Advertisement
ಜತೆಗೆ, ರಾಜಕೀಯ ಪಕ್ಷಗಳ ಮುಖಂಡರು ಅಂಥ ಔಷಧಗಳನ್ನು ಸಂಗ್ರಹಿಸಿಟ್ಟಿದ್ದರೆ, ಕೂಡಲೇ ಅದನ್ನು ದೆಹಲಿ ಆರೋಗ್ಯ ಇಲಾಖೆಗೆ ವಾಪಸ್ ನೀಡಬೇಕು ಎಂದು ನ್ಯಾ.ವಿಪಿನ್ ಸಾಂ ಮತ್ತು ನ್ಯಾ.ಜಸ್ಮೀರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಸೋಮವಾರ ತಾಕೀತು ಮಾಡಿದೆ.
Related Articles
ಕಾಂಗ್ರೆಸ್ ನಾಯಕ, ಕನ್ನಡಿಗ ಬಿ.ವಿ.ಶ್ರೀನಿವಾಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಬಳಿ ಯಾವುದೇ ಔಷಧ ಅಥವಾ ಆಕ್ಸಿಜನ್‌ನ ದಾಸ್ತಾನು ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಅಧಿಕಾರಿಗಳು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಶ್ರೀನಿವಾಸ್ ಬಿ.ವಿ, ಹರೀಶ್ ಖುರಾನಾ, ಸಂಸದ ಗೌತಮ್ ಗಂಭೀರ್, ಆಪ್‌ನ ದಿಲೀಪ್ ಪಾಂಡೆ, ಮಾಜಿ ಸಂಸದ ಶಾಹಿದ್ ಸಿದ್ಧಿಕಿ ಅವರನ್ನು ವಿಚಾರಣೆ ನಡೆಸಲಾಗಿತ್ತು.
Advertisement