Advertisement

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

10:28 PM Oct 28, 2024 | Team Udayavani |

ತಿರುಪತಿ: ದೇಶದ ಹಲವು ವಿಮಾನಗಳು, ಪ್ರತಿಷ್ಠಿತ ಹೊಟೇಲ್‌ಗ‌ಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ಈಗ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿನ  ಇಸ್ಕಾನ್‌ ದೇವಾಲಯಕ್ಕೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ.

Advertisement

ಈ ಸಂದೇಶದಲ್ಲಿ ಐಸಿಸ್‌ ಉಗ್ರರು ದೇವಾಲಯವನ್ನು ಸ್ಫೋಟಿಸಲಿದ್ದಾರೆ ಎಂದು ತಿಳಿಸಲಾಗಿದೆ. ಈ ಸಂದೇಶ ಬಂದ ಬೆನ್ನಲ್ಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಾಂಬ್‌ ನಿಷ್ಕ್ರಿಯ ದಳವೂ ಸ್ಥಳಕ್ಕಾಗಮಿಸಿ ಎಲ್ಲೆಡೆ ಶೋಧ ನಡೆಸಿದೆ. ಆದರೆ, ಯಾವುದೇ ಸ್ಫೋಟಕ, ಅನುಮಾನಾಸ್ಪದ ವಸ್ತುಗಳು ಲಭ್ಯವಾಗಿಲ್ಲ. ಇದರೊಂದಿಗೆ ತಿರುಪತಿಯಲ್ಲಿ ಕಳೆದ 3 ದಿನಗಳಿಂದ ಬಂದ 4ನೇ ಬಾಂಬ್‌ ಬೆದರಿಕೆ ಇದಾಗಿದೆ. ಶನಿವಾರ 2 ಹೊಟೇಲ್‌ಗ‌ಳಿಗೂ ಬಾಂಬ್‌ ಬೆದರಿಕೆ ಬಂದಿತ್ತು.

ಮತ್ತೆ 60 ವಿಮಾನಗಳಿಗೆ ಬಾಂಬ್‌ ಬೆದರಿಕೆ
ಹೊಸದಿಲ್ಲಿ: ದೇಶದಲ್ಲಿ ಸೋಮವಾರವೂ 60ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಇದರೊಂದಿಗೆ ಕಳೆದ 15 ದಿನಗಳಲ್ಲಿ 415 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಂತಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳ ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ 15 ದಿನಗಳಿಂದ ಸತತವಾಗಿ ಹುಸಿ ಬಾಂಬ್‌ ಬೆದರಿಕೆಗಳು ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next