Advertisement
ಈ ಗೆಲುವಿನಿಂದ ಭಾರತ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು. ಬುಧವಾರ ನಡೆಯುವ ಫೈನಲ್ ಹೋರಾಟದಲ್ಲಿ ಭಾರತವು ಅಗ್ರಸ್ಥಾನಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಹಿಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ 1-2 ಗೋಲುಗಳಿಂದ ಶರಣಾಗಿದ್ದ ಭಾರತ ಫೈನಲ್ನಲ್ಲಿ ಸೇಡು ತೀರಿಸಿಕೊಳ್ಳಲು ಯೋಚಿಸುತ್ತಿದೆ.
Related Articles
Advertisement
ಪಂದ್ಯ ಆರಂಭವಾದ ಮೂರನೇ ನಿಮಿಷದಲ್ಲಿ ನೀಲಕಂಠ ಶರ್ಮ ಫೀಲ್ಡ್ ಗೋಲು ಬಾರಿಸಿ ಶುಭಾರಂಭಗೈದರು. ಈ ಮುನ್ನಡೆಯಿಂದ ಉತ್ಸಾಹಭರಿತಗೊಂಡ ಭಾರತೀಯರು ಜಪಾನ್ ರಕ್ಷಣಾ ಆಟಗಾರರಿಗೆ ಒತ್ತಡ ಹೇರುತ್ತ ಹೋದರು. ಗುರ್ಜಾಂತ್ ಸಿಂಗ್ ಗೋಲು ಹೊಡೆಯುವ ಪ್ರಯತ್ನ ನಡೆಸಿದರೂ ಆದು ಹೊರಗೆ ಹೋಯಿತು.
ಏಳನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ನೀಲಮ್ ಸಂಜೀಪ್ ಅದ್ಭುತ ಹೊಡೆತದ ಮೂಲಕ ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆ ದೊರಕಿಸಿಕೊಟ್ಟರು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 3-0 ಮುನ್ನಡೆಯಲ್ಲಿತ್ತು.
ದ್ವಿತೀಯ ಕಾರ್ಟರ್‌ನಲ್ಲೂ ಭಾರತೀಯರು ಪ್ರಾಬಲ್ಯ ಮೆರೆದರು. ಜರ್ಮನ್‌ಪ್ರೀತ್ ಸಿಂಗ್ ಮತ್ತು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಹೊಡೆಯುವ ಪ್ರಯತ್ನವನ್ನು ಜಪಾನ್ ಗೋಲ್ಕೀಪರ್ ತಕಾಶಿ ಯೊಶಿಕಾವ ಅದ್ಭುತವಾಗಿ ರಕ್ಷಿಸಿದರು.