Advertisement
ನೀರಾವರಿ ತಜ್ಞ ದಿ.ಡಾ.ಜಿ.ಎಸ್.ಪರಮಶಿವಯ್ಯ ವರದಿ ಆಧರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಾಗಿ ಅನೇಕ ಹೋರಾಟಗಾರರು ವಿಭಿನ್ನ ರೀತಿಯಲ್ಲಿ ಹೋರಾಟನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದಿದ್ದರು.
Related Articles
Advertisement
ಇದನ್ನೂ ಓದಿ : ಯೋಗೇಶ್ವರ್ ನನ್ನು ಮಂತ್ರಿ ಮಾಡಲು ಸಿಎಂಗೆ ಆತುರ ಯಾಕೆ? ವಿಶ್ವನಾಥ್ ಪ್ರಶ್ನೆ
ಪಕ್ಷಾತೀತ ಹೋರಾಟಕ್ಕೆಸಂದ ಫಲ : ಜಿಲ್ಲೆಗೆ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ನೀಡಿರುವ ವರದಿ ಆಧರಿಸಿ ಶಾಶ್ವತ ನೀರಾವರಿ ಜಾರಿಗೊಳಿಸಲು ದಿ.ಜೆ.ವೆಂಕಟಪ್ಪ, ಮುಳಬಾಗಿಲು ವೆಂಕಟರಾಮಯ್ಯ, ಬಾಗೇಪಲ್ಲಿ ಮಾಜಿ ಶಾಸಕಜಿ.ವಿ.ಶ್ರೀರಾಮರೆಡ್ಡಿ, ದಿ.ಸಾದಲಿ ಜಯಪ್ರಕಾಶ್, ದಿ.ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಮಳ್ಳೂರು ಹರೀಶ್, ರೈತ ಸಂಘದ ಭಕ್ತರಹಳ್ಳಿ ಭೈರೇಗೌಡ, ಸಹಿತ ವಿವಿಧ ಸಂಘಟನೆಗಳು, ವಿವಿಧ ಪಕ್ಷಗಳ ಮುಖಂಡರು,ಕಾರ್ಯಕರ್ತರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಹೋರಾಟ ನಡೆಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಎತ್ತಿನಹೊಳೆ, ಕೃಷ್ಣ ನದಿ ನೀರು ಹರಿಸಲು ಒತ್ತಾಯ :
ರೈತ ಸಂಘದ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಮತ್ತು ಅನೇಕ ಹೋರಾಟಗಾರರ ವಿಭಿನ್ನ ಹೋರಾಟಗಳಿಂದ ಪ್ರಥಮ ಹಂತದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಮತ್ತು ಇದೀಗ ಶಿಡ್ಲಘಟ್ಟ ತಾಲೂಕಿನಕೆರೆಗಳಿಗೆ ಎಚ್.ಎನ್.ವ್ಯಾಲಿಯ ನೀರು ಹರಿದಿದ್ದು,ಅದಕ್ಕಾಗಿ ಸರ್ಕಾರಕ್ಕೆಕೃತಜ್ಞತೆ ಸಲ್ಲಿಸಿ ಜಿಲ್ಲೆಗೆ ಎತ್ತಿನಹೊಳೆ ಮತ್ತುಕೃಷ್ಣ ನದಿ ನೀರು ಹರಿಸುವ ಮೂಲಕ ರೈತರು ಮತ್ತು ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಸಂತಸ : ಶಿಡ್ಲಘಟ್ಟ ತಾಲೂಕಿನಲ್ಲಿ ಹೆಚ್.ಎನ್.ವ್ಯಾಲಿ ಯೋಜನೆಯ ಮೂಲಕ ನೀರು ಹರಿದಿದ್ದರಿಂದ ಸಂತಸಗೊಂಡ ರೈತರು ಹಾಗೂ ಗ್ರಾಮಸ್ಥರಮನದಲ್ಲಿ ಸಂತಸ ಮನೆ ಮಾಡಿತ್ತು. ಯುವಕರು ಮತ್ತು ಬಾಲಕರುಕೆರೆಯ ನೀರಿನಲ್ಲಿಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಒಟ್ಟಾರೆ ನೀರು ಬಂದಿದ್ದರಿಂದ ಹಬ್ಬದ ವಾತಾವರಣ ಕಂಡುಬಂದಿತ್ತು.
– ತಮೀಮ್ ಪಾಷ, ಎಂ.ಎ