ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾ.ಮ. ಹರೀಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೂರು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿರುವ ನಿರ್ಮಾಪಕ ಸಾ.ರಾ. ಗೋವಿಂದು ಮತ್ತು ಭಾ.ಮ. ಹರೀಶ್ ಅವರು ಅಧ್ಯಕ್ಷ ಸ್ಥಾನದ ಚುನಾವಣೆಯ ಕಣದಲ್ಲಿದ್ದರು. ಅಂತಿಮವಾಗಿ ಭಾ.ಮ. ಹರೀಶ್ ಗೆಲುವು ಸಾಧಿಸಿದ್ದಾರೆ.
ಭಾ.ಮ. ಹರೀಶ್ ಅವರಿಗೆ 781 ಮತಗಳು ಬಿದ್ದರೆ, ಸಾ.ರಾ. ಗೋವಿಂದು ಅವರಿಗೆ 371 ಮತಗಳು ಲಭ್ಯವಾಗಿದೆ. ಈ ಮೂಲಕ 410 ವೋಟ್ಗಳ ಅಂತರದಿಂದ ಭಾ.ಮ.ಹರೀಶ್ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ಜೈ ಜಗದೀಶ್ ಹಾಗೂ ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ನಟ ಮುಖ್ಯಮಂತ್ರಿ ಚಂದ್ರು
Related Articles
ರಾಘವೇಂದ್ರ ರಾಜ್ಕುಮಾರ್, ನಟಿ ಲೀಲಾವತಿ, ವಿನೋದ್ ರಾಜ್, ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ನಟಿ ಶೃತಿ, ದಿನಕರ್ ತೂಗುದೀಪ, ನಟಿ ಜಯಮಾಲಾ, ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ಓಂ ಸಾಯಿ ಪ್ರಕಾಶ್ ಮೊದಲಾದವರು ಮತ ಚಲಾಯಿಸಿದ್ದರು.