Advertisement

Hockey ಫೈವ್ಸ್‌ ವಿಶ್ವಕಪ್‌: ಸಿಮ್ರನ್‌ಜೀತ್‌, ರಜನಿ ನಾಯಕತ್ವ

01:14 AM Jan 01, 2024 | Team Udayavani |

ಹೊಸದಿಲ್ಲಿ: ಎಫ್ಐಎಚ್‌ ಹಾಕಿ ಫೈವ್ಸ್‌ ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡಗಳ ನಾಯಕರನ್ನು ಹೆಸರಿಸಲಾಗಿದೆ. ಪುರುಷರ ತಂಡವನ್ನು ಸಿಮ್ರನ್‌ಜಿàತ್‌ ಸಿಂಗ್‌ ಹಾಗೂ ಮಹಿಳಾ ತಂಡವನ್ನು ರಜನಿ ಎತಿಮಾರ್ಪು ಮುನ್ನಡೆಸಲಿದ್ದಾರೆ.
ವನಿತಾ ತಂಡಕ್ಕೆ ಮಹಿಮಾ ಚೌಧರಿ, ಪುರುಷರ ತಂಡಕ್ಕೆ ಮನ್‌ದೀಪ್‌ ಮೋರ್‌ ಉಪನಾಯಕರಾಗಿದ್ದಾರೆ.

Advertisement

ಮಸ್ಕತ್‌ನಲ್ಲಿ ಪಂದ್ಯಾವಳಿ
ಪಂದ್ಯಾವಳಿ ಮಸ್ಕತ್‌ನಲ್ಲಿ ನಡೆಯ ಲಿದೆ. ಮೊದಲು ವನಿತಾ ವಿಶ್ವಕಪ್‌ (ಜ. 24-27), ಬಳಿಕ ಪುರುಷರ ವಿಶ್ವಕಪ್‌ (ಜ. 28-31) ನಡೆಯಲಿದೆ.

“ಸಿ‘ ವಿಭಾಗ
ಭಾರತದ ವನಿತಾ ತಂಡ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ನಮೀಬಿಯಾ, ಪೋಲೆಂಡ್‌ ಮತ್ತು ಯುಎಸ್‌ಎ ಉಳಿದ 3 ತಂಡಗಳು. ಪುರುಷರ ತಂಡ ಕೂಡ “ಬಿ’ ವಿಭಾಗದಲ್ಲಿದೆ. ಉಳಿದ ತಂಡಗಳೆಂದರೆ ಈಜಿಪ್ಟ್, ಜಮೈಕಾ ಮತ್ತು ಸ್ವಿಜರ್‌ಲ್ಯಾಂಡ್‌.

Advertisement

Udayavani is now on Telegram. Click here to join our channel and stay updated with the latest news.

Next