Advertisement

Hockey India League Auction; ಹರ್ಮನ್‌ಪ್ರೀತ್‌ ಸಿಂಗ್‌ ದುಬಾರಿ ಆಟಗಾರ

01:01 AM Oct 14, 2024 | Team Udayavani |

ಹೊಸದಿಲ್ಲಿ: ಹಾಕಿ ಇಂಡಿಯಾ ಲೀಗ್‌ (ಎಚ್‌ಐಎಲ್‌)ನ ನೂತನ ಆವೃತ್ತಿಗಾಗಿ ರವಿವಾರ ಹೊಸದಿಲ್ಲಿ ಯಲ್ಲಿ ನಡೆದ ಮೊದಲ ದಿನದ ಹರಾಜಿನಲ್ಲಿ, ಭಾರತ ರಾಷ್ಟ್ರೀಯ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ದುಬಾರಿ ಆಟಗಾರರಾಗಿ ಕಾಣಿಸಿಕೊಂಡರು. ಅವರು 78 ಲಕ್ಷ ರೂ.ಗೆ ಸೂರ್ಮ ಹಾಕಿ ಕ್ಲಬ್‌ನ ಪಾಲಾದರು.

Advertisement

ಎರಡನೇ ಅತೀ ದುಬಾರಿ ಆಟಗಾರರೆಂದರೆ ಅಭಿಷೇಕ್‌. ಅವರು 72 ಲಕ್ಷ ರೂ.ಗೆ ಬೆಂಗಾಲ್‌ ಟೈಗರ್ ಸೇರಿಕೊಂಡಿದ್ದಾರೆ. 3ನೇ ದುಬಾರಿ ಆಟಗಾರರಾಗಿ ಹಾರ್ದಿಕ್‌ ಸಿಂಗ್‌, 70 ಲಕ್ಷಕ್ಕೆ ಯುಪಿ ರುದ್ರಾಸ್‌ ಫ್ರಾಂಚೈಸಿಯ ಪಾಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next