಿತ್ ಸಿಂಗ್ ಅವರ ಪರಾಕ್ರಮ. ಹೀಗೆ, ಪಂದ್ಯದ ಮೂರೂ ಗೋಲುಗಳು ಕೊನೆಯ 14 ನಿಮಿಷಗಳಲ್ಲಿ ಸಿಡಿಯಲ್ಪಟ್ಟವು.
ಸರಣಿಯ 2ನೇ ಪಂದ್ಯ ರವಿವಾರ ನಡೆಯಲಿದೆ.
Related Articles
ಎರಡೂ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದವು. ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯ ಕ್ವಾರ್ಟರ್‌ನಲ್ಲಿ ಭಾರತ ಹಿಡಿತ ಸಾಧಿಸಿತು. ಆದರೆ 2 ಪೆನಾಲ್ಟಿ ಕಾರ್ನರ್‌ಗಳನ್ನು ಕೈಚೆಲ್ಲಿತು. ಎದುರಾಳಿ ಕೀಪರ್ ಮ್ಯಾಡ್ಡಿ ಹಿಂಚ್ ಇದನ್ನು ತಡೆಯುವಲ್ಲಿ ಯಶಸ್ವಿಯಾದರು. ಬಳಿಕ ಇಂಗ್ಲೆಂಡ್ ಅವಕಾಶವೊಂದಕ್ಕೆ ಭಾರತದ ಗೋಲ್ ಕೀಪರ್ ಸವಿತಾ ಪೂನಿಯಾ ತಡೆಯಾದರು. ಮೊದಲರ್ಧ ಗೋಲಿಲ್ಲದೆ ಮುಗಿಯಿತು. 3ನೇ ಕ್ವಾರ್ಟರ್‌ನಲ್ಲೂ ಗೋಲಿನ ಬರಗಾಲ ಮುಂದುವರಿಯಿತು.
Advertisement